ಜಿಲ್ಲಾ ಸುದ್ದಿ

ಹಾಲೋಬ್ರಿಕ್ಸ್ ಬಿದ್ದು ಕಾರ್ಮಿಕ ಸಾವು

ತಲೆ ಮೇಲೆ ಆಕಸ್ಮಿಕವಾಗಿ ಹಾಲೋಬ್ರಿಕ್ಸ್ ಬಿದ್ದು ಕಾರ್ಮಿಕ ಮೃತಪಟ್ಟಿರುವ ಘಟನೆ ಕಮ್ಮನಹಳ್ಳಿಯ ಸೇಂಟ್...

ಬೆಂಗಳೂರು: ತಲೆ ಮೇಲೆ ಆಕಸ್ಮಿಕವಾಗಿ ಹಾಲೋಬ್ರಿಕ್ಸ್ ಬಿದ್ದು ಕಾರ್ಮಿಕ ಮೃತಪಟ್ಟಿರುವ ಘಟನೆ ಕಮ್ಮನಹಳ್ಳಿಯ ಸೇಂಟ್ ಚಾರ್ಲ್ಸ್ ಶಾಲೆ ಆವರಣದ ನಿರ್ಮಾಣದ ಹಂತದ ಕಟ್ಟಡದಲ್ಲಿ ನಡೆದಿದೆ.

ಬಳ್ಳಾರಿ ಮೂಲದ ಸರವಣ(26) ಮೃತರು. 5ನೇ ಮಹಡಿ ಕಟ್ಟಡದಲ್ಲಿ ಇತರ ಕಾರ್ಮಿಕರೊಂದಿಗೆ ಕಳೆದ ಮೂರು ತಿಂಗಳಿಂದ ಸರವಣ ಕೆಲಸ ಮಾಡುತ್ತಿದ್ದರು. ಶುಕ್ರವಾರ ಮಧ್ಯಾಹ್ನ 1.30ರ ಸುಮಾರಿಗೆ ಸರವಣ ನೆಲ ಮಹಡಿ ಯಲ್ಲಿ ಹಾಲೋಬ್ರಿಕ್ಸ್ ಗಳನ್ನು ಲೋಡ್ ಮಾಡಿ 5ನೇ ಮಹಡಿಗೆ ಯಂತ್ರದ ಮೂಲಕ ಕಳುಹಿಸುತ್ತಿದ್ದರು.

ಮೇಲಿನ ಮಹಡಿಯಲ್ಲಿ ಅದನ್ನು ಮತ್ತೊಬ್ಬ ಕಾರ್ಮಿಕ ಅನ್‍ಲೋಡ್ ಮಾಡುತ್ತಿದ್ದಾಗ ಆಕಸ್ಮಿಕವಾಗಿ ಒಂದು ಹಾಲೋಬ್ರಿಕ್ಸ್ ಜಾರಿ ಸರವಣನ ತಲೆ ಮೇಲೆ ಬಿದ್ದಿದೆ. ರಕ್ತಸ್ರಾವವಾಗಿ ಕುಸಿದು ಬಿದ್ದ ಸರವಣ ಅವರನ್ನು ಆಸ್ಪತ್ರೆಗೆ ಕರೆದೊಯ್ದಿ ದ್ದಾರೆ. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ