ಜಿಲ್ಲಾ ಸುದ್ದಿ

ಸಂಸ್ಕೃತಿಯಿಂದಷ್ಟೇ ವಿಶ್ವಮಾನವ: ಸಿಎಂ ಪ್ರತಿಪಾದನೆ

Shilpa D

ಬೆಂಗಳೂರು: ಪ್ರತಿಯೊಬ್ಬರು ಶಿಕ್ಷಣ, ಸಂಸ್ಕೃತಿ ಮತ್ತು ನಾಗರಿಕತೆ ರೂಢಿಸಿಕೊಂಡಾಗ ವಿಶ್ವಮಾನವರಾಗಲು ಸಾಧ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಪಾದಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಮ್ಮಿಕೊಂಡಿದ್ದ ರಾಷ್ಟ್ರಕವಿ ಕುವೆಂಪು ಜನ್ಮದಿನವನ್ನು ವಿಶ್ವಮಾನವ ದಿನವನ್ನಾಗಿ ಆಚರಿಸಿದ ಮೊದಲ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪ್ರಪಂಚ ವಿಜ್ಞಾನ ತಂತ್ರಜ್ಞಾನ, ಜಾಗತಿಕ ಭರಾಟೆಯಿಂದ ಸಂಕೀರ್ಣತೆಯೆಡೆಗೆ ಹೊರಳುತ್ತಿದೆ.

ದುರಾದೃಷ್ಟವಶಾತ್ ಮನುಷ್ಯರ ಮನಸ್ಸು ಕೂಡ ಕಿರಿದಾಗುತ್ತಿದ್ದು ಇದು ವಿಶ್ವಕ್ಕೆ ಅಪಾಯಕಾರಿ. ಜಗತ್ತು ಬೆಳೆದಂತೆ ಚಿಕ್ಕದಾಗಬೇಕು, ಮನುಷ್ಯ ಬೆಳೆದಂತೆ ಆತನ ಮನಸ್ಸು ಹಿರಿದಾಗಬೇಕು. ೇಹೃದಯ ವೈಶಾಲ್ಯತೆ ಹೆಚ್ಚಾದಾಗ ಆತವಿಶ್ವಮಾನವನಾಗಲು ಸಾಧ್ಯ ಎಂದರು.
ಜಿಡ್ಡುಗಟ್ಟಿದ ಸಮಾಜ ಚಲನಾರಹಿತವಾಗಿದೆ. ಆರ್ಥಿಕ, ಸಾಮಾಜಿಕ ಸಮಾನತೆ ಇಲ್ಲದಿದ್ದರೆ ಚಲನಶೀಲತೆ ಇರುವುದಿಲ್ಲ. ಎಲ್ಲಿ ದಾಸ್ಯವಿರುತ್ತದೋ ಅಲ್ಲಿ ಶೋಷಣೆ ಇರುತ್ತದೆ. ಎಲ್ಲಿ ಶೋಷಣೆ ಇರುತ್ತದೋ ಅಲ್ಲಿ ಮೌಢ್ಯವಿರುತ್ತದೆ.

ಆದ್ದರಿಂದಲೇ ಕುವೆಂಪು ಅವರು ಮೌಢ್ಯವನ್ನು ತಿರಸ್ಕರಿಸಿ ಹೊರ ಬನ್ನಿ ಎಂದು ಕರೆ ನೀಡಿದ್ದರು. ಮೌಢ್ಯಕ್ಕೆ ಹೆಚ್ಚಾಗಿ ಶೋಷಿತರು ಬಲಿಯಾಗುತ್ತಿದ್ದಾರೆ. ನಮ್ಮ ಸರ್ಕಾರ ಮೌಢ್ಯ ನಿಷೇಧ ಕಾಯಿದೆ ಜಾರಿಗೆ ತರಲು ಗಂಭೀರ ಚಿಂತನೆ ನಡೆಸಿದ್ದು ಮನುಷ್ಯನ ವಿಕಾಸಕ್ಕೆ ತಡೆಯೊಡ್ಡಿರುವ ಅಪನಂಬಿಕೆ, ಮೌಢ್ಯಗಳನ್ನು ತೊಡೆದು ಹಾಕುವುದೇ ವಿನಃ ಧರ್ಮ, ದೇವರು, ನಂಬಿಕೆಗಳನ್ನಲ್ಲ ಎಂದು ಸಿಎಂ ಸ್ಪಷ್ಟಪಡಿಸಿದರು.

SCROLL FOR NEXT