ಜಿಲ್ಲಾ ಸುದ್ದಿ

ಚಾಕಲೇಟ್ ಗಳಲ್ಲಿ ಜಿರಳೆ ಸಾಮಾನ್ಯ: ಡಾ.ಖಾದರ್

Sumana Upadhyaya

ಬೆಂಗಳೂರು:ಚಾಕಲೇಟ್ ತಯಾರಿಸುವಾಗ ಜಿರಳೆಯೂ ಅದರ ಭಾಗವಾಗಿ ಸೇರಿಕೊಂಡಿರುತ್ತದೆ. ಆ ಚಾಕಲೇಟ್ ತಿನ್ನುವುದರಿಂದ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ. ಮಕ್ಕಳಲ್ಲಿ ಅಸ್ತಮಾ ಸಮಸ್ಯೆ ಬರುತ್ತದೆ. ಜಿರಳೆಯಿರುವ ಪ್ರದೇಶದಲ್ಲಿ ಹೆಚ್ಚು ಹೊತ್ತು ಇದ್ದರೂ ಆರೋಗ್ಯ ಸಮಸ್ಯೆಗಳು ಪ್ರಾರಂಭವಾಗುತ್ತವೆ ಎಂದು ಹೋಮಿಯೋಪತಿ ತಜ್ಞ ಡಾ.ಖಾದರ್ ಎಚ್ಚರಿಸಿದರು.

ಭಾನುವಾರ ಬೆಂಗಳೂರಿನ ಮಲ್ಲೇಶ್ವರದಲ್ಲಿ ಏರ್ಪಡಿಸಿದ್ದ ಸಿರಿಧಾನ್ಯ ಮೇಳದಲ್ಲಿ ಮಾತನಾಡಿ, ವಿಶ್ವಾದ್ಯಂತ ಕೆಲವು ಪ್ರದೇಶಗಳಲ್ಲಿ ಮಾತ್ರ ಚಾಕೊಲೇಟ್ ತಯಾರಿಸಲಾಗುತ್ತದೆ. ಅದರಲ್ಲಿ ಅಮೆರಿಕದಲ್ಲಿ ತಯಾರಿಸುವ ಚಾಕಲೇಟ್ ನಲ್ಲಿ ಶೇಕಡಾ 4ರಷ್ಟು ಜಿರಳೆಗಳು ಬೀಳುತ್ತದೆ. ಇದನ್ನು ನಿಯಂತ್ರಿಸಲು ಸಾಧ್ಯವಿಲ್ಲ ಎಂದು ಕಂಪೆನಿಯೇ ಹೇಳಿಕೊಂಡಿದೆ. ಆದರೂ ಚಾಕಲೇಟ್ ತಯಾರಿಕೆ ಮುಂದುವರಿದಿದೆ. ವಿಶ್ವದ ಕೆಲವು ಪ್ರದೇಶಗಳಲ್ಲಿ ತಯಾರಾಗುವ ಕಚ್ಚಾ ಚಾಕಲೇಟ್ ಅನ್ಯದೇಶಗಳಿಗೆ ರಫ್ತಾಗುತ್ತದೆ. ಮತ್ತೆ ಆಯಾ ದೇಶದಲ್ಲಿ ಅಲ್ಲಿನ ಕಂಪೆನಿಗಳಿಂದ ಬರುವ ಚಾಕಲೇಟ್ ಗಳಿಗೆ ಮತ್ತೆ ಎಷ್ಟು ಜಿರಳೆಗಳು ಸೇರ್ಪಡೆಯಾಗುತ್ತದೆ ಎಂಬ ಮಾಹಿತಿಯಿಲ್ಲ.

ಈ ಚಾಕಲೇಟ್ ತಿನ್ನುವ ಮಕ್ಕಳು, ಉಚ್ವಾಸ-ನಿಶ್ವಾಸದ ಸಮಸ್ಯೆಯಿಂದ ಬಳಲುತ್ತಾರೆ. ಹೆಚ್ಚು ಜಿರಳೆಗಳಿರುವ ಪ್ರದೇಶದಲ್ಲಿ ಸ್ವಲ್ಪ ಹೊತ್ತು ಕಳೆದರೂ ಆರೋಗ್ಯದ ಮೇಲೆ ಕೆಟ್ಟ ಪರಿಮಾಮ ಬೀರುತ್ತದೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.

SCROLL FOR NEXT