ಸಾಂದರ್ಭಿಕ ಚಿತ್ರ 
ಜಿಲ್ಲಾ ಸುದ್ದಿ

ಅನಾಥಶ್ರಮದ ಮುಖ್ಯಸ್ಥನಿಂದಲೆ ಲೈಂಗಿಕ ದೌರ್ಜನ್ಯ: ಆರೋಪಿ ಬಂಧನ

ಸೋಲದೇವನಹಳ್ಳಿ ಚಿಕ್ಕಸಂದ್ರದಲ್ಲಿರುವ ಅನಾಥಶ್ರಮದಲ್ಲಿದ್ದ 12 ವರ್ಷದ ಬಾಲಕಿ ಮೇಲೆ ಮುಖ್ಯಸ್ಥನೇ ಲೈಂಗಿಕ ದೌರ್ಜನ್ಯ ಎಸಗಿರುವ ಪ್ರಕರಣ...

ಬೆಂಗಳೂರು: ಸೋಲದೇವನಹಳ್ಳಿ ಚಿಕ್ಕಸಂದ್ರದಲ್ಲಿರುವ ಅನಾಥಶ್ರಮದಲ್ಲಿದ್ದ 12 ವರ್ಷದ ಬಾಲಕಿ ಮೇಲೆ ಮುಖ್ಯಸ್ಥನೇ ಲೈಂಗಿಕ ದೌರ್ಜನ್ಯ ಎಸಗಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಈ ಸಂಬಂಧ ಆರೋಪಿ ವಿಜಯ್ ರಾಜ್(30) ಎಂಬಾತನನ್ನು ಬುಧವಾರ ಬಂಧಿಸಲಾಗಿದೆ. ಖಾಸಗಿ ಶಾಲೆಯಲ್ಲಿ 7ನೇ ತರಗತಿ ಓದುತ್ತಿದ್ದ ಬಾಲಕಿಯ ತಾಯಿ ದಿನಗೂಲಿ ಕೆಲಸ ಮಾಡುತ್ತಿದ್ದಾರೆ. ಆದರೆ, ಅವರಿಗೆ ಮಗಳಿಗೆ ಶಿಕ್ಷಣ ಕೊಡಿಸಲು ಸಾಧ್ಯವಾಗದ ಕಾರಣ ಅನಾಥಶ್ರಮಕ್ಕೆ ಕಳುಹಿಸಿದ್ದರು. ಬುಧವಾರ ಮಧ್ಯಾಹ್ನ ಬಾಲಕಿ ಚಿಕ್ಕಸಂದ್ರದ ರಸ್ತೆಯೊಂದರಲ್ಲಿ ಅಳುತ್ತಾ ನಿಂತಿದ್ದಳು.

ಬಾಲಕಿಯನ್ನು ಗಮನಿಸಿದ ವೃದ್ಧೆಯೊಬ್ಬರು ವಿಚಾರಿಸಿದಾಗ, ಅನಾಥಾಶ್ರಮದ ಮುಖ್ಯಸ್ಥ ವಿಜಯ್ ರಾಜ್ ಎಂಬಾತ ಎರಡು ತಿಂಗಳಿಂದ ನಿರಂತರವಾಗಿ ಲೈಂಗಿಕ ಕಿರುಕುಳ ನೀಡುತ್ತಿದ್ದ. ಹೀಗಾಗಿ ಪರಾರಿಯಾಗಿದ್ದಾಗಿ ಹೇಳಿದ್ದಳು. ಆರೋಪಿ ವಿರುದ್ಧ ಪೊಕ್ಸೋ ಕಾಯ್ದೆ ಅನ್ವಯ ಪ್ರಕರಣ ದಾಖಲಿಸಿ ತನಿಖೆ ನೆಡಸಲಾಗುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

NICE ವಿವಾದ: ದೇವೇಗೌಡರು ಬೇಕಿದ್ರೆ ಕೋರ್ಟ್‌ಗೆ ಹೋಗಲಿ, ಉಪವಾಸ ಮಾಡಲಿ; ಮಾಜಿ ಪ್ರಧಾನಿ ಪತ್ರಕ್ಕೆ CM ಡಿಕೆಶಿ ತಿರುಗೇಟು

ಪಠ್ಯಪುಸ್ತಕದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಪಟ್ಟಿಯಲ್ಲಿ ಪ್ರಧಾನಿ ಮೋದಿ ಹೆಸರು: ನೆಟ್ಟಿಗರಿಂದ ಟೀಕೆ

ಮಹಾ ಅಷ್ಟಮಿಯಂದು ಮದ್ಯದಂಗಡಿ ಮತ್ತು ಬಾರ್‌ಗಳು ಬಂದ್; ದುರ್ಗಾ ಪೂಜೆ ವೇಳೆ ಡಿಜೆ ಸಂಗೀತ ನಿಷೇಧ!

ಸಾಕು ಮಾಡಿ: ಸೇವಾಶ್ರಯ ಪ್ರಕರಣದಲ್ಲಿ ಕೊನೆಗೂ ಅಭಿಷೇಕ್ ಬ್ಯಾನರ್ಜಿಗೆ ಹೈಕೋರ್ಟ್‌ನಿಂದ ಬಿಗ್ ರಿಲೀಫ್, ಬಂಧನಕ್ಕೆ ತಡೆ!

ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್‌; ಶೇ. 7.5 ರಷ್ಟು ಮೀಸಲಾತಿ – ಕರಡು ನಿಯಮ ಪ್ರಕಟ