ವಿಶ್ವನ ಹುಚ್ಚಾಟ ಅರಿತ ನಂತರ ತಕ್ಷಣ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ
ಬೆಂಗಳೂರು: ನಿಮ್ಹಾನ್ಸ್ ಆಸ್ಪತ್ರೆಯೊಳಗೆ ಹೆಡ್ ಕಾನ್ಸ್ ಟೇಬಲ್ ಬಂದೂಕು ಕಿತ್ತುಕೊಂಡು ಎಲ್ಲೆಂದರಲ್ಲೇ ಗುಂಡು ಹಾರಿಸಿದ್ದ ವಿಚಾರಣಾಧೀನ ಕೈದಿ ವಿಶ್ವನಾಥ, ಗಾರ್ಡ್ ರೂಮಿನ ಒಳಗೆ ಸೇರಿ ಗುಂಡು ಹಾರಿಸುವುದಕ್ಕೂ ಮೊದಲು ಪೋಲೀಸರು, ವೈದ್ಯರು ಹಾಗೂ ಒಳಗಿದ್ದ ಸಹ ಕೈದಿಗಳ ಮೇಲೆ ಹಲ್ಲೆ ನಡೆಸಿದ್ದ ಎನ್ನುವ ವಿಚಾರ ಬೆಳಕಿಗೆ ಬಂದಿದೆ.
ಮಾನಸಿಕ ಅಸ್ವಸ್ಥರಿಗೆ ಹಾಗೂ ಕೈದಿಗಳಿಗೆ ಚಿಕಿತ್ಸೆ ನೀಡುವ ಬ್ಲಾಕ್‍ಗೆ ನಗರ ಸಶಸ್ತ್ರ ಮೀಸಲು ಪಡೆಯ (ಸಿಎಆರ್) ಒಬ್ಬ ಹೆಡ್ ಕಾನ್ಸ್ ಟೇಬಲ್ ಹಾಗೂ ನಾಲ್ವರು ಕಾನ್ಸ್ ಟೇಬಲ್‍ಗಳನ್ನು ನಿಯೋ ಜಿಸಲಾಗಿರುತ್ತ ದೆ. ಈ ಪೈಕಿ ಎರಡು ಪಾಳಿಗಳಲ್ಲಿ ಐವರು ಕರ್ತವ್ಯ ನಿರ್ವಹಿಸಬಹುದು. ಪ್ರತಿ ಪಾಳಿಯಲ್ಲಿ ಒಬ್ಬ ಸೆಂಟ್ರಿ ಮತ್ತೊಬ್ಬ ವೇಟಿಂಗ್ ಸೆಂಟ್ರಿಯನ್ನು ನಿಯೋಜಿಸಲಾಗಿರುತ್ತದೆ. ಒಬ್ಬ ಸೆಂಟ್ರಿ ಊಟ, ಶೌಚಾಲಯ ಅಥವಾ ಬೇರೆ ಯಾವುದೇ ಕಾರಣದಿಂದ ಅಲಭ್ಯನಾದಾಗ ಮತ್ತೊಬ್ಬರು ಸೆಂಟ್ರಿಯಾಗಿ ಕಾರ್ಯನಿರ್ವಹಿಸುತ್ತಾರೆ.
ಅದೇ ರೀತಿ ಭಾನುವಾರ ಹೆಡ್ ಕಾನ್ಸ್‍ಟೇಬಲ್ ಈರಣ್ಣ ಹಾಗೂ ಮತ್ತೊಬ್ಬರ ನಿಯೋಜಿಸಲಾಗಿತ್ತು. 3 ಗಂಟೆ ಸುಮಾರಿಗೆ ಈರಣ್ಣ ಕಾರ್ಯನಿರ್ವಹಿಸುತ್ತಿದ್ದು ಮತ್ತೊಬ್ಬ ಕಾನ್ಸ್‍ಟೇಬಲ್ ಬ್ಲಾಕ್‍ನಿಂದ ಸ್ವಲ್ಪ ಮುಂದೆ ಬಂದಿದ್ದರು. ಈ ವೇಳೆ ಮೂತ್ರ ವಿಸರ್ಜನೆ ನೆಪದಲ್ಲಿ ವಿಶ್ವನಾಥ ಶೌಚಾಲಯಕ್ಕೆ ತೆರಳಿ ಹೊರಗೆ ಬಂದು ಮಂಚದ ಕಬ್ಬಿಣದ ರಾಡ್‍ಗಳಿಂದ ಹೆಡ್ ಕಾನ್ಸ್‍ಟೇಬಲ್ ಈರಣ್ಣ ಅವರ ಮೇಲೆ ಹಲ್ಲೆ ನಡೆಸಿದ್ದಾನೆ. ಮೂರು ಮಂಚಗಳನ್ನು ಕಿತ್ತು ಬಿಸಾಡಿರುವ ವಿಶ್ವ ಬಳಿಕ ವೈದ್ಯರು ಹಾಗೂ ಮೂವರು ಕೈದಿಗಳ ಮೇಲೂ ದಾಳಿ ನಡೆಸಿದ್ದಾನೆ. ಈ ಸಂದರ್ಭದಲ್ಲಿ ಬಂದೂಕು ಕಿತ್ತುಕೊಂಡು ಹುಚ್ಚಾಟ ಜೋರು ಮಾಡಲೆತ್ನಿಸಿದಾಗ ಭೀತಿಗೊಂಡ ಕಾನ್ಸ್ ಟೇಬಲ್ ಕೊಠಡಿಯೊಳಗೆ ಕೂಡಿ ಹಾಕಿದ್ದರು. ಆದರೆ, ಎನ್‍ಸಿಸಿ ಕೆಡೆಟ್ ಆಗಿದ್ದ ವಿಶ್ವ ಬಂದೂಕಿಗೆ ಬುಲೆಟ್ ಲೋಡ್ ಮಾಡಿಕೊಂಡು ಸದ್ದು ಕೇಳಿಸುವ ಕಡೆಗಳಲ್ಲಿ ಶೂಟ್ ಮಾಡಲು ಆರಂಬಿsಸಿದ್ದ. ಶೂಟ್ ಮಾಡಿದ ಒಂದು ಬುಲೆಟ್ ಬಾಗಿಲನ್ನು ತೂರಿಕೊಂಡು ಕರ್ತವ್ಯನಿರತ ವೈದ್ಯರ ಪಕ್ಕದಲ್ಲೇ ಹಾದು ಹೋಗಿದ್ದು ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಅದಾದ ನಂತರವೇ ವಿಶ್ವನ ಹುಚ್ಚಾಟದ ಗಂಭೀರತೆ ಅರಿತು ಹಿರಿಯ ಪೋಲೀಸ್ ಅಧಿಕಾರಿಗಳಿಗೆ ಈರಣ್ಣ ಮಾಹಿತಿ ನೀಡಿದ್ದರು ಎಂದು ಉನ್ನತ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು. ವಿಶ್ವ ಯಾವ ಕಡೆಯಿಂದ ಸದ್ದು ಕೇಳಿ ಬರುತ್ತದೆಯೇ ಅದರ ಕಡೆ ಗುಂಡು ಹಾರಿಸುತ್ತಿದ್ದ ಎಂದು ಅಧಿಕಾರಿ ಹೇಳಿದರು. ತನಿಖೆ ಪ್ರಾರಂಭ:`ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಮಾನಸಿಕ ಅಸ್ವಸ್ಥ ವಿಚಾರಣಾಧೀನ ಕೈದಿ ವಿಶ್ವನಾಥ, ನಗರ ಸಶಸ್ತ್ರ ಮೀಸಲು ಪಡೆ ಹೆಡ್ ಕಾನ್ಸ್‍ಟೇಬಲ್‍ರಿಂದ ಬಂದೂಕು ಕಸಿದು ಗುಂಡು ಹಾರಿಸಿದ ಪ್ರಕರಣದ ಬಗ್ಗೆ ಇಲಾಖಾ ತನಿಖೆಗೆ ಆದೇಶಿಸಲಾಗಿದೆ ಎಂದು ನಗರ ಪೋಲೀಸ್ ಆಯುಕ್ತ ಎನ್.ಎಸ್.ಮೇಘರಿಕ್ ತಿಳಿಸಿದರು.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಂದೂಕು ಕಸಿದ ಪ್ರಕರಣದ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ. ವರದಿ ಬಂದ ಬಳಿಕ ಇಲಾಖೆ ಸಿಬ್ಬಂದಿಯಿಂದ ಏನಾದರೂ ಲೋಪವಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಲಿದೆ ಎಂದರು. ವಿಧಿವಿಜ್ಞಾನ ಪ್ರಯೋಗಾಲಯ ತಜ್ಞರಿಂದ ಪರಿಶೀಲನೆ: ಶೂಟೌಟ್ ನಡೆದಿರುವ ನಿಮ್ಹಾನ್ಸ್ ಆಸ್ಪತ್ರೆಯ ಪಾಯನಿಯರ್ ಬ್ಲಾಕ್‍ಗೆ ಭೇಟಿ ನೀಡಿದ ವಿಧಿವಿಜ್ಞಾನ ಪ್ರಯೋಗಾಲಯ ತಜ್ಞರು ಪರಿಶೀಲನೆ ನಡೆಸಿದರು. ಶಸ್ತ್ರಾಸ್ತ್ರಕ್ಕೆ ಬಳಕೆಯಾಗುವ ಮದ್ದು, ಗುಂಡುಗಳ ಬಗ್ಗೆ ಮಾಹಿತಿ ಕಲೆ ಹಾಕಿ ವರದಿ ತಯಾರಿಸುವ ಬ್ಯಾಲಿಸ್ಟಿಕ್ ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸಂಜೆಯಾದರೂ ನಡೆಯದ ಶವ ಪರೀಕ್ಷೆ: ಗುಂಡೇಟು ತಿಂದು ತೀವ್ರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿರುವ ವಿಶ್ವನಾಥನ ಶವಪರೀಕ್ಷೆ ಸೋಮವಾರ ಸಂಜೆಯಾ ದರೂ ನಡೆಯಲಿಲ್ಲ. ತಾಂತ್ರಿಕ ಕಾರಣಗಳಿಂದ ಮಾ್ಯಜಿಸ್ಟ್ರೇಟರ್ ಬರುವುದು ವಿಳಂಬವಾಗಿದ್ದರಿಂದ ಶವಪರೀಕ್ಷೆ ವಿಳಂಬವಾಯಿತು. ಮಾನವ ಹಕ್ಕುಗಳ ಆಯೋಗದಿಂದ ಸ್ವಯಂಪ್ರೇರಿತ ದೂರು: ಗರುಡಾ ಪಡೆ ಕಮಾಂಡೋಗಳ ಗುಂಡಿಗೆ ಬಲಿಯಾದ ವಿಚಾರಣಾಧೀನ ಕೈದಿ ವಿಶ್ವನಾಥ ಪ್ರಕರಣದ ಬಗ್ಗೆ ರಾಜ್ಯ ಮಾನವ ಹಕ್ಕುಗಳ ಆಯೋಗ ದಲ್ಲಿ ಸ್ವಯಂ ಪ್ರೇರಿತ ದೂರು ದಾಖಲಾಗಿದೆ.