ಬೆಂಗಳೂರು: ಬಿಬಿಎಂಪಿ ತ್ರಿಭಜನೆಗೆ ಮುಂದಾಗಿರುವ ಸರ್ಕಾರದ ಕ್ರಮ ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಮಹಿಳಾ ಘಟಕದ ಕಾರ್ಯಕರ್ತರು ಗುರುವಾರ ಆನಂದ್‍ರಾವ್ ವೃತ್ತದ ಬಳಿ ಪ್ರತಿಭಟನೆ ನಡೆಸಿದರು.
ಈಗಿರುವ ಬಿಬಿಎಂಪಿಯನ್ನೂ ಮೂರು ಭಾಗಗಳನ್ನಾಗಿ ವಿಂಗಡಿಸಿದಲ್ಲಿ ಕನ್ನಡಿಗರು ಅಲ್ಪಸಂಖ್ಯಾತರಾಗಲಿದ್ದಾರೆ. ನಗರದಲ್ಲಿ ಹೊರರಾಜ್ಯದವರೇ\ ಹೆಚ್ಚಿದ್ದಾರೆ. ವಿಭಜನೆ ಮಾಡಿದಲ್ಲಿ ತೆಲುಗು, ತಮಿಳು ಹೀಗೆ ಭಾಷಾವಾರು ವಿಂಗಡಣೆಯಾಗಿ ಅಲ್ಲಿ ಕನ್ನಡಿಗರು ಅಲ್ಪಸಂಖ್ಯಾತರಾಗಲಿದ್ದಾರೆ. ಬೇರೆಯವರ ಆಡಳಿತಕ್ಕೆ ಕನ್ನಡಿಗರು ಬಲಿಯಾಗಬೇಕಾಗುತ್ತದೆ.
ಹಾಗಾಗಿ ವಿಭಜನೆ ಮಾಡಬಾರದೆಂದು ಪ್ರತಿಭಟನಾಕಾರರು ಆಗ್ರಹಿಸಿದರು. ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಹೇಮಲತಾ, ನಗರ ಜಿಲ್ಲಾಧ್ಯಕ್ಷ ಸಹನಾ ಶೇಖರ್, ರಾಜ್ಯ ಕಾರ್ಯದರ್ಶಿ ಅಶ್ವಿನಿ, ಸುನಂದ ಸೇರಿದಂತೆ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.