ಉಗ್ರ ಯಾಸಿನ್ ಭಟ್ಕಳ್ (ಸಂಗ್ರಹ ಚಿತ್ರ) 
ಜಿಲ್ಲಾ ಸುದ್ದಿ

ಭಟ್ಕಳ್ ಓಲೈಕೆಗಾಗಿ ಸ್ಫೋಟದ ಸಂಚು!

ರಾಜ್ಯದಲ್ಲಿ ಗುರುವಾರ ಸೆರೆಸಿಕ್ಕ ಇಂಡಿಯನ್ ಮುಜಾಹಿದ್ದೀನ್‌ನ ಮೂವರು ಸದಸ್ಯರು ದೇಶದ..

ಬೆಂಗಳೂರು: ರಾಜ್ಯದಲ್ಲಿ ಗುರುವಾರ ಸೆರೆಸಿಕ್ಕ ಇಂಡಿಯನ್ ಮುಜಾಹಿದ್ದೀನ್‌ನ ಮೂವರು ಸದಸ್ಯರು ದೇಶದ ಮೋಸ್ಟ್ ವಾಂಟೆಡ್ ಉಗ್ರ ಯಾಸಿನ್ ಭಟ್ಕಳ್‌ನ ಓಲೈಕೆಗಾಗಿ ಸ್ಫೋಟ ಸಂಚು ನಡೆಸಿರಬಹುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಇಂಡಿಯನ್ ಮುಜಾಹಿದ್ದೀನ್ ಸಂಸ್ಥಾಪಕ ರಿಯಾಜ್ ಭಟ್ಕಳ್‌ನನ್ನು ಎನ್‌ಐಎ ಕಳೆದ ವರ್ಷ ಬಂಧಿಸಿದೆ. ಇದರಿಂದ ಐಎಂ ಸಂಘಟನೆ ದೇಶದಲ್ಲಿ ಪ್ರಾಬಲ್ಯ ಕಳೆದುಕೊಳ್ಳಲಾರಂಭಿಸಿದೆ. ಇದರ ಹಲವು ಸದಸ್ಯರು ಸೂಕ್ತ ನಾಯಕತ್ವ ಇಲ್ಲದೆ ಚದುರಿಹೋಗಿದ್ದಾರೆ. ಹೀಗಾಗಿ, ಭಟ್ಕಳ್ ಸಹೋದರರನ್ನು ಓಲೈಸಿಕೊಳ್ಳಲು ಅಥವಾ ಅವರಿಗೆ ಬೆಂಬಲ ನೀಡುತ್ತಿದ್ದೇವೆ ಎಂದು ತೋರಿಸಿಕೊಳ್ಳಲು ಬಾಂಬ್ ಸ್ಫೋಟ ನಡೆಸಲು ಬಂಧಿತರು ಸಂಚು ರೂಪಿಸಿದ್ದಿರಬಹುದು ಎಂದು ಮೂಲಗಳು ತಿಳಿಸಿವೆ.

2013ರ ಏಪ್ರಿಲ್ ತಿಂಗಳಲ್ಲಿ ಬಿಜೆಪಿ ಕಚೇರಿ ಬಳಿ ಸಂಭವಿಸಿದ ಸ್ಫೋಟಕ್ಕೆ ಯಾವುದೇ ದೊಡ್ಡ ಸಂಘಟನೆಯಿಂದ ಪ್ರೇರಣೆ ಇರಲಿಲ್ಲ. ತಮಿಳುನಾಡಿನಲ್ಲಿ ಹಿಂದೂ ಸಂಘಟನೆ ಮುಖಂಡನೊಬ್ಬನ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಪನ್ನಾ ಇಸ್ಮಾಯಿಲ್, ಫಕ್ರುದ್ದೀನ್ ಹಾಗೂ ಇತರ ಆರೋಪಿಗಳೇ ಮಲ್ಲೇಶ್ವರ ಸ್ಫೋಟದಲ್ಲಿ ಭಾಗಿಯಾಗಿದ್ದರು. ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಶಂಕಿತ ಉಗ್ರನಿಗೆ ಯಾವುದೇ ಬೆಂಬಲ ಸಿಕ್ಕಿರಲಿಲ್ಲ. ಹೀಗಾಗಿ ಆತ ಭೂಗತನಾಗಿದ್ದ. ಕೊಲೆ ಬಳಿಕ ಸುಮ್ಮನಿದ್ದ ಆರೋಪಿಗಳು ಆತನಿಗೆ ಬೆಂಬಲವಾಗಿ ಇದ್ದೇವೆ ಎಂದು ತೋರಿಸಿಕೊಳ್ಳಲು, ಆತನನ್ನು ಪತ್ತೆ ಹಚ್ಚಲು ಮಲ್ಲೇಶ್ವರಂನಲ್ಲಿ ಸ್ಫೋಟ ನಡೆಸಿದ್ದರು ಎನ್ನಲಾಗಿದೆ.

ಯಾಸೀನ್ ಭಟ್ಕಳ್ ಬಂಧನದ ಬಂಧನದ ಬಳಿಕ ದೇಶದಲ್ಲಿ ದೊಡ್ಡ ಮಟ್ಟದ ವಿಧ್ವಂಸಕ ಕೃತ್ಯಗಳನ್ನು ತಡೆಯುವಲ್ಲಿ ದೇಶದ ಭದ್ರತಾ ಸಂಸ್ಥೆಗಳು, ಗುಪ್ತಚರ ಸಂಸ್ಥೆಗಳು, ಎನ್‌ಐಎ ಯಶಸ್ವಿಯಾಗಿವೆ. ಭಯೋತ್ಪಾದಕ ಚಟುವಟಿಕೆಗಳ ಮೇಲೆ ದೇಶದಲ್ಲಿ ತೀವ್ರ ನಿಗಾ ಇರಿಸಲಾಗಿದೆ. ಹೀಗಾಗಿ ಉಗ್ರ ನಾಯಕರಿಗೆ ಹಾಗೂ ದೊಡ್ಡ ಸಂಘಟನೆಗಳಿಗೆ ಬೆಂಬಲ ಸೂಚಿಸಲು ಸಂಚು ರೂಪಿಸಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Operation Sindoor ಬಳಿಕ ಪಂಜಾಬ್ ಅಸ್ಥಿರಗೊಳಿಸಲು ಪಾಕ್ proxy war; 'ಸಂಘಟಿತ ಅಪರಾಧ ಬೇರುಸಹಿತ ಕಿತ್ತೊಗೆಯುತ್ತೇವೆ'!

'CEC ತಾಳ್ಮೆ ಕಳೆದುಕೊಳ್ಳುತ್ತಿದ್ದಾರೆ'; SIR ಕುರಿತು ನಮ್ಮ ಕಳವಳ ಪರಿಹರಿಸಿಲ್ಲ: ಅಭಿಷೇಕ್ ಬ್ಯಾನರ್ಜಿ

2012 ಪುಣೆ ಬಾಂಬ್ ಸ್ಫೋಟ ಆರೋಪಿ 'ಅನಾಮಿಕ'ರ ಗುಂಡೇಟಿಗೆ ಬಲಿ!

ಕೊಯಮತ್ತೂರು: ತಮಿಳು ಮಾತನಾಡದ್ದಕ್ಕೆ ವಲಸೆ ಕಾರ್ಮಿಕನಿಗೆ ಚಾಕು ಇರಿತ; ಆರೋಪಿಗಳಿಗೆ ಹುಡುಕಾಟ

ಕೋವಿಡ್ ಹಗರಣ: ರಾಜ್ಯ ಸರ್ಕಾರಕ್ಕೆ ಅಂತಿಮ ವರದಿ ಸಲ್ಲಿಸಿದ ನ್ಯಾ. ಮೈಕೆಲ್ ಡಿ ಕುನ್ಹಾ

SCROLL FOR NEXT