ಜಿಲ್ಲಾ ಸುದ್ದಿ

ಸಂಚಾರ ಪೊಲೀಸರಲ್ಲಿ ವಿಟಮಿನ್ ಡಿ ಕೊರತೆ

ನಗರ ಟ್ರ್ಯಾಫಿಕ್ ಪೊಲೀಸರಲ್ಲಿ ವಿಟಮಿನ್ ಡಿ ಕೊರತೆ ಹೆಚ್ಚು ಕಾಡುತ್ತಿದೆ. ನೂರಕ್ಕೆ ಶೇ.75ರಷ್ಟು ಮಂದಿಗೆ...

ಬೆಂಗಳೂರು: ನಗರ ಟ್ರ್ಯಾಫಿಕ್ ಪೊಲೀಸರಲ್ಲಿ ವಿಟಮಿನ್ ಡಿ ಕೊರತೆ ಹೆಚ್ಚು ಕಾಡುತ್ತಿದೆ. ನೂರಕ್ಕೆ ಶೇ.75ರಷ್ಟು ಮಂದಿಗೆ ವಿಟಮಿನ್ ಡಿ ಕೊರತೆ ಇದೆ.

ನಗರದ ಹೀಲ್ ಫೌಂಡೇಷನ್ ಹಾಗೂ ಗ್ಲೆನ್‍ಮಾರ್ಕ್ ಸಹಯೋಗದೊಂದಿಗೆ ಬಾನ್ ಡಿ ಲೈಟ್ ಅಭಿಯಾನದ ಭಾಗವಾಗಿ ಡಿ3 ಎಂಬ ಶಿಬಿರ ನಡೆಸಿ ಬೆಂಗಳೂರು ದಕ್ಷಿಣ ವಿಭಾಗದ 240 ಪೊಲೀಸ್ ಸಿಬ್ಬಂದಿಯನ್ನು ತಪಾಸಣೆಗೊಳಪಡಿಸಿದಾಗ ಶೇ.50ರಷ್ಟು ಅಂದರೆ ಸುಮಾರು 187 ಮಂದಿಯಲ್ಲಿ ವಿಟಮಿನ್ `ಡಿ' ಕೊರತೆ ಇರುವುದು ಬೆಳಕಿಗೆ ಬಂದಿದೆ.

ಇತ್ತೀಚಿನ ಸಂಶೋಧನೆಗಳ ಪ್ರಕಾರ ವಿಟಮಿನ್ `ಡಿ' ಕೊರತೆ ಹೆಚ್ಚಿನ ಜನರಲ್ಲಿ ಕಾಣಿಸಿಕೊಳ್ಳುತ್ತಿದೆ. ಇದು ಆಘಾತಕಾರಿ ಅಂಶವೇ ಸರಿ. ಆಹಾರದ ಜತೆಗೆ ವಿಟಮಿನ್ ಡಿ ಪೂರಕಗಳು ಅತ್ಯಗತ್ಯ. ಮಾಂಸಾಹಾರಿಗಳು ಮೀನು, ಸಸ್ಯಹಾರಿಗಳು ಸೊಪ್ಪು ಹಾಗೂ ತರಕಾರಿಗಳನ್ನು ಹೆಚ್ಚಾಗಿ ಸೇವಿಸಬೇಕು. ವಿಟಮಿನ್‍ನ ಕೊರತೆಯಿಂದ ಮಧುಮೇಹ, ಹೃದಯ ಸಮಸ್ಯೆಗಳು, ಕ್ಯಾನ್ಸರ್ ಸಹ ಬರುವ ಸಂಭವವಿದೆ ಎಂದು ತಜ್ಞರು ತಿಳಿಸುತ್ತಾರೆ. ಈ ಬಗ್ಗೆ ಪ್ರತಿಕ್ರಿಯಸಿರುವ ಸಂಚಾರ ಮತ್ತು ಭದ್ರತೆ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ದಯಾನಂದ್, ಸಂಚಾರ ಪೊಲೀಸರಲ್ಲಿ ವಿಟಮಿನ್ `ಡಿ' ಕೊರತೆ ಇರುವುದು ಈಗ ಬೆಳಕಿಗೆ ಬಂದಿದೆ ಈ ಕೊರತೆ ಸರಿಪಡಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT