ಟಿ.ಎಂ. ವಿಜಯಭಾಸ್ಕರ್ 
ಜಿಲ್ಲಾ ಸುದ್ದಿ

ಬಿಬಿಎಂಪಿ ಆದಾಯ ಹೆಚ್ಚಳಕ್ಕೆ ಆದ್ಯತೆ: ವಿಜಯಭಾಸ್ಕರ್

ಜನರು ಬಿಬಿಎಂಪಿಯಲ್ಲಿ ಸುಧಾರಣೆ ಬಯಸುತ್ತಿದ್ದು, ಆದಾಯ ಹೆಚ್ಚಿಸುವ ಅಗತ್ಯವಿದೆ ಎಂದು ಬಿಬಿಎಂಪಿಗೆ ಶನಿವಾರ ಆಡಳಿತಾಧಿಕಾರಿಯಾಗಿ...

ಬೆಂಗಳೂರು: ಜನರು ಬಿಬಿಎಂಪಿಯಲ್ಲಿ ಸುಧಾರಣೆ ಬಯಸುತ್ತಿದ್ದು, ಆದಾಯ ಹೆಚ್ಚಿಸುವ ಅಗತ್ಯವಿದೆ ಎಂದು ಬಿಬಿಎಂಪಿಗೆ ಶನಿವಾರ ಆಡಳಿತಾಧಿಕಾರಿಯಾಗಿ ನೇಮಕಗೊಂಡ ಟಿ.ಎಂ.ವಿಜಯಭಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.

ಆಯುಕ್ತ ಎಂ.ಲಕ್ಷ್ಮಿನಾರಾಯಣ ಅವರು ವಿಜಯಭಾಸ್ಕರ್ ಅವರನ್ನು ಬಿಬಿಎಂಪಿಗೆ ಸ್ವಾಗತಿಸಿದರು. ಸರ್ಕಾರ ಆಡಳಿತಾಧಿಕಾರಿಯನ್ನಾಗಿ ನೇಮಿಸಿರುವುದು ಸಂತಸ ತಂದಿದೆ. ಇದು ಹೆಮ್ಮೆಯ ವಿಚಾರವಾಗಿದ್ದು, ಸರ್ಕಾರದ ನಿರೀಕ್ಷೆಗೂ ಮೀರಿ ಕೆಲಸ ಮಾಡುತ್ತೇನೆ. ಜನರು ಬಿಬಿಎಂಪಿಯಲ್ಲಿ ಬದಲಾವಣೆ ಬಯಸಿದ್ದು, ಹೆಚ್ಚಿನ ಆದಾಯ ತರುವ ವ್ಯವಸ್ಥೆ ಸುಧಾರಣೆ ಮಾಡಬಹುದು. ಹೆಚ್ಚಿನ ಆದಾಯ ತರುವುದು ಹಾಗೂ ವೆಚ್ಚಕ್ಕೆ ಕಡಿವಾಣ ಹಾಕುವ ಮೂಲಕ ಬದಲಾವಣೆ ತರಬಹುದು. ಬಿಬಿಎಂಪಿಯಲ್ಲಿನ ಜನರ ಸಮಸ್ಯೆಗಳನ್ನು ಆಲಿಸಲು ಪ್ರತ್ಯೇಕವಾದ ವ್ಯವಸ್ಥೆಯಿದೆ. ಸಾರ್ವಜನಿಕರು ನೇರವಾಗಿ ಭೇಟಿಯಾಗಿ ಸಮಸ್ಯೆಗಳನ್ನು ಹೇಳಿಕೊಳ್ಳಲು ಶೀಘ್ರದಲ್ಲಿ ಅವಕಾಶ ನೀಡಲಿದ್ದೇನೆ ಎಂದು ತಿಳಿಸಿದರು.

ವರ್ಗಾವಣೆಯಾದವರು ಯಾರ್ಯಾರು?
ಬೆಂಗಳೂರು:
ಬಿಬಿಎಂಪಿ ವಿಸರ್ಜನೆಯಿಂದ ಆಡಳಿತಾ„ಕಾರಿಯಾಗಿ ಟಿ.ಎಂ. ವಿಜಯಭಾಸ್ಕರ್ ಹಾಗೂ ಆಯುಕ್ತರಾಗಿ ಜಿ. ಕುಮಾರನಾಯಕ್ ಅವರನ್ನು ಸರ್ಕಾರ ನೇಮಿಸಿದ್ದು, ಇವರೊಂದಿಗೆ ನಾಲ್ಕೈದು ಐಎಎಸ್ ಅಧಿಕಾರಿಗಳ ವಗಾರ್ವಣೆಯಾಗಿದೆ.
-ಟಿ.ಎಂ. ವಿಜಯಭಾಸ್ಕರ್- ಆಡಳಿತಾಧಿಕಾರಿ, ಬಿಬಿಎಂಪಿ.
- ಜಿ. ಕುಮಾರ್ ನಾಯಕ್- ಆಯುಕ್ತ, ಬಿಬಿಎಂಪಿ.
-ಪಂಕಜ್‍ಕುಮಾರ್ ಪಾಂಡೆ- ವ್ಯವಸ್ಥಾಪಕ ನಿರ್ದೇಶಕ, ಕೆಪಿಟಿಸಿಎಲ್.
-ಅಭಿರಾಮ್ ಜಿ. ಶಂಕರ್- ಉಪ ಕಾರ್ಯದರ್ಶಿ, (ಡಿಪಿಎಆರ್ ಸೇವೆಗಳು-2)
-ನಂಜುಂಡೇಗೌಡ (ಕೆಎಎಸ್)- ಕೊಡಗು ಜಿಲ್ಲೆ ಮಡಿಕೇರಿ ಉಪವಿಭಾಗಾ„ಕಾರಿ.

ನಾಳೆ ವಿಧೇಯಕ ಮಂಡನೆ
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸಭೆಯಲ್ಲಿ ಏ.20 ಸೋಮವಾರ ಬೆಳಗ್ಗೆ 11 ಗಂಟೆಗೆ 2015 ನೇ ಸಾಲಿನ ಕರ್ನಾಟಕ ನಗರಪಾಲಿಕೆಗಳ (ತಿದ್ದುಪಡಿ) ವಿಧೇಯಕವನ್ನು  ಮಂಡಿಸಲಿದ್ದಾರೆ ಎಂದು ವಿಧಾನಸಭೆ ಕಾರ್ಯದರ್ಶಿ ಓಂ. ಪ್ರಕಾಶ್ ತಿಳಿಸಿದ್ದಾರೆ. ಅದೇ ದಿನ ಮಧ್ಯಾಹ್ನ 2 ಗಂಟೆಗೆ ವಿಧಾನ ಪರಿಷತ್ ಸಮಾವೇಶಗೊಳ್ಳಲಿದೆ ಎಂದು ಪರಿಷತ್ ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಪಶ್ಚಿಮ ಬಂಗಾಳ ವೈದ್ಯಕೀಯ ವಿದ್ಯಾರ್ಥಿನಿ ಗ್ಯಾಂಗ್ ರೇಪ್ ಕೇಸ್: ಮೂವರ ಬಂಧನ

ಯುದ್ಧ ತೀವ್ರ: ಪಾಕಿಸ್ತಾನದ ಏರ್ ಸ್ಟ್ರೈಕ್ ಗೆ ಅಫ್ಘಾನಿಸ್ತಾನದಿಂದ ಕ್ಷಿಪಣಿ ದಾಳಿ ಉತ್ತರ

20 ವರ್ಷ ಸಾಕಿ ಬೆಳೆಸಿದ 'ಅಶ್ವತ್ಥ'ಕ್ಕೆ ಕಿಡಿಗೇಡಿಗಳ ಕೊಡಲಿ ಪೆಟ್ಟು, ಬಿಕ್ಕಿ ಬಿಕ್ಕಿ ಅತ್ತ 'ವೃಕ್ಷಮಾತೆ', ಇಬ್ಬರ ಬಂಧನ, video viral

2nd Test: ವಿಂಡೀಸ್ ವಿರುದ್ಧ ಕುಲದೀಪ್ ಯಾದವ್ ಭರ್ಜರಿ ಬೌಲಿಂಗ್, ವಿಶ್ವ ದಾಖಲೆ

2nd Test, Day 3: ಮೊದಲ ಇನ್ನಿಂಗ್ಸ್ ನಲ್ಲಿ 248 ರನ್ ಗೆ ವಿಂಡೀಸ್ ಆಲೌಟ್, ಫಾಲೋಆನ್ ಹೇರಿದ ಭಾರತ

SCROLL FOR NEXT