ಬೆಂಗಳೂರು: ಬಿಬಿಎಂಪಿ ಚುನಾವಣೆಯಲ್ಲಿ ಸೋತಿರುವ ಕಾಂಗ್ರೆಸ್ ಅಭ್ಯರ್ಥಿ ವರಪ್ರಸಾದ್ ರೆಡ್ಡಿ ಅವರಿಗೆ ಸೇರಿದ ಫ್ಲ್ಯಾಟ್‍ನಲ್ಲಿ ರು.1.15 ಕೋಟಿ ನಗದು ಪತ್ತೆಯಾಗಿದೆ.
ಉತ್ತರಹಳ್ಳಿ ಮುಖ್ಯರಸ್ತೆಯಲ್ಲಿರುವ ಅಪಾರ್ಟ್‍ಮೆಂಟ್‍ಗೆ ತೆರಳಿದ ಚುನಾವಣಾಧಿಕಾರಿಗಳು ಹಾಗೂ ಪೊಲೀಸರು ಬೀಗ ತೆರೆದು ಪರಿಶೀಲಿಸಿದ ಅಪಾರ ಹಣ ಪತ್ತೆಯಾಗಿದ್ದು ಜಪ್ತಿ ಮಾಡಿದ್ದಾರೆ. ಚುನಾವಣೆಯಲ್ಲಿ ಮತದಾರರಿಗೆ ಹಂಚಲು ವರಪ್ರಸಾದ್ ರೆಡ್ಡಿ ಅವರ ಮನೆಯಲ್ಲಿ ಹಣ ಸಂಗ್ರಹಿಸಿದ್ದಾರೆ ಎಂದು ಆರೋಪಿಸಿ ಆ.18ರಂದು ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಆದರೆ,ಮನೆ ಪರಿಶೀಲನೆಗೆ ಸಹಾಯಕ ಆಯುಕ್ತರ ಅನುಮತಿ ಕಡ್ಡಾಯ ಕಾರಣ ಹೇಳಿ ಚುನಾವಣೆ ಅ„ಕಾರಿಗಳು ಹಾಗೂ ಪೊಲೀಸರು ಫ್ಲ್ಯಾಟ್‍ನ ಬೀಗ ತೆರೆದಿರಲಿಲ್ಲ.
ಆದರೆ, ಚುನಾವಣಾ ಆಯೋಗದ ಸೂಚನೆಯಂತೆ ಅಪಾರ್ಟ್‍ಮೆಂಟ್‍ಗೆ ಬೀಗ ಹಾಕಿ ಭದ್ರತೆಗೆ ಒಬ್ಬ ಕಾನ್ಸ್‍ಟೇಬಲ್‍ನ ನಿಯೋಜಿಸಲಾಗಿತ್ತು. ಮಂಗಳವಾರ ಸ್ಥಳೀಯ ಚುನಾವಣಾಧಿಕಾರಿ ಸಮ್ಮುಖದಲ್ಲಿ ಬಾಗಿಲು ತೆಗೆದು ಪರಿಶೀಲಿಸಿದಾಗ ಹಣ ಪತ್ತೆಯಾಗಿದೆ. ಹಣ ಮೂಲದ ಬಗ್ಗೆ ವಿವರಣೆ ನೀಡುವಂತೆ ವರಪ್ರಸಾದ್ ರೆಡ್ಡಿ ಅವರಿಗೆ ಸೂಚಿಸಲಾಗಿದೆ. ಉತ್ತರ ನೀಡಿದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ದಕ್ಷಿಣ ವಿಭಾಗ ಡಿಸಿಪಿ ಲೋಕೇಶ್‍ಕುಮಾರ್ ತಿಳಿಸಿದ್ದಾರೆ.