ಹಂಪಿ ಬೈ ಸ್ಕೈ 
ಜಿಲ್ಲಾ ಸುದ್ದಿ

8 ನಿಮಿಷದಲ್ಲಿ ಹಂಪಿ ಸೌಂದರ್ಯ ಕಣ್ತುಂಬಿಕೊಂಡ ಜನ

ಬಹುಬೇಡಿಕೆಯ ಹೆಲಿ ಟೂರಿಸಂ ಕಲ್ಪನೆ ಸಾಕಾರಗೊಳ್ಳದಿದ್ದರೂ...

ಹಂಪಿ: ಬಹುಬೇಡಿಕೆಯ ಹೆಲಿ ಟೂರಿಸಂ ಕಲ್ಪನೆ ಸಾಕಾರಗೊಳ್ಳದಿದ್ದರೂ, ಹಂಪಿ ಬೈ ಸ್ಕೈಕೊಂಚ ಮಟ್ಟಿಗೆ ಮನ ತಣಿಸಿದೆ.

ಮೂರು ದಿನಗಳ ಕಾಲ ಸುತ್ತಾಡಿದರೂ ಹಂಪಿಯನ್ನು ಸಂಪೂರ್ಣವಾಗಿ ನೋಡುವುದು ಕಷ್ಟಸಾಧ್ಯ. ಆದರೆ 8 ನಿಮಿಷದಲ್ಲಿ ಹಂಪಿ ನೋಟವನ್ನು ಹಂಪಿ ಬೈ ಸ್ಕೈ ಕಟ್ಟಿಕೊಟ್ಟಿತು. ಇದು ಹಂಪಿ ಉತ್ಸವದಲ್ಲಿ ಬಹು ಆಕರ್ಷಣೆಯಾಗಿತ್ತು.

ಹಚ್ಚ ಹಸಿರಿನ ಬಾಳೆ ತೋಟಗಳ ಮಧ್ಯೆ ಪಕ್ಕದಲ್ಲಿಯೇ ಹರಿಯುವ ತುಂಗಭದ್ರಾ ನದಿ ಝರಿಯ ರೂಪದಲ್ಲಿ ಕಾಣುತ್ತದೆ. ಇದರ ಮಧ್ಯೆಯೇ ವಿಜಯನಗರ ಸಾಮ್ರಾಜ್ಯದ ಗತವೈಭವವನ್ನು ನೆನಪಿಸುತ್ತ, ತನ್ನ ಇತಿಹಾಸ ಹೇಳಲು ಹೊರಟಿರುವ ಹಲವು ಸ್ಮಾರಕಗಳು ಏಕಕಾಲದಲ್ಲಿ ಕಣ್ಣಿಗೆ ಕಾಣುವಂತಾಗಿತ್ತು.

ಆಕಾಶದಲ್ಲಿ ಹಂಪಿ ನೋಟ: ಲೋಹದ ಹಕ್ಕಿಯಲ್ಲಿ ಹಾರಾಟ ಮಾಡಬೇಕೆಂಬ ಮಹದಾಸೆ ಹೊತ್ತವರು ದುಡ್ಡು ಕೊಟ್ಟು ಹಂಪಿ ವೈಭವ ಕಣ್ತುಂಬಿಕೊಂಡರು. ಹಂಪಿಯಲ್ಲಿ ವಿರೂಪಾಕ್ಷೇಶ್ವರ ದೇವಾಲಯ, ವಿಜಯ ವಿಠಲ ದೇವಸ್ಥಾನ, ಆನೆಸಾಲು, ಒಂಟೆ ಸಾಲು, ಹಂಪಿ ಉತ್ಸವಕ್ಕೆ ಮದುವಣಗಿತ್ತಿಯಂತೆ ಅಲಂಕಾರಗೊಂಡ ಹಂಪಿ, ಹಂಪಿ ಉತ್ಸವದ ಹಿನ್ನೆಲೆಯಲ್ಲಿ ಏರ್ಪಡಿಸಿರುವ ಸಾಹಸ ಕ್ರೀಡೆ, ಗಾಳಿಪಟ ಉತ್ಸವ, ಎಲ್ಲವನ್ನೂ ಒಂದೇ ನೋಟದಲ್ಲಿ ನೋಡುವುದು ಅಸಾಧ್ಯ. ಆದರೆ, ಹಂಪಿ ಬೈ ಸ್ಕೈ ಇದನ್ನು ಸಾಧ್ಯ ಮಾಡಿತ್ತು.

ಮೂರು ದಿನಗಳ ಹಂಪಿ ಬೈ ಸ್ಕೈಗೆ ಭಾರಿ ಬೇಡಿಕೆ ಬಂದಿದೆ. 8 ನಿಮಿಷಗಳ ಕಾಲ ಆಕಾಶದಲ್ಲಿ ಸುತ್ತಾಡಲು ಪ್ರತಿಯೊಬ್ಬರಿಗೆ ರು. 3 ಸಾವಿರ, 10 ವರ್ಷದ ಕೆಳಗಿನ ಮಗುವಿಗೆ ರು. 2 ಸಾವಿರ ನಿಗದಿಪಡಿಸಲಾಗಿತ್ತು. ಡೆಕ್ಕನ್ ಏವಿಯೇಷನ್‌ಗೆ ಸೇರಿದ ಒಂದು ಹಾಗೂ ಶ್ಯಾಮನೂರ್ ಏವಿಯೇಷನ್‌ಗೆ ಸೇರಿದ ಒಂದು ಹೆಲಿಕಾಪ್ಟರ್ ಹಾರಾಟದ ವ್ಯವಸ್ಥೆ ಮಾಡಲಾಗಿತ್ತು. ಏಕಕಾಲದಲ್ಲಿ ಕ್ಯಾಪ್ಟನ್ ಸೇರಿ 6 ಜನರಿಗೆ ಕುಳಿತುಕೊಳ್ಳುವ ವ್ಯವಸ್ಥೆ ಇರುತ್ತದೆ. ಬೆಳಗ್ಗೆ 9 ರಿಂದ ಡೆಕ್ಕನ್ ಏವಿಯೇಷನ್ ಹೆಲಿಕಾಪ್ಟರ್ ಕಾರ್ಯಾರಂಭ ಮಾಡಿತ್ತು. ಇನ್ನು ಎರಡನೇ ಹೆಲಿಕಾಪ್ಟರ್ 11 ಗಂಟೆಗೆ ಕಾರ್ಯಾರಂಭ ಮಾಡಿತು.

ಭಾರಿ ಬೇಡಿಕೆ
ಹಂಪಿ ಬೈ ಸ್ಕೈಗೆ ಆನ್‌ಲೈನ್ ಬುಕ್ಕಿಂಗ್‌ನಲ್ಲಿ 150 ಜನರು ನೋಂದಣಿ ಮಾಡಿಸಿದ್ದರು. ಮೊದಲನೇ ದಿನವೇ 450 ಜನರು ನೋಂದಣಿ ಮಾಡಿಸಿದ್ದಾರೆ. ಪ್ರತಿದಿನ 4 ರಿಂದ 6 ಗಂಟೆಗಳ ಕಾಲ ಹೆಲಿಕಾಪ್ಟರ್‌ಗಳ ಹಾರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ. ಮೂರು ದಿನದಲ್ಲಿ ಹೆಲಿಕಾಪ್ಟರ್‌ನಲ್ಲಿ 750 ಜನರಿಗೆ ಅವಕಾಶವಿದೆ ಎಂದು ಮೂಲಗಳು ತಿಳಿಸಿವೆ. ಹೆಲಿಕಾಪ್ಟರ್‌ನಲ್ಲಿ ಹೋಗಲು ಜನರು ಮುಗಿ ಬೀಳುವ ಜತೆಗೆ, ನೋಡುವುದಕ್ಕೆ ಶಾಲಾ-ಕಾಲೇಜುಗಳು ವಿದ್ಯಾರ್ಥಿಗಳು ಮುಗಿ ಬಿದ್ದಿದ್ದರು.


-ಶಶಿಧರ ಮೇಟಿ


Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಜಮ್ಮು-ಕಾಶ್ಮೀರ: ಮಸೂದ್ ಅಜರ್ ಆಡಿಯೋ ಬೆನ್ನಲ್ಲೇ ಭಾರತದ ಗಡಿಗೆ ನುಗ್ಗಲು 'ಪಾಕ್ ಡ್ರೋನ್' ಗಳು ಯತ್ನ!

1st ODI: ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!

ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮಗೆ ಅಶ್ಲೀಲ ಕಾಮೆಂಟ್! ಕಿಡಿಗೇಡಿಗಳಿಗೆ ಕೊಟ್ಟ ವಾರ್ನಿಂಗ್ ಏನು?

ಮಿಲಿಟರಿ ದಾಳಿಗೆ ಟ್ರಂಪ್, ನೆತನ್ಯಾಹು ಸಜ್ಜು: ತಿರುಗೇಟು ನೀಡಿದ ಇರಾನ್! ಹೇಳಿದ್ದೇನು ಗೊತ್ತಾ?

ಪಾಕಿಸ್ತಾನದಲ್ಲಿ 'ಗುಂಡಿಟ್ಟು' ಹಿಂದೂ ರೈತನ ಕಗ್ಗೊಲೆ! ಹೈದರಾಬಾದಿನಲ್ಲಿ ಆರೋಪಿಗಳ ಬಂಧನ

SCROLL FOR NEXT