ಡೆಂಗ್ಯು ಸೊಳ್ಳೆ 
ಜಿಲ್ಲಾ ಸುದ್ದಿ

ಡೆಂಗ್ಯು ವಿರುದ್ಧ ಹೋರಾಟ, ಡಾಬರ್‍ನಿಂದ ಬೆಂಗಳೂರು ಶಾಲೆಗಳಲ್ಲಿ ಜಾಗೃತಿ

ಬೆಂಗಳೂರು, ಆಗಸ್ಟ್ 13, 2015: ಡಾಬರ್ ಇಂಡಿಯಾ ಲಿಮಿಟೆಡ್, ದೇಶದಲ್ಲಿನ ಪ್ರಮುಖ ಆರೋಗ್ಯ ಆರೈಕೆಯ ಬ್ರಾಂಡ್ ಆಗಿದ್ದು, ಇಂದು ಶಾಲಾ ಮಕ್ಕಳಲ್ಲಿ ಡೆಂಗ್ಯು ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ ನೂತನ ಕಾರ್ಯಕ್ರಮಕ್ಕೆ ಚಾಲನೆ ನೀಡಿತು. ಈ ಕಾರ್ಯಕ್ರಮದ ಮೂಲ ಮಕ್ಕಳನ್ನು ಡೆಂಗ್ಯು ವನ್ನು ಪರಿಣಾಮಕಾರಿಯಾಗಿ ಎದುರಿಸುವಲ್ಲಿ, ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದು ಇದರ ಉದ್ದೇಶ. ಡಾಬರ್ ತನ್ನ ಉತ್ಪನ್ನವಾದ ಒಡೊಮಸ್ ಮತ್ತು ಇತರೆ ಪ್ರಮುಖ ಅಪೊಲೋ ಆಸ್ಪತ್ರೆಯ ವೃತಿಪರರ ನೆರವಿನಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರಲ್ಲಿ ಡೆಂಗ್ಯು ನಿಯಂತ್ರಣ ಕುರಿತು ಜಾಗೃತಿ ಮೂಡಿಸಲಿದೆ.
ಬೆಂಗಳೂರು ಹೊರತುಪಡಿಸಿ, ಡೆಂಗ್ಯು ವಿರುದ್ಧದ ಜಾಗೃತಿ ಕಾರ್ಯಕ್ರಮವು ದೆಹಲಿ, ಉತ್ತರ ಪ್ರದೇಶ, ಮಹಾರಾಷ್ಟ್ರ ಮತ್ತು ತಮಿಳುನಾಡುವಿನಲ್ಲಿಯೂ ನಡೆಯಲಿದೆ. ಈ ಕಾರ್ಯಕ್ರಮದ ಮೂಲಕ ಈ ನಗರಗಳಲ್ಲಿ ಇರುವ ವಿವಿಧ ಶಾಲೆಗಳಲ್ಲಿ, ಡೆಂಗ್ಯು ನಿಯಂತ್ರಣ ಕ್ರಮಗಳನ್ನು ಆಧರಿಸಿ ಶ್ರೇಣಿಕರಿಸಲಿದ್ದು, ಅಂಕಿ-ಅಂಶ ಆಧರಿಸಿ ಪ್ರತಿ ನಗರಕ್ಕೆ ಅನ್ವಯ ಆಗುವಂತೆ ಡೆಂಗ್ಯು ವರದಿ ಸಿದ್ಧಪಡಿಸಲಾಗುತ್ತದೆ.

ಆರೋಗ್ಯ ಕ್ಷೇತ್ರದ ವೃತ್ತಿಪರರು ವಿದ್ಯಾರ್ಥಿಗಳನ್ನು ಸೊಳ್ಳೆ ನಿಯಂತ್ರಣ ಕುರಿತು ಜಾಗೃತಿ ಮೂಡಿಸಲಿದ್ದಾರೆ. ಚಾಲ್ತಿಯಲ್ಲಿ ಇರುವ ಅಭಿಪ್ರಾಯಕ್ಕೆ ವಿರುದ್ಧವಾಗಿ ಡೆಂಗ್ಯು ಸೋಂಕು ಎಡೆಸ್ ಸೊಳ್ಳೆಯಿಂದ ಹರಡಲಿದೆ. ಉದ್ಯಾನಗಳಲ್ಲಿ ಸೊಳ್ಳೆಗಳ ಸಂಖ್ಯೆ ಹೆಚ್ಚಿದ್ದು,  ಮಕ್ಕಳ ಮೇಲೆ ನಕಾರಾತ್ಮಕ ಪರಿಣಾಮದ ಸಾಧ್ಯತೆ ಹೆಚ್ಚು. ಕಚೇರಿಗಳಲ್ಲಿ ಇರುವ ಜನರೂ ಕೂಡಾ ಅಪಾಯಕ್ಕೆ ಎದುರಾಗುವ ಸಾಧ್ಯತೆ ಇದೆ. ಡಾಬರ್ ಸಂಸ್ಥೆಯು ಪ್ರತಿ ಮನೆಯಲ್ಲಿಯೂ ಆರೋಗ್ಯ ಜಾಗೃತಿ ಮೂಡಿಸಬೇಕು ಎಂಬುದಕ್ಕೆ ಬದ್ಧವಾಗಿದೆ. ಮಕ್ಕಳನ್ನು ಈ ನಿಟ್ಟಿನಲ್ಲಿ ಜಾಗೃತಿಗೊಳಿಸುವ ಮೂಲಕ ಇದನ್ನು ಎದುರಿಸಲು ಒತ್ತು ನಿಡಲಾಗುವುದು. ಜಾಗೃತಿ ಮೂಲಕ ಮುಂಗಾರು ಅವಧಿಯಲ್ಲಿ ಸೊಳ್ಳೆ ಉತ್ಪತ್ತಿ ಆಗದಂತೆ ಪರಿಸರವನ್ನು ಸ್ವಚ್ಛವಾಗಿ ಇಡುವ ಕುರಿತು ಅರಿವು ಮೂಡಿಸಲಾಗುವುದು’ ಎಂದು ಡಾಬರ್ ಇಂಡಿಯಾ ಲಿಮಿಟೆಡ್‍ನ ಬ್ರಾಂಡ್ ಹೆಡ್, ಒಡೊಮಸ್, ರಜತ್ ವಹಿ ಹೇಳಿದರು.

ಈ ಕಾರ್ಯಕ್ರಮದ ಮೂಲಕ ಡಾಬರ್ ಪ್ರತಿನಿಧಿಗಳು ರಾಜ್ಯದಾದ್ಯಂತ 1,100 ಶಾಲೆಗಳಿಗೆ ಭೇಟಿ ನೀಡಲಿದ್ದಾರೆ.  ಈ ಕಾರ್ಯಕ್ರಮದ ಮೂಲಕ 7,00,000 ಶಿಕ್ಷಕರನ್ನು ತಲುಪುವ ಗುರಿ ಇದೆ. ಹೆಚ್ಚುವರಿಯಾಗಿ 40,000 ಶಿಕ್ಷಕರನ್ನು ಈ ಕುರಿತು ಜಾಗೃತಿ ಮೂಡಿಸುವಂತೆ ಸಜ್ಜುಗೊಳಿಸಲಾಗುವುದು. ಮಕ್ಕಳಿಗೆ ಸಂದೇಶ ತಲುಪಿಸುವಂತೆ ವಿಶೇಷ ಆಡಿಯೊ ವಿಷುಯೆಲ್ ಅನ್ನು ರೂಪಿಸಲಾಗಿದ್ದು, ನಿಯಂತ್ರಣ ದೃಷ್ಟಿಯಿಂದ ಪರಿಣಾಮಕಾರಿ ಕ್ರಮ ಕೈಗೊಳ್ಳುವಂತೆ ಅರಿವು ಮೂಡಿಸಲಾಗುವುದು.

ಒಂದು ಬ್ರಾಂಡ್‍ಆಗಿ ನಾವು ಜನರು ಡೆಂಗ್ಯು ಸೇರಿದಂತೆ ಡೆಂಗ್ಯುಯಿಂದ ಹರಡುವ ವಿವಿಧ ಸೋಂಕುಗಳ ಬಗ್ಗೆ ಜಾಗರೂಕರಾಗಿ ಇರುವಂತೆ ಪೂರಕವಾದ ನವೀನ ಉತ್ಪನ್ನಗಳ ಸಂಶೋಧನೆ ಮತ್ತು ಅಭಿವೃದ್ಧಿಗೆ ಒತ್ತು ನೀಡುತ್ತಿದೆ. ಇದರ ಮುಂದುವರಿದ ಭಾಗವಾಗಿ ನಾವು ಸಾರ್ವಜನಿಕ ಜಾಗೃತಿಗಾಗಿ ಸಾಮಾಜಿಕ ಅರಿವು ಮೂಡಿಸಲು ಒತ್ತು ನೀಡುತ್ತಿದ್ದೇವೆ.

ಇತ್ತೀಚಿನ ವರ್ಷಗಳಲ್ಲಿ ಡೆಂಗ್ಯು ಪ್ರಮಾಣ ಹೆಚ್ಚುತ್ತಿದೆ. ಇದಕ್ಕೆ ಮುಖ್ಯವಾದ ಕಾರಣವೆಂದರೆ ಶುಚಿತ್ವದ ಕೊರತೆ ಮತ್ತು ನಿರ್ಲಕ್ಷ್ಯ. ಪ್ರಸ್ತುತ ಜಾಗೃತಿಯ ಅಗತ್ಯ ಹಿಂದಿಗಿಂತಲೂ ಹೆಚ್ಚಾಗಿದೆ. ಈ ಪ್ರಚಾರಾಂದೋಲನದಿಂದಾಗಿ ನಾವು ಡೆಂಗ್ಯು ವಿರುದ್ಧ ಪ್ರಚಾರ ಮಾಡುತ್ತಿದ್ದು, ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಯುವಜನರನ್ನು ಸಜ್ಜುಗೊಳಿಸುತ್ತಿದ್ದೇವೆ ಎಂದರು. ಈ ಕಾರ್ಯಕ್ರಮದಲ್ಲಿ ಶಿಕ್ಷಕರು  ಮತ್ತು ಪೋಷಕರು ಭಾಗಹಿಸುವಂತೆ ಒತ್ತು ನೀಡುತ್ತಿದ್ದೇವೆ ಎಂದು ರಜತ್ ವಹಿ  ಹೇಳಿದರು.

ಒಡೊಮಸ್ ಕುರಿತು:  ಒಡೊಮಸ್ ಸೊಳ್ಳೆಗಳ ಕಡಿತದ ವಿರುದ್ಧ ಶೇ 100ರಷ್ಟು ರಕ್ಷಣೆ ನೀಡಲಿದೆ. ನೂತನ ಅತ್ಯಾಧುನಿಕ ಒಡೊಮಸ್ ಸರಣಿಯು ಮಾನವನ ಚರ್ಮದಿಂದ ಹೊರಸೂಸುವ ವಾಸನೆ ತಡೆಯುವಂತೆ ರಕ್ಷಣೆ ಒದಗಿಸಲಿದೆ. ಹೀಗಾಗಿ, ಸೊಳ್ಳೆಗಳಿಗೆ ಮಾನವನ ಇರುವಿಕೆ ಅರಿವಿಗೆ ಬರುವುದಿಲ್ಲ. ಸಾಂಪ್ರದಾಯಿಕವಾದ ಮ್ಯಾಟ್ ಮತ್ತು ಕಾಯಿಲ್‍ಗಳು ಸಾಮಾನ್ಯವಾಗಿ ಕೊಠಡಿಗಳ ಒಳಗೆ ರಕ್ಷಣೆ ಒದಗಿಸುತ್ತವೆ. ಒಡೊಮಸ್ ವ್ಯಕ್ತಿಗತ ಸರಣಿಯ ಉತ್ಪನ್ನಗಳು ಮನೆಯ ಹೊರಗೂ ರಕ್ಷಣೆ ಒಗಿಸುತ್ತವೆ. ಅಲ್ಲದೆ, ಶಿಶುಗಳಿಗೂ ಅನ್ವಯವಾಗುವಂತೆ ಬಳಕೆಗೆ ಸುರಕ್ಷಿತವಾಗಿದೆ ಎಂದು ಪ್ರಮಾಣೀಕರಿಸಲಾಗಿದೆ. ಒಡೊಮಸ್ ವ್ಯಕ್ತಿಗತ ಅಪ್ಲಿಕೇಷನ್‍ನ ಉತ್ಪ್ನವು ಬಳಕೆದಾರರಿಗೆ ಸಂಪೂರ್ಣ ರಕ್ಷಣೆಯನ್ನುಒದಗಿಸಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಐವರು ಸಾವು; ಕೊಚ್ಚಿ ಹೋದ ಸೇತುವೆ; Video

Indian Navy ಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ! Video

Indre Nemdiyag Irbek: ಯೂ ಟ್ಯೂಬ್ ನಲ್ಲಿ ಧೂಳೆಬ್ಬಿಸುತ್ತಿರುವಂತೆ ವಿವಾದಕ್ಕೆ ಗುರಿಯಾದ Devil ಸಾಂಗ್! ಟ್ಯೂನ್ ಕದ್ದ ಆರೋಪ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

SCROLL FOR NEXT