ಜಿಲ್ಲಾ ಸುದ್ದಿ

ಶೂದ್ರರು ರಾಜಕೀಯ ಶಕ್ತಿ ಗಳಿಸಿಕೊಳ್ಳಬೇಕು: ಮಹದೇವಪ್ಪ

Srinivasamurthy VN

ಬೆಂಗಳೂರು: ಪ್ರಜಾಪ್ರಭುತ್ವವಾದಿ ಡಾ. ಅಂಬೇಡ್ಕರ್ ರಚಿಸಿರುವ ಸಂವಿಧಾನದ ಆಶಯಗಳಿಗೆ ಯಾರಾದರೂ ಧಕ್ಕೆ ಉಂಟು ಮಾಡಿದರೆ ಭಾರತದಲ್ಲಿ ಕ್ರಾಂತಿ ನಡೆಯುತ್ತದೆ ಎಂದು ಲೋಕೋಪಯೋಗಿ  ಸಚಿವ ಡಾ. ಎಚ್.ಸಿ. ಮಹದೇವಪ್ಪ ಎಚ್ಚರಿಕೆ ನೀಡಿದರು.

ಡಾ. ಡಿ.ಜಿ. ಸಾಗರ್ ಅಭಿನಂದನಾ ಸಮಿತಿಯು ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ `ಡಾ. ಡಿ.ಜಿ. ಸಾಗರ್ ಅಭಿನಂದನಾ ಗ್ರಂಥ' ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಆಂತರಿಕ ಭಿನ್ನತೆ ತೊರೆಯಿರಿ: ಬೆರಳೆಣಿಕೆಯಷ್ಟು ಮಂದಿ ಸಂವಿಧಾನದ ಬುಡ ಅಲುಗಾಡಿಸಲು ಹೊಂಚು ಹಾಕುತ್ತಿದ್ದಾರೆ. ಮೇಲ್ನೋಟಕ್ಕೆ ಅಂಬೇಡ್ಕರ್ ಬಗ್ಗೆ ಮಾತನಾಡಿ, ಒಳಗೊಳಗೆ ಸಂವಿಧಾನಕ್ಕೆ  ಕೈಹಾಕುತ್ತಿದ್ದಾರೆ. ಈ ದೇಶದಲ್ಲಿ ಇವರ ಆಟ ಹೆಚ್ಚು ಕಾಲ ನಡೆಯುವುದಿಲ್ಲ. ಹಾಗೊಂದು ವೇಳೆ ಸಂವಿಧಾನದ ಆಶಯಕ್ಕೆ ಧಕ್ಕೆ ತಂದರೆ ಹೋರಾಟ ಆರಂಭವಾಗುತ್ತದೆ. ದ್ವಿಜರ ವಿರುದ್ಧ ಶೂದ್ರರು  ಒಗ್ಗಟ್ಟಾಗಿ ರಾಜಕೀಯ ಶಕ್ತಿ ಗಳಿಸಿಕೊಳ್ಳಬೇಕು. ದಲಿತ ಸಂಘರ್ಷ ಸಮಿತಿಯವರು ಹಲವು ಗುಂಪುಗಳನ್ನು ಒಡೆದು ಒಗ್ಗಟ್ಟಾಗಬೇಕು.

ಮಹಿಳೆಯರಿಗೆ ಮಾಲೆ ಹಾಕಲು ಗಂಡಸು ಕೈ ಹಾಕಿದರೆ ಅವರ ಕೈ ಕತ್ತರಿಸಿ ಬೀಳುತ್ತದೆ ಎಂಬುದನ್ನು ವೈದಿಕ ಸಂಪ್ರದಾಯ ಹೇಳಿಕೊಟ್ಟಿದೆ. ಇಂಥದ್ದನ್ನೆಲ್ಲ ನಂಬದ ನನಗೆ ಗಂಡಸರೇ ಮಾಲೆ ಹಾಕಲಿ.  ಹೆಣ್ಣು ದೇವರುಗಳೆಲ್ಲ ತಮ್ಮ ಸೇವೆಗೆ ದಲಿತ ಮಹಿಳೆಯರನ್ನೇ ಹುಡುಕಿಕೊಂಡು ಬರುತ್ತವೆ. ಮೇಲ್ವರ್ಗದ ಹೆಣ್ಣು ಮಕ್ಕಳನ್ನು ಏಕೆ ಬಯಸುವುದಿಲ್ಲ.
-ಪ್ರೊ. ಮಲ್ಲಿಕಾ ಘಂಟಿ, ಹಂಪಿ ವಿವಿ ಕುಲಪತಿ

SCROLL FOR NEXT