ಸುಖವಿಂದರ್ ಸಿಂಗ್ 
ಜಿಲ್ಲಾ ಸುದ್ದಿ

ಸಿಲಿಕಾನ್ ಸಿಟಿಯಲ್ಲಿ ಸುಖವಿಂದರ್ ಸಿಂಗ್ ಗಾಯನದ ಮಿಂಚು

ಇಂಪೀರಿಯಲ್ ಬ್ಲೂ ಸೂಪರ್‍ಹಿಟ್ ನೈಟ್ಸ್ ಇಂದು ರಾತ್ರಿ ಬೆಂಗಳೂರಿನಲ್ಲಿ ಸಂಚಲನ ಮೂಡಿಸಲಿದ್ದು, ಖ್ಯಾತ ಬಾಲಿವುಡ್...

ಬೆಂಗಳೂರು: ಇಂಪೀರಿಯಲ್ ಬ್ಲೂ ಸೂಪರ್‍ಹಿಟ್ ನೈಟ್ಸ್ ಇಂದು ರಾತ್ರಿ ಬೆಂಗಳೂರಿನಲ್ಲಿ ಸಂಚಲನ ಮೂಡಿಸಲಿದ್ದು, ಖ್ಯಾತ ಬಾಲಿವುಡ್ ಗಾಯಕ ಸುಖವಿಂದರ್ ಸಿಂಗ್ ತಮ್ಮ ಗಾಯನದ ಮೂಲಕ ಮಿಂಚು ಹರಿಸಲಿದ್ದಾರೆ. ಬಹುನಗರಿ ಸಂಗೀತ ಪಯಣ ಲೂಧಿಯಾನದಲ್ಲಿ ಆರಂಭವಾಗಿದ್ದು, ಗೋವಾ, ಫರೀದಾಬಾದ್, ಪುಣೆ, ಇಂದೋರ್, ನಾಗ್ಪುರ, ಕೋಲ್ಕೊತ್ತಾಗಳಲ್ಲಿ ಅದ್ಭುತ ಯಶಸ್ಸು ಸಾಧಿಸಿ ಇದೀಗ ಹೊಸ ಸಂಚಲನ ಮೂಡಿಸಲು ಬೆಂಗಳೂರಿಗೆ ಆಗಮಿಸಿದೆ. ಇಂಪೀರಿಯಲ್ ಬ್ಲೂ ಸೂಪರ್‍ಹಿಟ್ ನೈಟ್ಸ್ ಅನ್ನು ಜೀವನವನ್ನು ಪ್ರೀತಿಸುವ ಯುವಜನರಿಗೆ ಸಂಪೂರ್ಣ ಮನರಂಜನೆ ನೀಡಲೆಂದೇ ರೂಪಿಸಲಾಗಿದೆ.

ತಮ್ಮ ವಿಶಿಷ್ಟ ಧ್ವನಿ ಮೂಲಕವೇ ವೇದಿಕೆಯಲ್ಲೊಂದು ಅದ್ಭುತ ವಾತಾವರಣ ನಿರ್ಮಿಸುವ ಪ್ರತಿಷ್ಠಿತ ಪ್ರಶಸ್ತಿಗಳ ವಿಜೇತ ಸುಖವಿಂದರ್ ಸಿಂಗ್ ಅವರಿಗೆ ಪ್ರತಿಭಾವಂತ ಸಂಗೀತಗಾರರ ತಂಡ ಸಾಥ್ ನೀಡಲಿದೆ. `ಛಯ್ಯಾ ಛಯ್ಯಾ', `ದಬಾಂಗ್', `ಜೈ ಹೋ' ಸೇರಿದಂತೆ ತಮ್ಮ ಕೆಲವು ಅತ್ಯುತ್ತಮ ಹಾಡುಗಳನ್ನು ಸಿಂಗ್ ಅವರು ಪ್ರಸ್ತುತಪಡಿಸಲಿದ್ದಾರೆ. ಆ ಮೂಲಕ ಗ್ರಾಂಡ್ ಶೋ ಕೊನೆಯಲ್ಲಿ ಅಭಿಮಾನಿಗಳಿಗೆ ಸಂತಸದ ಅನುಭವ ಉಣಬಡಿಸಲಿದ್ದಾರೆ.

ಶ್ರೀ ರಾಜಾ ಬ್ಯಾನರ್ಜಿ, ಸಹಾಯಕ ಉಪ ಅಧ್ಯಕ್ಷ, ಮಾರುಕಟ್ಟೆ ವಿಭಾಗ, ಪೆರ್ನಾಡ್ ರೈಕಾರ್ಡ್ ಇಂಡಿಯಾ ಅವರು ಹೇಳುತ್ತಾರೆ, ` ಇಂಪೀರಿಯಲ್ ಬ್ಲೂ ಸೂಪರ್‍ಹಿಟ್ ನೈಟ್ಸ್ ಎರಡನೇ ಋತುವಿನ ಬಗ್ಗೆ ನಾವು ಬಹಳ ಥ್ರಿಲ್ ಆಗಿದ್ದೇವೆ. ಇದು ಈಗ ಮನರಂಜನಾ ಉದ್ಯಮದಲ್ಲಿನ ಅತ್ಯುತ್ತಮ ಪ್ರತಿಭೆಗಳಿಗೆ ಅವಕಾಶ ಕಲ್ಪಿಸುವ ವೇದಿಕೆಯೂ ಆಗಿದೆ'

ಕಾರ್ಯಕ್ರಮದ ಬಗ್ಗೆ ಅತ್ಯುತ್ಸಾಹ ತೋರಿಸಿರುವ ಶ್ರೀ ಸುಖವಿಂದರ್ ಸಿಂಗ್ ಅವರು, `ಬೆಂಗಳೂರಿನಲ್ಲಿ ಕಾರ್ಯಕ್ರಮ ನೀಡಲು ಉತ್ಸುಕನಾಗಿದ್ದೇನೆ. ಬೆಂಗಳೂರಿನಲ್ಲಿ ಭಾರಿ ಸಂಖ್ಯೆಯ ಸಂಗೀತಪ್ರೇಮಿಗಳು ಸೇರುತ್ತಾರೆ ಮತ್ತು ಇಂಪೀರಿಯಲ್ ಬ್ಲೂ ಸೂಪರ್‍ಹಿಟ್ ನೈಟ್ಸ್ ಇಲ್ಲಿರುವ ನನ್ನ ಅಭಿಮಾನಿಗಳನ್ನು ¨ರಂಜಿಸುವ ಮತ್ತೊಂದು ಅವಕಾಶ ನೀಡಿದೆ. ಇಂಪೀರಿಯಲ್ ಬ್ಲೂ ಸೂಪರ್‍ಹಿಟ್ ನೈಟ್ಸ್ ವೇದಿಕೆಯಲ್ಲಿ ಖುಷಿಯನ್ನು ಆಸ್ವಾದಿಸುತ್ತಾ ಹಾಡುತ್ತೇನೆ. ಈ ಸಂಗೀತ ಪಯಣ ಮುಂದುವರಿದಂತೆ ನನ್ನ ಅಭಿಮಾನಿಗಳಿಗೆ ಇನ್ನಷ್ಟು ಉತ್ಸಾಹ ಮತ್ತು ಮನರಂಜನೆ ನೀಡಲು ಬಯಸುತ್ತೇನೆ'.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Karnataka CM News LIVE Updates | ಭಾವುಕ ಕ್ಷಣಕ್ಕೆ ಸಾಕ್ಷಿಯಾದ ಬ್ರೇಕ್ ಫಾಸ್ಟ್ ಮೀಟಿಂಗ್: ಸಿದ್ದರಾಮಯ್ಯ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ಡಿ.ಕೆ ಶಿವಕುಮಾರ್, ಪರಸ್ಪರ ಆಲಿಂಗನ..!

ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧದ ಕಾರ್ಮೋಡ: 4 ಇರಾನ್ ಡ್ರೋನ್‌ಗಳನ್ನು ಹೊಡೆದುರುಳಿಸಿದ ಅಮೆರಿಕಾ, ಹೋರ್ಮುಜ್‌ನಲ್ಲಿ ಉದ್ವಿಗ್ನತೆ ತೀವ್ರ..!

ಕ್ಲೈಮ್ಯಾಕ್ಸ್‌ ಹಂತಕ್ಕೆ ಕುರ್ಚಿ ಕದನ: ಸಿಎಂ ಸ್ಥಾನಕ್ಕೆ ಡಿಕೆ ಶಿವಕುಮಾರ್ ಹೆಸರು ಫೈನಲ್?, ಮೇ 31ಕ್ಕೆ ಪ್ರಮಾಣವಚನ ಸಾಧ್ಯತೆ

ಸಿದ್ದು ನಿರ್ಗಮನದ ಬಳಿಕ ಅಸಮಾಧಾನ ತಣಿಸಲು ಕಾಂಗ್ರೆಸ್ ಮಾಸ್ಟರ್‌ಪ್ಲ್ಯಾನ್: 4 DCM ಹುದ್ದೆ ಸೃಷ್ಟಿಗೆ ಚಿಂತನೆ, ಜಮೀರ್, ಪ್ರಿಯಾಂಕ್ ಖರ್ಗೆ, ಎಂಬಿ ಪಾಟೀಲ್ ಹೆಸರು ಫೈನಲ್?

ಕರ್ನಾಟಕ ಕಾಂಗ್ರೆಸ್‌ನಲ್ಲಿ ಮತ್ತೊಂದು ಪವರ್ ಶಿಫ್ಟ್: ಅಹಿಂದ ಸಮೀಕರಣಕ್ಕೆ ಮಾಸ್ಟರ್‌ಪ್ಲ್ಯಾನ್, ಸತೀಶ್‌ ಜಾರಕಿಹೊಳಿಗೆ KPCC ಜವಾಬ್ದಾರಿ?

SCROLL FOR NEXT