ಕೂಡ್ಲಿಗಿ(ಬಳ್ಳಾರಿ): ಶಿಥಿಲಗೊಂಡಿದ್ದ 60 ವರ್ಷದ ಹಳೆಯ ಮನೆಯ ಮೇಲ್ಛಾವಣಿ ಕುಸಿದು ಬಿದ್ದ ಪರಿಣಾಮ ಮನೆಯಲ್ಲಿ ಮಲಗಿದ್ದ 6 ಮಂದಿ ದುರ್ಮರಣ ಹೊಂದಿದ್ದಾರೆ.
ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕಿನ ಕೊಟ್ಟೂರು ಪಟ್ಟಣದಲ್ಲಿ ಬೆಳಗ್ಗೆ 2.45ರಲ್ಲಿ ಈ ದುರ್ಘಟಣೆ ನಡೆದಿದೆ. ಚಿರನಿದ್ರೆಯಲ್ಲಿದ್ದ ಆರು ಮಂದಿ ಮೇಲೆ ಮೇಲ್ಛಾವಣಿ ಕುಸಿದು ಬಿದ್ದಿದೆ. ಮೃತರಲ್ಲಿ ನಾಲ್ಕು ಹೆಣ್ಣು ಮಕ್ಕಳು ಸೇರಿ ಇಬ್ಬರು ಮಹಿಳೆಯರು ಅಸುನೀಗಿದ್ದಾರೆ.
ಮೃತರನ್ನು ಖುಷಿ,(2) ಹುಲಿಗೆಮ್ಮ(3), ತನು(5), ನೇತ್ರಾ(12), ಮಂಜಮ್ಮ (35) ಹಾಗೂ ಹನುಮಂತಮ್ಮ(65) ಎಂದು ಗುರುತಿಸಲಾಗಿದೆ.
ಸ್ಥಳಕ್ಕೆ ದೌಡಾಯಿಸಿರುವ ಕೊಟ್ಟೂರು ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಶವಗಳನ್ನು ಹೊರತೆಗೆದಿದ್ದಾರೆ. ಕೊಟ್ಟೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.