ಯಲಹಂಕ ವಾಯುನೆಲೆಯಲ್ಲಿ ನಿಂತಿರುವ ವಿಮಾನಗಳು (ಸಂಗ್ರಹ ಚಿತ್ರ) 
ಜಿಲ್ಲಾ ಸುದ್ದಿ

ನಾಳೆಯಿಂದ ಏರೋ ಇಂಡಿಯಾ ವೈಮಾನಿಕ ಪ್ರದರ್ಶನ

ಅತಿ ದೊಡ್ಡ ಹಾಗೂ ಅತಿ ಹೆಚ್ಚು ಬಂಡವಾಳ ಸೆಳೆಯುವ ಉಕ್ಕಿನ ಹಕ್ಕಿಗಳ ಜಾಗತಿಕ ಉತ್ಸವ ನಾಳೆ ಉದ್ಘಾಟನೆಗೊಳ್ಳಲಿದೆ.

ಬೆಂಗಳೂರು: ಅತಿ ದೊಡ್ಡ ಹಾಗೂ ಅತಿ ಹೆಚ್ಚು ಬಂಡವಾಳ ಸೆಳೆಯುವ ಉಕ್ಕಿನ ಹಕ್ಕಿಗಳ ಜಾಗತಿಕ ಉತ್ಸವ ನಾಳೆ ಉದ್ಘಾಟನೆಗೊಳ್ಳಲಿದೆ.

`ಮೇಕ್ ಇನ್ ಇಂಡಿಯಾ' ನೆರಳಿನಲ್ಲಿ ನಡೆಯುತ್ತಿರುವ ಏರೋ ಇಂಡಿಯಾ-2015ಅನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸುವರು. ರಕ್ಷಣಾ ಸಚಿವ ಮನೋಹರ ಪರಿಕರ್ ಜತೆಗೆ ಬೆಳಗ್ಗೆ 9 ಗಂಟೆಗೆ ಯಲಹಂಕ ವಾಯುನೆಲೆಗೆ ಆಗಮಿಸಲಿದ್ದು, ಸುಮಾರು ಎರಡೂ ವರೆ ಗಂಟೆಗಳ ಕಾಲದ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಭಾರತೀಯ ವಾಯುಸೇನೆ ಆರಂಭವಾದ ದಿನದಿಂದ ಇವತ್ತಿನವರೆಗಿನ ಶಕ್ತಿ ಪ್ರದರ್ಶನವು ಪ್ರಧಾನಿ ಎದುರು ನಡೆಯಲಿದೆ. ಇದರಲ್ಲಿ ತೇಜಸ್, ಸುಖೋಯ್, ಸಾರಂಗ್ ತಂಡದ ಪ್ರದರ್ಶನ ಆಕರ್ಷಕವಾಗಿರುತ್ತದೆ. ವಾಯುಸೇನೆ ಪೈಲಟ್‍ಗಳ ಪಾಲಿಗೆ ಇದು ಜೀವನದ ಕನಸಿನ ಕ್ಷಣವಾಗಿರುತ್ತದೆ.

ಸಾರ್ವಜನಿಕರ ಪ್ರವೇಶ ಹೇಗೆ?
ಏರೋ ಇಂಡಿಯಾ ವೆಬ್‍ಸೈಟ್ (https://www.aeroindia.in/GeneralVisitorRegistration.aspx) ಗೆ ಭೇಟಿ ನೀಡಿ ನಿಮ್ಮ ಮಾಹಿತಿ ದಾಖಲಿಸಬೇಕು. ಆನ್‍ಲೈನ್‍ಲ್ಲಿಯೇ ಹಣ ಪಾವತಿಸಿ ಟಿಕೆಟ್ ಪಡೆಯಬಹುದಾಗಿದೆ. ಸಾಮಾನ್ಯ ಜನರ ಪ್ರದರ್ಶನ ಜಾಗಕ್ಕೆ ಮಾತ್ರ ಪ್ರವೇಶ ಸೀಮಿತವಾಗಿರುತ್ತದೆ. ಉದ್ಘಾಟನೆ ದಿನ ಮಾತ್ರ ಮಧ್ಯಾಹ್ನ 1 ಗಂಟೆವರೆಗೆ ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿದೆ. ಉಳಿದಂತೆ ಬೆಳಗ್ಗೆ 9 ಗಂಟೆಯಿಂದ ಸಂಜೆ 5ರವರೆಗೆ ಫೆ.22ರವರೆಗೂ ಪ್ರವೇಶವಿರುತ್ತದೆ. ಆನ್ ಲೈನ್ ಟಿಕೆಟ್ ಹೊರತುಪಡಿಸಿ  ಆ್ಯಕ್ಸಿಸ್ ಬ್ಯಾಂಕ್ ನ ಕೆಲ ಶಾಖೆಗಳಲ್ಲಿಯೂ ಟಿಕೆಟ್ ಲಭ್ಯವಿದೆ. ಟಿಕೆಟ್ ಬೆಲೆ ರು.600 ಆಗಿದೆ.

ಐದು ದಿನಗಳ ಪ್ರದರ್ಶನದಲ್ಲಿ ಯಾವುದಾದರು ಒಂದು ದಿನ ಬಳಸಬಹುದು. ಟಿಕೆಟ್ ಜತೆ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ತರಬೇಕು. ಮಕ್ಕಳು ಹಾಗೂ ಗರ್ಭಿಣಿ ಪ್ರದರ್ಶನಕ್ಕೆ ಬರದಿರುವುದು ಒಳ್ಳೆಯದು ಎಂದು ಸಂಘಟನಾ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆ್ಯಕ್ಸಿಸ್ ಬ್ಯಾಂಕ್ ನ ಈ ಶಾಖೆಗಳಲ್ಲಿ ಟಿಕೆಟ್ ದೊರೆಯಲಿದೆ
ಕಾಕ್ಸ್ ಟೌನ್(ಶಾಖೆ ಸಂಖ್ಯೆ 231), ಇಂದಿರಾನಗರ(114), ಜೆಪಿನಗರ(333), ಜಯನಗರ(52), ಕೋರಮಂಗಲ(194), ಎಂಜಿ ರಸ್ತೆ(9), ಮಲ್ಲೇಶ್ವರ(227), ಸಹಕಾರನಗರ(561), ಸರ್ಜಾಪುರ ರಸ್ತೆ(1888), ವೈಟ್‍ಫೀಲ್ಡ್(514), ಯಲಹಂಕ(94), ಯಶವಂತಪುರ(1614)

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಾಂವಿಧಾನಿಕ ಕರ್ತವ್ಯಗಳು ಪ್ರಜಾಪ್ರಭುತ್ವದ ಅಡಿಪಾಯ: ದೇಶದ ನಾಗರಿಕರಿಗೆ ಪ್ರಧಾನಿ ಮೋದಿ ಪತ್ರ

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್​ ನ್ಯೂಸ್​: ಹಳದಿ ಮಾರ್ಗದ ಸಂಚಾರ ಸೋಮವಾರ ಬೆಳಗ್ಗೆ 5 ಗಂಟೆಯಿಂದಲೇ ಶುರು..!

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಸಿಎಂ ಹುದ್ದೆ ಗುದ್ದಾಟ: ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ಗೆ ಹೈಕಮಾಂಡ್ ದೆಹಲಿಗೆ ಬುಲಾವ್ ಸಾಧ್ಯತೆ

ನವೆಂಬರ್ 28ರಂದು ಉಡುಪಿಗೆ ಪ್ರಧಾನಿ ಮೋದಿ: ಬನ್ನಂಜೆಯಿಂದ ಕಲ್ಸಂಕ ಜಂಕ್ಷನ್‌ವರೆಗೆ ರೋಡ್ ಶೋ

SCROLL FOR NEXT