ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಉಮಾಶ್ರೀ 
ಜಿಲ್ಲಾ ಸುದ್ದಿ

ಉಮಾಶ್ರೀ ಭರವಸೆ, ಪ್ರತಿಭಟನೆ ಹಿಂದಕ್ಕೆ

ಅಂಗನವಾಡಿ ಕಾರ್ಯಕರ್ತೆಯರ ಬೃಹತ್ ಪ್ರತಿಭಟನೆ ಬಿಸಿ ವಿಧಾನಸೌಧಕ್ಕೆ ತಟ್ಟುತ್ತಿದ್ದಂತೆ ಸಂಜೆ 6.30ಕ್ಕೆ...

ಬೆಂಗಳೂರು: ಅಂಗನವಾಡಿ ಕಾರ್ಯಕರ್ತೆಯರ ಬೃಹತ್ ಪ್ರತಿಭಟನೆ ಬಿಸಿ ವಿಧಾನಸೌಧಕ್ಕೆ ತಟ್ಟುತ್ತಿದ್ದಂತೆ ಸಂಜೆ 6.30ಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಉಮಾಶ್ರೀ ಸ್ಥಳಕ್ಕೆ ದೌಡಾಯಿಸಿದರು.

 ಪ್ರತಿಭಟನಾನಿರತರ ಜತೆ ಮಾತುಕತೆ ನಡೆಸಿದ ಅವರು, ಸದ್ಯಕ್ಕೆ 2 ಬೇಡಿಕೆಗಳನ್ನು ಈಡೇರಿಸಿ, ಉಳಿದ ಬೇಡಿಕೆಗಳನ್ನು ಪರಿಶೀಲಿಸಿ ಹಂತಹಂತವಾಗಿ ಈಡೇರಿಸುವ ಭರವಸೆ ನೀಡಿದರು. ಈ ಹಿನ್ನೆಲೆಯಲ್ಲಿ ಪ್ರತಿಭಟನೆ ಹಿಂಪಡೆಯಲು ಕಾರ್ಯಕರ್ತೆಯರು ಒಪ್ಪಿದರು. ಅಂಗನವಾಡಿಗಳನ್ನು ಖಾಸಗೀಕರಣ ಮಾಡುವ ಉದ್ದೇಶ ಕೈಬಿಡಲಾಗುತ್ತದೆ. ಮುಂಬರುವ ಬಜೆಟ್‍ನಲ್ಲಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಗೌರವಧನ ರು. 1 ಸಾವಿರಕ್ಕೆ ಹೆಚ್ಚಿಸುವುದಾಗಿ ಉಮಾಶ್ರೀ ಭರವಸೆ ಕೊಟ್ಟಿದ್ದಾರೆ.

ಅಂಗನವಾಡಿ ಕೇಂದ್ರಗಳನ್ನು ಬಂದ್ ಮಾಡಿ ಪ್ರತಿಭಟನೆ ಕೈಗೊಂಡಿದ್ದಕ್ಕೆ ನೀಡಲಾಗಿದ್ದ ನೋಟಿಸ್ ಹಿಂಪಡೆಯಲಾಗುವುದು. ಮುಷ್ಕರ ವೇಳೆ ಕೆಲಸ ಮಾಡಿರದಿದ್ದರೂ 11 ದಿನಗಳ ಗೌರವಧನ ನೀಡಲಾಗುವುದು. ಪಿಂಚಣಿ ನೀಡುವ ಸಂಬಂಧ ಮುಂದಿನ ದಿನದಲ್ಲಿ ಕ್ರಮ ಕೈಗೊಳ್ಳುವುದಾಗಿ ಸಚಿವರು ಭರವಸೆ ನೀಡಿದ್ದಾರೆ. ಕಾರ್ಯಕರ್ತೆಯರಿಗೆ ರು. 5,500 ಹಾಗೂ ಸಹಾಯಕಿಯರಿಗೆ ರು. 2,750 ಗೌರವಧನ ನೀಡಲಾಗುತ್ತಿದೆ. ಗೌರವಧನ ಹೆಚ್ಚಳ ಮಾಡದಿದ್ದರೆ ಮತ್ತೆ ಪ್ರತಿಭಟನೆಗೆ ಇಳಿಯುವುದಾಗಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಹಿತರಕ್ಷಣಾ ಸಮಿತಿ ತಿಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನೇಪಾಳದಲ್ಲಿ ಭೀಕರ ಪ್ರವಾಹ; ಮೃತರ ಸಂಖ್ಯೆ 903ಕ್ಕೆ ಏರಿಕೆ, ವಿದೇಶಿಯರು ಸೇರಿ 4,000ಕ್ಕೂ ಹೆಚ್ಚು ಮಂದಿ ಇನ್ನೂ ನಾಪತ್ತೆ!

ನೆರೆ ಸಂತ್ರಸ್ತರಿಗೆ ನೆರವು ಹೊತ್ತು ಹೋದವರಿಗೆ ಶಾಕ್: 'ಇಲ್ಲೇ ಖರೀದಿಸಿ' ಎಂದ ನೇಪಾಳ ಅಧಿಕಾರಿಗಳು! ಆಗಿದ್ದೇನು?

Hit And Run: ಪಾದಚಾರಿಗೂ ಬದುಕಿ ರಸ್ತೆ ದಾಟುವ ಹಕ್ಕಿದೆ: ದೆಹಲಿ ಕೋರ್ಟ್

ರಾಹುಲ್ ಗಾಂಧಿಯನ್ನು ಪ್ರಧಾನಿ ಅಭ್ಯರ್ಥಿಯಾಗಿ ಒಪ್ಪದಿದ್ದರೆ TVK ಸಂಪುಟದಿಂದ ಕಾಂಗ್ರೆಸ್ ಹೊರಬರಲಿದೆ: ಸಚಿವ

ಇಸ್ಲಾಂ ಧರ್ಮವೇ ಶ್ರೇಷ್ಠ: ಸಿಎಂ ಡಿಕೆಶಿಯ 6ನೇ ಗ್ಯಾರಂಟಿ- ಹಿಂದೂಗಳಿಗೆ ‘ಸುನ್ನತ್ ಗ್ಯಾರಂಟಿ' ರಾಯರೆಡ್ಡಿ ಕ್ಷಮೆಯಾಚನೆಗೆ ಬಿಜೆಪಿ ಒತ್ತಾಯ!