ಪತ್ರಿಕಾಗೋಷ್ಠಿಯಲ್ಲಿ ಪಿಜಿಆರ್ ಸಿಂಧ್ಯಾ, ಶಂಕ್ರಣ್ಣ ದೊಡ್ಡಣ್ಣ ಮತ್ತಿತರರು ಹಾಜರಿದ್ದರು 
ಜಿಲ್ಲಾ ಸುದ್ದಿ

ರೈತರು ಆತ್ಮಹತ್ಯೆಗೆ ಶರಣಾಗದೇ, ನೈಸರ್ಗಿಕ ಕೃಷಿ ಮಾಡಿ: ಸಿಂಧ್ಯಾ

ಕರ್ನಾಟಕ ರಾಜ್ಯ ರೈತರು ಆತ್ಮಹತ್ಯೆಗೆ ಶರಣಾಗದೇ, ನೈಸರ್ಗಿಕ ಕೃಷಿ ಮಾಡಿ ಎಂದು ಮಾಜಿ ಸಚಿವ ಪಿಜಿಆರ್ ಸಿಂಧ್ಯಾ ಸೋಮವಾರ ಕರೆ...

ಬೆಂಗಳೂರು: ಕರ್ನಾಟಕ ರಾಜ್ಯ ರೈತರು ಆತ್ಮಹತ್ಯೆಗೆ ಶರಣಾಗದೇ, ನೈಸರ್ಗಿಕ ಕೃಷಿ ಮಾಡಿ ಎಂದು ಮಾಜಿ ಸಚಿವ ಪಿಜಿಆರ್ ಸಿಂಧ್ಯಾ ಸೋಮವಾರ ಕರೆ ನೀಡಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಸಾಯನಿಕ ಬಳಸಿ, ಸಾಲಸೋಲ ಮಾಡಿ ಬೆಳೆ ಬೆಳೆಯುವುದಲ್ಲದೇ, ಅದರಿಂದ ಉಂಟಾಗುವ ನಷ್ಟವನ್ನು ತುಂಬಲಾರದೆ ರೈತರು ಆತ್ಮಹತ್ಯೆ ಮಾಡಿಕೊಳ್ಳುದ್ದಾರೆ. ಆದರೆ, ರೈತರು ಈ ರೀತಿ ಆತ್ಮಹತ್ಯೆಗೆ ಶರಣಾಗುವುದು ಸರಿಯಲ್ಲ. ರೈತರು ನೈಸರ್ಗಿಕ ಕೃಷಿಯಲ್ಲಿ ತೊಡಗಿಸಿಕೊಂಡರೆ ಈ ರೀತಿ ಆತ್ಮಹತ್ಯೆಗೆ ಶರಣಾಗುವು ಪರಿಸ್ಥಿತಿ ಬರುವುದಿಲ್ಲ ಎಂದು ತಿಳಿಸಿದ್ದಾರೆ.

ರೈತ ಜಿರೋ ಬಜೆಟ್ ನಲ್ಲಿ ಕೃಷಿ ಮಾಡಬಹುದು. ಈ ಅರಿವು ಮೂಡಿಸಲೆಂದು ಕರ್ನಾಟಕ ರಾಜ್ಯ ನೈಸರ್ಗಿಕ ಕೃಷಿ ಆಂದೋಲನ ವೇದಿಕೆ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬರುತ್ತಿದೆ. ಈ ವೇದಿಕೆಯ ಸದಸ್ಯರು ರಾಜ್ಯದ ಮೂಲೆ ಮೂಲೇಯಲ್ಲೂ ಇದ್ದು, ರೈತರು ಇವರನ್ನು ಸಂಪರ್ಕಿಸಿದರೆ, ಉಚಿತವಾಗಿ ನೈಸರ್ಗಿಕ ಕೃಷಿ ಮಾಡುವುದರ ಬಗ್ಗೆ ಸಲಹೆ ನೀಡುತ್ತಾರೆ.

ರೈತ ಯಾವುದೇ ರಾಸಾಯನಿಕಗಳ ಅವಲಂಭಿತನಾಗದೆ, ಖರ್ಚಿಲ್ಲದೇ ಬೆಳೆಗಳನ್ನು ಬೆಳಯಬಹುದಾಗಿದೆ. ಈ ಹಿನ್ನಲೆಯಲ್ಲಿ ರೈತ ಆತ್ಮಹತ್ಯೆಗೆ ಶರಣಾಗದೇ, ನೈಸರ್ಗಿಕ ಕೃಷಿಯನ್ನು ಅವಲಂಭಿಸಿಕೊಂಡರೆ, ಲಾಭ ಪಡೆಯುವುದರ ಜೊತೆಗೆ, ನಿರಾಳವಾಗಿ ಜೀವನ ಸಾಗಿಸಬಹುದು ಎಂದು ಅವರು ಹೇಳಿದ್ದಾರೆ.
ನಂತರ ಮಾತನಾಡಿದ ವೇದಿಕೆಯ ಮುಖಂಡ ಶಂಕ್ರಣ್ಣ ದೊಡ್ಡಣ್ಣ ಅವರು, ಮಹಾರಾಷ್ಟ್ರದ ಸುಭಾಷ್ ಪಾಳೇಕಾರ್ ಎಂಬುವವರು ನೈಸರ್ಗಿಕ ಕೃಷಿ ಬಗ್ಗೆ ಆಂದೋಲನ ಕೈಗೊಂಡಿದ್ದಾರೆ. ಈ ಆಂದೋಲನದಿಂದ ಸುಮಾರು 1000 ರೈತರು ಜೀರೋ ಬಜೆಟ್ ನಲ್ಲಿ ನೈಸರ್ಗಿಕ ಕೃಷಿ ಪ್ರಾರಂಭಿಸಿ ಹೆಚ್ಚು ಲಾಭ ಪಡೆದಿದ್ದಾರೆ. ಈ ಕೃಷಿ ಮಾಡಲು ರೈತ ಪೇಟೆಗೆ ಹೋಗಬೇಕಿಲ್ಲ ಎಂದಿದ್ದಾರೆ.
ಹೆಚ್ಚಿನ ಮಾಹಿತಿಗೆ: ಚಂದ್ರಶೇಖರ್ ಕಾಡದಿ 9449966891, ಶಂಕ್ರಣ್ಣ ದೊಡ್ಡಣ್ಣ 9448916370 ಸಂಪರ್ಕಿಸಬಹುದು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026: SRH ವಿರುದ್ಧ RR ಗೆ 47 ರನ್ ಗಳ ಭರ್ಜರಿ ಗೆಲುವು

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

SCROLL FOR NEXT