ಜಿಲ್ಲಾ ಸುದ್ದಿ

ಪಶ್ಚಿಮದ ಅಂಧಾನುಕರಣೆ ಬೇಡ: ರಾಜ್ಯಪಾಲ

Guruprasad Narayana

ಬೆಂಗಳೂರು: ಕರ್ನಾಟಕದ ರಾಜ್ಯಪಾಲ ವಾಜುಭಾಯಿ ವಾಲಾ, ಪಶ್ಚಿಮದ ಅಂಧಾನುಕರಣೆಯ ಬದಲು ಭಾರತೀಯ ಸಂಸ್ಕೃತಿ ಮತ್ತು ತತ್ವದಲ್ಲಿ ಮುನ್ನಡೆಯುವ ಅಗತ್ಯ ಇದೆ ಎಂದಿದ್ದಾರೆ.

ನಗರದಲ್ಲಿ ಭಾನುವಾರ ದೂರದರ್ಶನ ಆಯೋಜಿಸಿದ್ದ ಸಭೆಯಲ್ಲಿ ಅವರು ಮಾತನಾಡಿದರು.

"ಪಶ್ಚಿಮದ ಅಂಧಾನುಕರಣೆಯಿಂದ ಅಡ್ಡ ಪರಿಣಾಮಗಳೇ ಹೆಚ್ಚು. ನಾವು ಭಾರತದ ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸುವತ್ತ ಕೆಲಸ ಮಾಡಬೇಕಿದೆ. ವಿಶ್ವದಾದ್ಯಂತ ಭಾರತಕ್ಕೆ ಅತಿ ಹೆಚ್ಚು ಮಾನ್ಯತೆ ಇದೆ ಮತ್ತು ನಾವು ಭಾರತೀಯರು ಎಂಬ ಗುರುತನ್ನು ಕಳೆದುಕೊಳ್ಳಬಾರದು. ದೇಶದಲ್ಲಿ ಮಹಿಳೆಯರ ಸ್ಥಾನವೂ ಇನ್ನೂ ಎತ್ತರಕ್ಕೆ ಏರಬೇಕಿದೆ" ಎಂದಿದ್ದಾರೆ.

ಇದೆ ಸಂದರ್ಭದಲ್ಲಿ ವಾಲಾ ೧೦ ಜನರಿಗೆ ಹಾಗೂ ೨ ಸಂಸ್ಥೆಗಳಿಗೆ ಸಮಾಜಕ್ಕೆ ಸಲ್ಲಿಸಿದ ಸೇವೆಗಾಗಿ "ದೂರದರ್ಶನ ಚಂದನ ಪ್ರಶಸ್ತಿ" ಪ್ರಧಾನ ಮಾಡಿದರು.

SCROLL FOR NEXT