ಜಿಲ್ಲಾ ಸುದ್ದಿ

ಡೇರಿಗೆ ಲಿಂಗ ನಿರ್ಧಾರಿತ ವೀರ್ಯಾಣು ಬೇಕು

Srinivasamurthy VN

ಬೆಂಗಳೂರು: ಹಾಲು ಉತ್ಪಾದನೆಯಲ್ಲಿ ರಾಜ್ಯ ಮುಂಚೂಣಿಗೆ ಬರಲು `ಲಿಂಗ ನಿರ್ಧಾರಿತ ವೀರ್ಯಾಣು' ತಂತ್ರಜ್ಞಾನವನ್ನು ಹೈನುಗಾರಿಕೆಯಲ್ಲಿ ಅಳವಡಿಸಿಕೊಳ್ಳಬೇಕು ಎಂದು ಪಶುಸಂಗೋಪನಾ ಸಚಿವ ಟಿ.ಬಿ.ಜಯಚಂದ್ರ ಸಲಹೆ ನೀಡಿದ್ದಾರೆ.

ಕರ್ನಾಟಕ ಹಾಲು ಒಕ್ಕೂಟ, ಭಾರತೀಯ ಕೃಷಿ ಸಂಶೋಧನಾ ಪರಿಷತ್ ಹಾಗೂ ರಾಷ್ಟ್ರೀಯ ಡೇರಿ ಸಂಶೋಧನಾ ಸಂಸ್ಥೆ ಶನಿವಾರ ಆಯೋಜಿಸಿದ್ದ `ಭಾರತದಲ್ಲಿ ಲಿಂಗ ನಿರ್ಧಾರಿತ ವೀರ್ಯಾಣು ತಂತ್ರಜ್ಞಾನದ ಸದ್ಯದ ಪರಿಸ್ಥಿತಿ ಹಾಗೂ ಭವಿಷ್ಯ' ವಿಷಯದ ಕಾರ್ಯಗಾರಕ್ಕೆ ಚಾಲನೆ ನೀಡಿ ಮಾತನಾಡಿದರು.

ಹೈನುಗಾರಿಕೆಯಲ್ಲಿ ಗುಜರಾತ್‍ನ ನಂತರ ಎರಡನೇ ಸ್ಥಾನದಲ್ಲಿ ರಾಜ್ಯವಿದೆ. ಆದರೆ ಹಲವು ವರ್ಷಗಳಿಂದ ಲಿಂಗ ನಿರ್ಧಾರಿತ ವೀರ್ಯಾಣು ತಂತ್ರಜ್ಞಾನದ ಅಳವಡಿಕೆ ಸಾಧ್ಯವಾಗಿಲ್ಲ. ಅಬಿsವೃದಿಟಛಿ ಹೊಂದಿದ ದೇಶಗಳಲ್ಲಿ 10 ವರ್ಷಗಳ ಹಿಂದೆಂಯೇ ಪಶುಗಳ ಲಿಂಗ ನಿರ್ಧಾರಿತ ವೀರ್ಯಾಣು ತಂತ್ರಜ್ಞಾನ ಅಳವಡಿಸಿಕೊಳ್ಳಲಾಗಿದೆ.

ಇದು ರೈತರನ್ನೂ ಯಶಸ್ವಿಯಾಗಿ ತಲುಪಿದೆ. ಆದರೆ ದೇಶದಲ್ಲಿ ಹಾಗೂ ವಿಜ್ಞಾನಿಗಳು ಹೆಚ್ಚಿರುವ ರಾಜ್ಯದಲ್ಲಿಯೂ ತಂತ್ರಜ್ಞಾನ ಅಳವಡಿಕೆ ಸಾಧ್ಯವಾಗಿಲ್ಲ ಎಂದರು. ವಿಜ್ಞಾನಿಗಳನ್ನು ಬಳಸಿಕೊಂಡು ತಂತ್ರಜ್ಞಾನವನ್ನು ರೈತರಿಗೆ ಮುಟ್ಟಿಸುವುದಾದರೆ ಸರ್ಕಾರ ಪೂರ್ಣ ಸಹಕಾರ ನೀಡಲಿದೆ. ಸಂಶೋಧನೆಗೆ ಪ್ರತ್ಯೇಕ ಸಂಸ್ಥೆ ಆರಂಬಿsಸುವುದಾದರೆ ಭೂಮಿಯನ್ನೂ ನೀಡಲಾಗುವುದು ಎಂದರು.

ರಾಜ್ಯದಲ್ಲಿ 1.6 ಕೋಟಿ ಮಕ್ಕಳಿಗೆ ಕ್ಷೀರಭಾಗ್ಯ ಯೋಜನೆಯ ಲಾಭ ದೊರೆಯುತ್ತಿದೆ. ಸಹಾಯಧನ ನೀಡಲು ಆರಂಬಿsಸಿದ ನಂತರ ಹಾಲಿನ ಉತ್ಪಾದನೆ 32 ಲಕ್ಷ ಲೀ.ನಿಂದ 65 ಲಕ್ಷ ಲೀ.ಗೆ ಏರಿದೆ. ಕಳೆದ 3 ವರ್ಷಗಳಲ್ಲಿ ಸಾಕಷ್ಟು ಬೆಳವಣಿಗೆಗಳಾಗಿದ್ದು, ಕೃಷಿಯಂತೆ ಹೈನುಗಾರಿಕೆಗೂ ಹೆಚ್ಚಿನ ಒತ್ತು ನೀಡಲಾಗಿದೆ. ಲಿಂಗ ನಿರ್ಧಾರಿತ ವೀರ್ಯಾಣು ತಂತ್ರಜ್ಞಾನ ಅಳವಡಿಕೆಯಿಂದ ಹೈನುಗಾರಿಕೆ ಅಭಿವೃದ್ಧಿ ಜೊತೆಗೆ ಹಾಲು ಉತ್ಪಾದನೆಯ ಪ್ರಮಾಣವೂ ಹೆಚ್ಚಾಗಲಿದೆ. ರೈತರು ಆರ್ಥಿಕವಾಗಿ ಅಭಿವೃದ್ಧಿಯಾಗಲು ಈ ತಂತ್ರಜ್ಞಾನ ಸಹಕಾರಿಯಾಗುತ್ತದೆ ಎಂದರು.

ರಾಷ್ಟ್ರೀಯ ಡೇರಿ ಸಂಶೋಧನಾ ಸಂಸ್ಥೆ ಮುಖ್ಯಸ್ಥ ಟಿ.ನಂದಕುಮಾರ್ ಮಾತನಾಡಿ, ಸಂಸ್ಥೆಯು ಹಾಲಿನ ಪುಡಿಯನ್ನು ಖಾಸಗಿ ಕಂಪನಿಗಳಿಂದ ಖರೀದಿಸುತ್ತಿದೆ. ಸಹಕಾರಿ ಕ್ಷೇತ್ರವನ್ನು ಬೆಳೆಸಲು ಹಾಲು ಒಕ್ಕೂಟಗಳಿಂದಲೇ ಪುಡಿ ಖರೀದಿಯಾಗಬೇಕು. ಈ ಕುರಿತು ಸರ್ಕಾರದಿಂದ ಪ್ರತ್ಯೇಕ ನೀತಿ ಜಾರಿಗೊಳಿಸಲು ಚರ್ಚಿಸುತ್ತಿದೆ. ರಾಜ್ಯದಲ್ಲಿ ಪಶುಗಳಿಗೆ ನೀಡುವ ಲಸಿಕೆಯ ಕೊರತೆಯಿದ್ದು, ಪಶುಗಳು ಆರೋಗ್ಯದ ಬಗ್ಗೆ ಹೆಚ್ಚಿನ ಗಮನಹರಿಸಬೇಕಿದೆ ಎಂದು ತಿಳಿಸಿದರು.

ಕೆಎಂಎಫ್ ಅಧ್ಯಕ್ಷ ಪಿ.ನಾಗರಾಜು ಮಾತನಾಡಿ, 70 ದಶಕದಲ್ಲಿ ಜರ್ಸಿ ಹಾಗೂ ಎಚ್‍ಎಫ್ ತಳಿಯ ಹಸುಗಳು ಬಂದಾಗ ರೈತರಲ್ಲಿ ಭಯವಿತ್ತು. ಆದರೆ ತಂತ್ರಜ್ಞಾನ ಅಳವಡಿಕೆಯಿಂದ ಸಾಕಷ್ಟು ಅಭಿವೃದ್ಧಿಯಾಗಿದೆ. ರೈತರಿಗೆ ಅನುಕೂಲವಾಗುವಂಥ ಸಂಶೋಧನೆಗಳಿಗೆ ಒತ್ತು ನೀಡಲು ಬಜೆಟ್‍ನಲ್ಲಿ ಹಣ ಮೀಸಲಿಡಬೇಕು. ಹೈನುಗಾರಿಕೆಯನ್ನು ಕೃಷಿ ಎಂದು ಪರಿಗಣಿಸಲು ಸರ್ಕಾರಕ್ಕೆ ಪ್ರಸ್ತಾಪನೆ ಸಲ್ಲಿಸಲಾಗಿದೆ.

ಇದರಿಂದ ಕೃಷಿಗೆ ದೊರೆಯುವ ಮಾನ್ಯತೆ ಹೈನುಗಾರಿಕೆಗೂ ದೊರೆಯಲಿದೆ. ತಜ್ಞರು ಹಾಗೂ ಸಂಶೋಧಕರು ಹಾಲು ಒಕ್ಕೂಟಕ್ಕೆ ಸಹಕರಿಸಬೇಕೆಂದು ಮನವಿ ಮಾಡಿದರು. ಡೇರಿ ಸಂಶೋಧನಾ ಸಂಸ್ಥೆ ನಿರ್ದೇಶಕ ಹಾಗೂ ಕುಲಪತಿ ಡಾ.ಎ.ಕೆ.ಶ್ರೀವಾತ್ಸವ, ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಪ್ರೇಮನಾಥ್, ಬೆಂಗಳೂರು ಹಾಲು ಒಕ್ಕೂಟದ ನಿರ್ದೇಶಕ ಡಾ.ಸುರೇಶ್ ಬಾಬು ಹಾಜರಿದ್ದರು.

SCROLL FOR NEXT