ಟೋಲ್ ಗಲಾಟೆಗೆ ಗ್ರಾಪಂ ಸದಸ್ಯನೇ ಕಾರಣ; ಸಿಸಿ ಕ್ಯಾಮೆರಾ ದೃಶ್ಯಾವಳಿ ಬಿಡುಗಡೆ ಮಾಡಿದ ಸಂಸ್ಥೆ 
ಜಿಲ್ಲಾ ಸುದ್ದಿ

ಟೋಲ್ ಗಲಾಟೆಗೆ ಗ್ರಾಪಂ ಸದಸ್ಯನೇ ಕಾರಣ; ಸಿಸಿ ಕ್ಯಾಮೆರಾ ದೃಶ್ಯಾವಳಿ ಬಿಡುಗಡೆ ಮಾಡಿದ ಸಂಸ್ಥೆ

ಹೊಸಕೋಟೆ ಸಮೀಪ ಭಾನುವಾರ ಟೋಲ್ ಗೇಟ್ ನಲ್ಲಿ ನಡದೆ ಗಲಾಟೆ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಟೋಲ್ ಸಿಬ್ಬಂದಿ ಪಾಸ್ ತೋರಿಸಿ ಎಂದು ಕೇಳಿದಕ್ಕೆ ಗ್ರಾಮ ಪಂಚಾಯತ್ ಸದಸ್ಯ ನಾರಾಯಣಸ್ವಾಮಿ ಅವರೇ ಮೊದಲು ಜಗಳ ಮಾಡಿದ್ದು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ...

ಬೆಂಗಳೂರು: ಹೊಸಕೋಟೆ ಸಮೀಪ ಭಾನುವಾರ ಟೋಲ್ ಗೇಟ್ ನಲ್ಲಿ  ನಡದೆ ಗಲಾಟೆ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಟೋಲ್ ಸಿಬ್ಬಂದಿ ಪಾಸ್ ತೋರಿಸಿ ಎಂದು ಕೇಳಿದಕ್ಕೆ ಗ್ರಾಮ ಪಂಚಾಯತ್ ಸದಸ್ಯ ನಾರಾಯಣಸ್ವಾಮಿ ಅವರೇ ಮೊದಲು ಜಗಳ ಮಾಡಿದ್ದು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಈ ಸಂಬಂಧ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿರುವ ಟೋಲ್ ನಿರ್ವಹಿಸುತ್ತಿರುವ ಲ್ಯಾನ್ಕೊ ಸಂಸ್ಥೆ ವ್ಯವಸ್ಥಾಪಕ ಶ್ರೀಧರ್, ನಿನ್ನೆ ನಡೆದ ಜಗಳಕ್ಕೆ ಸ್ಥಳೀಯರೇ ಕಾರಣ. ಟೋಲ್ ಸಿಬ್ಬಂದಿ ಅಲ್ಲ ಎಂದು ಹೇಳಿದ್ದಾರೆ. ಅಲ್ಲದೇ ಘಟನೆ ನಾರಾಯಣಸ್ವಾಮಿ ಅವರಿಂದಲೇ ಪ್ರಾರಂಭವಾಗಿದೆ ಎನ್ನಲು ಸಿಸಿ ಕ್ಯಾಮೆರಾ ದೃಶ್ಯ ಬಿಡುಗಡೆ ಮಾಡಿದ್ದಾರೆ. ಟೋಲ್ ಗೇಟ್‍ನಲ್ಲಿ ಆರೇಳು ಕಡೆ ಅಳವಡಿಸಿರುವ ಸಿಸಿ ಕ್ಯಾಮೆರಾಗಳಲ್ಲಿ ನಾರಾಯಣಸ್ವಾಮಿ ಅವರು ಮೊದಲು ಜಗಳ ಆರಂಭಿಸುತ್ತಾರೆ. ಬಳಿಕ ಅವರ ಮಗನನ್ನು ಕರೆಸಿಕೊಂಡು ಗಲಾಟೆ ನಡೆಸುತ್ತಿದ್ದಾರೆ.

ಮಾರಕ ಆಯುಧದಿಂದ ಸಿಸಿ ಕ್ಯಾಮೆರಾವನ್ನು ಧ್ವಂಸಗೊಳಿಸುತ್ತಿರುವುದು, ಟೋಲ್ ಬೂತ್‍ನಲ್ಲಿದ್ದ ಹಣವನ್ನು ಕದಿಯುತ್ತಿರುವುದು ಸ್ಪಷ್ಟವಾಗಿದೆ. ಹೀಗಾಗಿ, ಅವರ ವಿರುದ್ಧ ದೂರು ನೀಡಿರುವುದಾಗಿ ಲ್ಯಾನ್ಕೊ ಸಂಸ್ಥೆ ಹಿರಿಯ ಸಿಬ್ಬಂದಿ ತಿಳಿಸಿದ್ದಾರೆ.

ಪಾಸ್ ತೋರಿಸಿದ್ದರೆ ಗಲಾಟೆ ಆಗುತ್ತಿರಲಿಲ್ಲ:
ಪ್ರತಿ ನಿತ್ಯ ನಾನಾ ಪಾಳಿಗಳಲ್ಲಿ ಬೇರೆ ಬೇರೆಯವರು ಕೆಲಸ ಮಾಡುತ್ತಿರುತ್ತಾರೆ. ಹೀಗಾಗಿ, ರಸ್ತೆಯಲ್ಲಿ ಓಡಾಡುವ ಪ್ರತಿಯೊಬ್ಬರ ಪರಿಚಯ ಇರುವುದಿಲ್ಲ. ಗ್ರಾಪಂ ಸದಸ್ಯ ನಾರಾಯಣಸ್ವಾಮಿ ಬಂದಾಗ ಸಿಬ್ಬಂದಿ ಪಾಸ್ ಕೇಳಿದ್ದಾರೆ. ಪಾಸ್ ತೋರಿಸಬಹುದಿತ್ತು. ಅದರ ಬದಲು ಅನಗತ್ಯ ಜಗಳ ತೆಗೆದಿದ್ದಾರೆ. ಟೋಲ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ. ಈ ವೇಳೆ ಮಂಜುನಾಥ, ಗಲಾಟೆ ಮಾಡಿ ಕೈಯಿಂದ ಜೋರಾಗಿ ಟೋಲ್‍ಬೂತ್ ಗಾಜಿಗೆ ಹೊಡೆದಿದ್ದಾರೆ. ಇದರಿಂದಾಗಿ ಗಾಜು ಅವರ ಕೈಗೆ ಚುಚ್ಚಿತ್ತು. ಹೀಗೆ, ಇಡೀ ಘಟನೆಗೆ ಟೋಲ್ ಸಿಬ್ಬಂದಿ ಕಾರಣರಲ್ಲ ಎಂದು ಲ್ಯಾನ್ಕೊ ಸಿಬ್ಬಂದಿ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel