ಬೆಂಗಳೂರು: ಬೆಂಗಳೂರಿನಲ್ಲಿರುವ ಚಿತ್ರಕಲಾ ಪರಿಷತ್ತು ಮತ್ತು ಮೈಸೂರಿನಲ್ಲಿರುವ ಚಾಮರಾಜೇಂದ್ರ ದೃಶ್ಯಕಲಾ ಅಕಾಡೆಮಿ (ಕಾವಾ) ಕಾಲೇಜು ಡೀಮ್ಡ್ ವಿವಿಯಾಗಿ
ಪರಿವರ್ತನೆಯಾಗಲಿ ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಎಂ. ವೀರಪ್ಪ ಮೊಯ್ಲಿ ಅಭಿಪ್ರಾಯಪಟ್ಟರು.
ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಏರ್ಪಡಿಸಿರುವ ಎ. ರಾಮಕೃಷ್ಣಪ್ಪ ಮತ್ತು ಕಲಾವಿದೆ ಪ್ರಭಾ ಶಂಕರ್ ಅವರ ಕಲಾ ಕೃತಿಗಳ ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಅವರು, ತಾವು ಮುಖ್ಯಮಂತ್ರಿಯಾಗಿದ್ದಾಗ ಕಾವಾ ಕಾಲೇಜನ್ನು ಕಾರ್ಮಿಕ ಇಲಾಖೆ ನೋಂದಣಿ ಮಾಡಿಸುವಂತೆ ಸೂಚಿಸಿತ್ತು. ಈ ರೀತಿ ಆಗಲು ಎಲ್ಲಾದರು ಉಂಟಾ ಎಂದು ಪ್ರಶ್ನಿಸಿದ್ದ ತಾವು, ಅದು ಅಂಗಡಿಯಲ್ಲ; ಅದೊಂದು ಕಲಾತಾಣ. ಡೀಮ್ಡ್ ವಿವಿ ಮಟ್ಟಕ್ಕೆ ಬೆಳೆಯಬೇಕಾದ ಸಂಸ್ಥೆ ಕಾವಾ ಎಂದಿದ್ದೆ ಎಂದು ಸ್ಮರಿಸಿದರು.
ಕಾವಾ ಮತ್ತು ಚಿತ್ರಕಲಾ ಪರಿಷತ್ತು ಡೀಮ್ಡ್ ವಿವಿಯಾಗುವ ಅರ್ಹತೆ ಹೊಂದಿವೆ. ಯುಜಿಸಿಗೆ ಪ್ರಸ್ತಾವನೆ ಸಲ್ಲಿಸಿದರೆ ಅನುಮತಿ ಸಿಗುವುದು ಕಷ್ಟವಾಗುವುದಿಲ್ಲ. ಅನುದಾನವು ಬರುವುದರಿಂದ ಕಲಾವಿದರ ಸಂಖ್ಯೆ ಹೆಚ್ಚಾಗಲಿದೆ. ಸಿಕೆಪಿಯನ್ನು ಬಿ.ಎಲ್.ಶಂಕರ್, ಟಿ.ಕೆ.ಚೌಟ, ಕೆ.ಇ.ರಾಧಾಕೃಷ್ಣ ಅವರು ಸರಿಯಾದ ದಾರಿಯಲ್ಲಿ ಮುನ್ನಡೆಸುತ್ತಿದ್ದಾರೆ. ಮನಸ್ಸಿನ ಭಾವನೆ ಜಗತ್ತು ನಿರ್ಮಾಣವಾಗಲು ಕಲೆಯ ಸ್ಪರ್ಶ ಇರಬೇಕು. ಸಂವೇದನಾಶೀಲ ಇದ್ದಲ್ಲಿ ಮಾತ್ರ ಜಗತ್ತನ್ನೆ ಗೆಲ್ಲುವ ಛಲ ಬರಲಿದೆ ಎಂದು ಅವರು ತಿಳಿಸಿದರು.
ಹಿರಿಯ ಸಾಹಿತಿ ಡಾ.ಎಂ.ಎಚ್. ಕೃಷ್ಣಯ್ಯ, ಲಯನ್ ಜಿಲ್ಲಾ ರಾಜ್ಯಪಾಲರ ಎನ್.ಕುಮಾರ್, ಶಾಸಕ ಎಚ್.ಎಂ.ರೇವಣ್ಣ, ಆರ್. ವಿ. ವೆಂಕಟೇಶ್, ಹಿರಿಯ ಕಲಾವಿದ ಬಿ.ಕೆ.ಎಸ್.ವರ್ಮಾ, ಕಲಾವಿದ ಎ.ರಾಮಕೃಷ್ಣಪ್ಪ, ಪ್ರಭಾ ಶಂಕರ್ ಉಪಸ್ಥಿತರಿದ್ದರು.
ಹಳ್ಳಿಯ ಸೊಬಗು; ಶಾಕುಂತಲೆಯ ಮೆರುಗು: ಚಿತ್ರಕಲಾ ಪರಿಷತ್ತಿನಲ್ಲಿ ಆರಂಭ ವಾದ ಏಳು ದಿನಗಳ ಚಿತ್ರಕಲಾ ಪ್ರದರ್ಶವು ಹಳ್ಳಿಯ ಸೊಬಗನ್ನು ಒಂದು ಕಡೆ ಪಸರಿಸಿ ದರೆ, ಮತ್ತೊಂಡೆ ದುಶ್ಯಂತ ಮತ್ತು ಶಾಕುಂತಲೆಯ ಲೀಲಾ ವಿನೋದವನ್ನು ಚಿತ್ರಿಸಿದೆ. ಕಲಾವಿದ ಎ. ರಾಮಕೃಷ್ಣಪ್ಪ ಅವರು ಹುಟ್ಟೂರಾದ ಚೋಳನಾಯಕನಹಳ್ಳಿ ಯ ಗ್ರಾಮೀಣ ಸೊಗಡು, ಅಮೆರಿಕಾದ ವನಸಿರಿ, ಜಲಪಾತದ ದೃಶ್ಯವನ್ನು ಕಟ್ಟಿಕೊಟ್ಟಿ ದ್ದಾರೆ. ಹಾಗೆ ಮತ್ತೊಬ್ಬ ಕಲಾವಿದೆ ಪ್ರಭಾ ಶಂಕರ್ ಅವರು ಅಭಿಜ್ಞಾನ ಶಾಕುಂತಲೆಯ ಪ್ರೇಮ ನಿವೇದನೆಯನ್ನು ಬಣ್ಣಗಳಲ್ಲಿ ಹಿಡಿದಿಟ್ಟುಕೊಟ್ಟಿದ್ದಾರೆ.
ಹಿಟ್ಲರ್ ಒಬ್ಬ ಕಲಾವಿದ!
ಹಿಟ್ಲರ್ ಒಬ್ಬ ಕಲಾವಿದನಾಗಿದ್ದ. ಆತ ಜಿನೀವಾಗೆ ಹೋಗಿ ಚಿತ್ರಕಲಾ ಶಾಲೆಗೆ ಪ್ರವೇಶಾತಿಗೆ ಅರ್ಜಿ ಸಲ್ಲಿಸಿದಾಗ ದುರಾದೃಷ್ಟವಶಾತ್ ಅಂದು ಪ್ರವೇಶ ನಿರಾಕರಣೆಯಾಯಿತು. ಕಲಾವಿದನ ಮನಸ್ಸಿನಲ್ಲಿದ್ದ ವ್ಯಕ್ತಿ ನಿರಾಶೆಯಿಂದ ಸರ್ವಾಧಿಕಾರಿಯಾದ. ಕಲಾವಂತಿಕೆ ಯಿಂದ ಜನರ ಮನಸ್ಸು ಗೆಲ್ಲಬೇಕಾ ದವನು ಎರಡನೇ ಮಹಾಯುದ್ಧಕ್ಕೆ ಕಾರಣನಾದ. ಹಿಟ್ಲರ್‍ಗೆ ನಿಜವಾಗಿಯೂ ಚಿತ್ರಕಲಾ ಶಾಲೆಯಲ್ಲಿ ಸೀಟು ಸಿಕ್ಕಿದ್ದರೆ ಕಲಾವಿದ ಹಿಟ್ಲರ್ ಆಗುತ್ತಿದ್ದ ಎಂದು ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯ್ಲಿ ಹೇಳಿದರು.