ಸಾಂದರ್ಭಿಕ ಚಿತ್ರ 
ಜಿಲ್ಲಾ ಸುದ್ದಿ

ಭಿಕ್ಷಾಟನೆಯಲ್ಲಿದ್ದ 194 ಮಕ್ಕಳ ರಕ್ಷಣೆ

ಮುಗ್ದ ಕಂದಮ್ಮಗಳನ್ನು ಕಂಕುಳಲ್ಲಿ ಹೊತ್ತುಕೊಂಡು ಬಿಸಿಲು, ಚಳಿ, ಮಳೆಯಲ್ಲಿ ಅವುಗಳ ಮುಖ ತೋರಿಸಿ ಸಾರ್ವಜನಿಕರಿಗೆ ಕರುಣೆ ಬರುವಂತೆ ಮಾಡಿ ....

ಬೆಂಗಳೂರು: ಮುಗ್ದ ಕಂದಮ್ಮಗಳನ್ನು ಕಂಕುಳಲ್ಲಿ ಹೊತ್ತುಕೊಂಡು ಬಿಸಿಲು, ಚಳಿ, ಮಳೆಯಲ್ಲಿ ಅವುಗಳ ಮುಖ ತೋರಿಸಿ ಸಾರ್ವಜನಿಕರಿಗೆ ಕರುಣೆ ಬರುವಂತೆ ಮಾಡಿ ಭಿಕ್ಷಾಟನೆ ಮಾಡುವ ಜಾಲಕ್ಕೆ ಕಡಿವಾಣ ಹಾಕಲು ಮುಂದಾಗಿರುವ ನಗರ ಪೊಲೀಸ್  `ಅಪರೇಷನ್ ಸ್ಮೈಲ್' ಹೆಸರಿನಲ್ಲಿ ಗುರುವಾರ ವಿಶೇಷ ಕಾರ್ಯಾಚರಣೆ ನಡೆಸಿದರು. ಗುರುವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಯೆವರೆಗೂ ವಗರದ ಪ್ರಮುಖ ಪ್ರದೇಶಗಳಲ್ಲಿ ಈ ಕಾರ್ಯಾಚರಣೆ ನಡೆಸಿ 194ಕ್ಕೂ ಅಧಿಕ ಮಕ್ಕಳನ್ನು ರಕ್ಷಿಸಲಾಗಿದೆ. ಈ 25 ಹಸುಗೂಸುಗಳು ಇವೆ. ಉಳಿದಂತೆ 65 ಹೆಂಗಸರು ಹಾಗೂ 8 ಗಂಡಸರು ಸೇರಿ 284 ಜನರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಕಾರ್ಯಾಚರಣೆ ವೇಳೆ ಭಿಕ್ಷುಕರನ್ನು ತೀವ್ರ
ವಿಚಾರಣೆಗೆ ಒಳಪಡಿಸಲಾಗುತ್ತಿದೆ. ಮಕ್ಕಳ ಪಾಲಕರು ಅವರೇ ಎಂಬದನ್ನು ಖಚಿತ ಪಡಿಸಿಕೊಳ್ಳಲು ಡಿಎನ್‍ಎ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ.

ಕೆಲ ತಿಂಗಳುಗಳ ಹಿಂದೆ ಗೃಹ ಸಚಿವ ಕೆ.ಜೆ. ಜಾರ್ಜ್ ಅವರು ಭಿಕ್ಷಾಟನೆ ಬಗ್ಗೆ ಕ್ರಮ ಕೈಗೊಳ್ಳುವಂತೆ ನಗರ ಪೊಲೀಸ್ ಆಯುಕ್ತರಿಗೆ ಸೂಚಿಸಿದ್ದರು. ಅದರಲ್ಲೂ ಎಳೆ ಕಂದಮ್ಮಗಳನ್ನು ಹೊತ್ತು ಭಿಕ್ಷೆ ಬೇಡುವ ಅಮಾನವೀಯ ಪದಟಛಿತಿಗೆ ಕಡಿವಾಣ ಹಾಕಬೇಕು ಎಂದಿದ್ದರು. ಈ ಹಿಂದೆ ಸಾಕಷ್ಟು ಬಾರಿ ಭಿಕ್ಷಾಟನೆ ವಿರುದ್ಧ ಕಾರ್ಯಾಚರಣೆ ನಡೆದಿದೆ. ಆದರೆ, ಸಮನ್ವಯ ಕೊರತೆಯಿಂದ ಅದು ಸಮರ್ಪಕವಾಗಿ ಆಗಿರಲಿಲ್ಲ
ಸರ್ಕಾರೇತರ ಸಂಸ್ಥೆಗಳ (ಎನ್‍ಜಿಒ) ನೆರವಿನೊಂದಿಗೆ ಪೊಲೀಸರ ತಂಡದಲ್ಲಿ, ವೈದ್ಯರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಹೀಗೆ ವಿವಿಧ ಇಲಾಖೆಗಳ ಸಿಬ್ಬಂದಿ ಒಳಗೊಂಡ 10 ಮಂದಿ ಇರುವ 7 ತಂಡಗಳನ್ನು ರಚಿಸಲಾಗಿತ್ತು.ರಕ್ಷಣೆ ವೇಳೆ ಮಕ್ಕಳು ಅಥವಾ ಭಿಕ್ಷಾಟನೆಯಲ್ಲಿ ತೊಡಗಿದವರು ಗಾಬರಿ ಬೀಳಬಾರದೆಂದು ಪೊಲೀಸರು ಮಫ್ತಿಯಲ್ಲಿ ತೆರಳಿದ್ದರು. ಮಕ್ಕಳನ್ನು ರಕ್ಷಿಸಿ ಅವರನ್ನು ಸರ್ಕಾರದ ಬಾಲಮಂದಿರಗಳಲ್ಲಿ ಆಶ್ರಯ ನೀಡಲು ಖಾಸಗಿ ವಾಹನಗಳನ್ನು ಬಳಸಿಕೊಳ್ಳಲಾಗಿತ್ತು. ಪೊಲೀಸ್ ವಾಹನಗಳಲ್ಲಿ ಕರೆದೊಯ್ದರೆ ಭೀತಿಗೆ ಒಳಗಾಗು ತ್ತಾರೆಂದು ಖಾಸಗಿ ವಾಹನ ಬಳಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಹರಿಶೇಖರನ್ ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಆ ದೇಶಕ್ಕೂ ನಾನೇ 'ಹಂಗಾಮಿ' ಸರ್ವೋಚ್ಛ ನಾಯಕ': Donald Trump ಘೋಷಣೆ, ಬೆಚ್ಚಿಬಿದ್ದ ವೆನೆಜುವೆಲಾ!

PSLV-C62 ಮಿಷನ್ ವಿಫಲ: ಕೊನೆಯ ಹಂತದಲ್ಲಿ ಎದುರಾದ ಸಮಸ್ಯೆ, ISROಗೆ ಹಿನ್ನಡೆ

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

Positive Vibes ಗಾಗಿ ಮನೆಯಲ್ಲಿ ಯಾವ ಗಿಡ ಬೆಳಸಬೇಕು: ಮುಳ್ಳಿನ ಗಿಡಗಳಲ್ಲಿದೆಯೇ ನಕರಾತ್ಮಕ ಶಕ್ತಿ; ಮಲ್ಲಿಗೆ ಮತ್ತು ತುಳಸಿಗೆ ಸೂಕ್ತ ಸ್ಥಳ ಯಾವುದು?

SCROLL FOR NEXT