ಜಿಲ್ಲಾ ಸುದ್ದಿ

2 ರಿಂದ 12 ಗಂಟೆ ಲೋಡ್ ಶೆಡ್ಡಿಂಗ್?

Rashmi Kasaragodu

ಬೆಂಗಳೂರು: ರಾಜ್ಯವನ್ನು ಆವರಿಸುತ್ತಿರುವ ಭೀಕರ ಬರದ ಪರಿ ಣಾಮವಾಗಿ ಮಳೆಗಾಲದಲ್ಲೇ ಲೋಡ್ ಶೆಡ್ಡಿಂಗ್ ಕಾಟ ಅನುಭವಿಸುವ ಆತಂಕ ಎದುರಾಗಿದೆ. ಬರದ ದುಷ್ಪರಿಣಾಮದಿಂದಾಗಿ ಈ ಬಾರಿ ಕುಡಿಯುವ ನೀರಿಗಿಂತ ಹೆಚ್ಚಾಗಿ ವಿದ್ಯುತ್ ಕ್ಷೇತ್ರದ ಮೇಲೆ ಬೀಳಲಿದ್ದು, ಜಲಾಶಯಗಳ ಸಂಗ್ರಹಣಾ ಸಾಮರ್ಥ್ಯ ಕುಸಿಯುತ್ತಿದೆ. ಇದರ ಪರಿಣಾಮವಾಗಿ ಜಲ ವಿದ್ಯುತ್ ಉತ್ಪಾದನೆ ಕಡಿಮೆಯಾಗುತ್ತಿದೆ. ಆರಂಭಿಕ ಅಂದಾಜಿನ ಪ್ರಕಾರ ರಾಜ್ಯದಲ್ಲಿ ಮುಂಬರುವ ದಿನಗಳಲ್ಲಿ 3000 ಮೆಗಾ ವ್ಯಾಟ್ ವಿದ್ಯುತ್ ಕೊರತೆ ಉಂಟಾಗಲಿದೆ. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಬೆಂಗಳೂರು ಸೇರಿದಂತೆ ಲೋಡ್ ಶೆಡ್ಡಿಂಗ್ ಅವಧಿಯನ್ನು 2ರಿಂದ 12 ಗಂಟೆಯವರೆಗೆ ವಿಸ್ತರಿಸುವ ಬಗ್ಗೆ ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದೆ. ಮಾತ್ರವಲ್ಲ ಬೆಂಗಳೂರು ನಗರದಲ್ಲಿ ಅಧಿಕೃತವಾಗಿ ವಿದ್ಯುತ್ ಕಡಿತ ಮಾಡುವ ಬಗ್ಗೆ ಇಂಧನ ಇಲಾಖೆ ಚಿಂತನೆ ನಡೆಸುತ್ತಿದೆ.

SCROLL FOR NEXT