ಜಿಲ್ಲಾ ಸುದ್ದಿ

ವಿಜ್ಞಾನ ಸಾಹಿತಿ ರಾಭೂ ಇನ್ನಿಲ್ಲ

ಧಾರವಾಡ: ಕನ್ನಡದಲ್ಲಿ ವಿಜ್ಞಾನ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ ಪ್ರೊ.ರಾಜಶೇಖರ ಭೂಸನೂರಮಠ (77) ಶನಿವಾರ ತಡರಾತ್ರಿ ಹೃದಯಾಘಾತದಿಂದ ಇಹಲೋಕ ತ್ಯಜಿಸಿದರು.

`ರಾಭೂ' ಎಂದೇ ಖ್ಯಾತರಾದ ಪ್ರೊ. ರಾಜಶೇಖರ ಭೂಸನೂರಮಠ ಅವರನ್ನು ಕನ್ನಡದಲ್ಲಿ ವೈಜ್ಞಾನಿಕ ಕಥಾಸಾಹಿತ್ಯದ ಅಧಿಕೃತ ಜನಕರು ಎಂದೇ ಗುರುತಿಸಲಾಗುತ್ತದೆ. ಪ್ರಸಿದ್ಧ ಸಂಶೋಧಕ ಪ್ರೊ. ಸಂ.ಶಿ.ಭೂಸನೂರಮಠ ಪುತ್ರ ರಾಭೂ ಅವರು, ಕಾದಂಬರಿಕಾರ, ಕತೆಗಾರ, ನಾಟಕಕಾರ, ಪ್ರಬಂಧಕಾರ, ವಿಮರ್ಶಕ, ಭಾಷಾಂತರಕಾರ ರಾಗಿಯೂ ಸಾಹಿತ್ಯ ಲೋಕದಲ್ಲಿ ಚಿರಪರಿಚಿತರು. ಕನ್ನಡದಲ್ಲಿ 80 ಮತ್ತು ಇಂಗ್ಲಿಷಿನಲ್ಲಿ 20 ಪುಸ್ತಕಗಳು ಪ್ರಕಟವಾಗಿವೆ.

ಮಕ್ಕಳಿಗಾಗಿ ಕಥೆ, ಕಾದಂಬರಿ, ಕಾಮಿಕ್ಸ್ ಹೀಗೆ 15ಕ್ಕಿಂತ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ರಾಜ್ಯ ವಿಜ್ಞಾನ ಪರಿಷತ್ತಿನ ಸಂಸ್ಥಾಪಕ ಸದಸ್ಯರಾಗಿ ಆನಂತರ ರಾಜ್ಯ ಉಪಾಧ್ಯಕ್ಷರಾಗಿದ್ದ ಅವರು, ಅಮೆರಿಕನ್ ಬಯಾಗ್ರಾಫಿಕಲ್  ಇನ್‍ಸ್ಟಿಟ್ಯೂಟ್ ವತಿಯಿಂದ 1999ರಲ್ಲಿ ವರ್ಷದ ವ್ಯಕ್ತಿ, 2000ರಲ್ಲಿ ಯುನಿವರ್ಸಲ್ ಅವಾರ್ಡ್ ಆಫ್ ಅಕಂಪ್ಲಿಷಮೆಂಟ್ ಪ್ರಶಸ್ತಿ ಪಡೆದಿದ್ದಾರೆ.

SCROLL FOR NEXT