ಬೆಂಗಳೂರು: ಬಿಬಿಎಂಪಿ ತ್ರಿಭಜಿಸುವ ಉದ್ದೇಶದದಿಂದ ಸರ್ಕಾರ ತರಲು ಹೊರಟಿದ್ದ ಕರ್ನಾಟಕ ನಗರಪಾಲಿಕೆಗಳ (ತಿದ್ದುಪಡಿ) ವಿಧೇಯಕ 2015ನ್ನು ಪರಿಶೀಲಿಸಿ ಸದನಕ್ಕೆ ವರದಿ ಸಲ್ಲಿಸಲು ಸಮಿತಿ ರಚನೆಗೊಂಡಿದೆ. ಮೇಲ್ಮನೆ ಕಾರ್ಯವಿಧಾನ ಹಾಗೂ ನಡವಳಿಕೆಯ ನಿಯಮಾವಳಿಗಳ ನಿಯಮ 116ರ ರೀತ್ಯಾ ಪರಿಶೀಲನಾ ಸಮಿತಿಯನ್ನು ರಚಿಸಲಾಗಿದ್ದು, ಸಚಿವ ಹಾಗೂ ಮೇಲ್ಮನೆ ಸಭಾ ನಾಯಕ ಎಸ್. ಆರ್. ಪಾಟೀಲ್ ಸಮಿತಿಯ ಅಧ್ಯಕ್ಷರಾಗಿದ್ದಾರೆ. ಆರ್.ವಿ ವೆಂಕಟೇಶ್, ವೀರಣ್ಣ ಮತ್ತಿಕಟ್ಟಿ. ವಿ.ಎಸ್ ಉಗ್ರಪ್ಪ, ಕೆ.ಗೋವಿಂದರಾಜ್, ಐವಾನ್ ಡಿಸೋಜ, ವಿ. ಸೋಮಣ್ಣ, ರಾಮಚಂದ್ರ ಗೌಡ, ವಿಮಲಾಗೌಡ, ಆರ್.ಕೆ ಸಿದ್ಧರಾಮಣ್ಣ, ಅಶ್ವತ್ಥ ನಾರಾಯಣ, ಇ. ಕೃಷ್ಣಪ್ಪ, ಟಿಎ ಶರವಣ ಸಮಿತಿಯ ಸದಸ್ಯರಾಗಿದ್ದಾರೆ. ಇವರ ತಂಡ ವಿಧೇಯಕದಲ್ಲಿ ಸರ್ಕಾರ ಪ್ರಸ್ತಾಪಿಸಿದ ಅಂಶಗಳನ್ನು ಪರಾಮರ್ಶೆ ನಡೆಸಿ ಸದನಕ್ಕೆ ವರದಿ ನೀಡಲಾಗಿದೆ.