ಭೂಗತ ಲೋಕದ ಮಾಜಿ ದೊರೆ ಮುತ್ತಪ್ಪ ರೈ 
ಜಿಲ್ಲಾ ಸುದ್ದಿ

ಮುತ್ತಪ್ಪ ರೈಗೆ ಪಾಸ್ಪೋರ್ಟ್

ಭೂಗತ ಲೋಕದ ಮಾಜಿ ದೊರೆ ಮುತ್ತಪ್ಪ ರೈ ಅವರಿಗೆ ಎಲ್ಲ ರಾಷ್ಟ್ರಗಳಿಗೂ ಪ್ರಯಾಣ ಬೆಳೆಸಲು ಅನುಕೂಲವಾಗುವ ಪಾಸ್ಪೋರ್ಟ್ ನೀಡುವ ಸಂಬಂಧ ಹೊಸದಾಗಿ ಅರ್ಜಿ ಸಲ್ಲಿಸುವಂತೆ ಹೈಕೋರ್ಟ್ ಸೂಚಿಸಿದೆ...

ಬೆಂಗಳೂರು: ಭೂಗತ ಲೋಕದ ಮಾಜಿ ದೊರೆ ಮುತ್ತಪ್ಪ ರೈ ಅವರಿಗೆ ಎಲ್ಲ ರಾಷ್ಟ್ರಗಳಿಗೂ ಪ್ರಯಾಣ ಬೆಳೆಸಲು ಅನುಕೂಲವಾಗುವ ಪಾಸ್ಪೋರ್ಟ್ ನೀಡುವ ಸಂಬಂಧ ಹೊಸದಾಗಿ ಅರ್ಜಿ ಸಲ್ಲಿಸುವಂತೆ ಹೈಕೋರ್ಟ್ ಸೂಚಿಸಿದೆ.

ಭೂಗತಲೋಕದ ಹಿನ್ನೆಲೆ ಇದ್ದ ಕಾರಣ ಪಾಸ್ಪೋರ್ಟ್ ಇಲಾಖೆ ಅವರ ಪಾಸ್ಪೋರ್ಟ್ಅನ್ನು ವಶಕ್ಕೆ ಪಡೆದುಕೊಂಡಿತ್ತು. ಇದನ್ನು ಪ್ರಶ್ನಿಸಿ ಮುತ್ತಪ್ಪ ರೈ ಹೈಕೋರ್ಟ್ ಮೆಟ್ಟಿಲೇರಿದ್ದರು. ವಿಚಾರಣೆ ನಡೆಸಿದ ನ್ಯಾ.ಅಬ್ದುಲ್ ನಜೀರ್ ಅವರಿದ್ದ ಪೀಠ, ಪಾಸ್ಪೋರ್ಟ್ ನೀಡುವಂತೆ ಕೋರಿ ಅರ್ಜಿ ಸಲ್ಲಿಸಿದ ಮೂರು ತಿಂಗಳ ಒಳಗಾಗಿ ಪರಿಶೀಲಿಸಿ, ಕಾನೂನಿನ ಪ್ರಕಾರ ಕ್ರಮ ತೆಗೆದುಕೊಳ್ಳುವಂತೆ ಇಲಾಖೆಗೆ ಸೂಚಿಸಿ ಅರ್ಜಿ ಇತ್ಯರ್ಥಪಡಿಸಿದೆ.

ಭೂಗತ ಲೋಕದ ನಂಟು ಹೊಂದಿದ್ದ ಕಾರಣ ಪಾಸ್ಪೋರ್ಟ್  ಇಲಾಖೆ ಮುತ್ತಪ್ಪ ರೈ ಪಾಸ್ಪೋರ್ಟ್  ವಶಕ್ಕೆ ಪಡೆದಿತ್ತು. ತಮ್ಮ ವಿರುದ್ಧ ದಾಖಲಾದ ಎಲ್ಲ ಪ್ರಕರಣಗಳು ಖುಲಾಸೆಗೊಂಡಿದ್ದು, ಪಾಸ್ಪೋರ್ಟ್  ಹಿಂತಿರುಗಿಸುವಂತೆ ಕೋರ್ಟ್ ಮೊರೆ ಹೋಗಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸುಖೋಯ್, ತೇಜಸ್, ಕಿರಣ್: ವಾರಣಾಸಿಯಲ್ಲಿ ಅದ್ಭುತ ವಾಯು ಪ್ರದರ್ಶನಕ್ಕೆ ಸಾಕ್ಷಿಯಾದ ಪ್ರಧಾನಿ ಮೋದಿ! Video

ಫ್ರಾನ್ಸ್‌ನಲ್ಲಿ ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆಗಳು: ಭುಗಿಲೆದ್ದ ಸಂಘರ್ಷ; 1,000 ಮಂದಿ ಬಂಧನ

'ಮತ ಗಳ್ಳತನ' ಪ್ರತಿಭಟನೆ ನಡುವೆ ಅ. 30 ರಿಂದ ನ. 1 ರವರೆಗೆ ದೆಹಲಿಯಲ್ಲೇ ಇರುವಂತೆ ಕಾಂಗ್ರೆಸ್ ಸಂಸದರಿಗೆ ಸೂಚನೆ!

ಭಯೋತ್ಪಾದನೆಯನ್ನು ರಾಜತಾಂತ್ರಿಕ ಅಸ್ತ್ರವಾಗಿ ಬಳಸುವುದು ಅಕ್ಷಮ್ಯ, ಭಯೋತ್ಪಾದನೆಗೆ ಯಾವುದೇ ಸಮರ್ಥನೆ ಇಲ್ಲ: ಎಸ್. ಜೈಶಂಕರ್

3 ರಾಜ್ಯಗಳಲ್ಲಿ ದಾಳಿ, 100 ಕೋಟಿ ರೂ. ಹವಾಲಾ ವಹಿವಾಟು ಬಯಲು: 'ಮಾದಕವಸ್ತು ಕಳ್ಳಸಾಗಣೆ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ' : ಅಮಿತ್ ಶಾ