ನೊಂದ ಮಹಿಳೆಗೆ ಪೊಲೀಸ್ ಜನಸ್ನೇಹಿ (ಸಾಂದರ್ಭಿಕ ಚಿತ್ರ) 
ಜಿಲ್ಲಾ ಸುದ್ದಿ

ಲೈಂಗಿಕ ದೌರ್ಜನ್ಯ: ನೊಂದ ಮಹಿಳೆಗೆ ಪೊಲೀಸ್ ಜನಸ್ನೇಹಿ

ಲೈಂಗಿಕ ದೌರ್ಜನ್ಯಕ್ಕೆ ಒಳಗಾಗುವ ಮಹಿಳೆಯರು ಪೊಲೀಸ್ ಠಾಣೆಗೆ ತೆರಳಿ ದೂರು ನೀಡಲು ಹಿಂಜರಿಯುತ್ತಾರೆ. ದೈಹಿಕ, ಮಾನಸಿಕವಾಗಿ ಹಿಂಸೆಗೆ ಒಳಗಾಗಿರುವ ಅವರು ಠಾಣೆಗೆ ತೆರಳಿ ಪೊಲೀಸ್ ಸಿಬ್ಬಂದಿಯ ಪ್ರಶ್ನೆಗಳಿಗೆ ಉತ್ತರ ನೀಡುತ್ತಾ ಮಾನಸಿಕವಾಗಿ...

ಬೆಂಗಳೂರು: ಲೈಂಗಿಕ ದೌರ್ಜನ್ಯಕ್ಕೆ ಒಳಗಾಗುವ ಮಹಿಳೆಯರು ಪೊಲೀಸ್ ಠಾಣೆಗೆ ತೆರಳಿ ದೂರು ನೀಡಲು ಹಿಂಜರಿಯುತ್ತಾರೆ. ದೈಹಿಕ, ಮಾನಸಿಕವಾಗಿ ಹಿಂಸೆಗೆ ಒಳಗಾಗಿರುವ ಅವರು ಠಾಣೆಗೆ ತೆರಳಿ ಪೊಲೀಸ್ ಸಿಬ್ಬಂದಿಯ ಪ್ರಶ್ನೆಗಳಿಗೆ ಉತ್ತರ ನೀಡುತ್ತಾ ಮಾನಸಿಕವಾಗಿ ಮತ್ತಷ್ಟು ಕುಗ್ಗುವ ಸಾಧ್ಯತೆ ಅಧಿಕ.ಕೆಲವೊಮ್ಮೆ ಈ ವಿಚಾರಗಳಿಗೆ ಹೆದರಿ ದೂರು ನೀಡಲು ಹಿಂಜರಿದು ಕೊನೆಗೆ ಸಂಘ ಸಂಸ್ಥೆಗಳ ನೆರವು ಪಡೆದಿರುವ ಪ್ರಕರಣಗಳು ಸಾಕಷ್ಟಿವೆ.

ಈ ಸಮಸ್ಯೆಗಳ ಪರಿಹಾರ ಒದಗಿಸಲು, ನೊಂದ ಮಹಿಳೆಯರಿಗೆ ಆತ್ಮಸ್ಥೈರ್ಯ ತುಂಬಲು, ಠಾಣೆಗೆ ದೂರು ನೀಡಲು ಬಂದಾಗ ಅವರಿಗೆ ವಿಚಾರಣೆ ನೆಪದಲ್ಲಿ ತೊಂದರೆಯಾಗದಂತೆ ಗೌರವಯುತವಾಗಿ ದೂರು ದಾಖಲಿಸಲು ಅನುಕೂಲ ಕಲ್ಪಿಸುವ ದೃಷ್ಟಿಯಿಂದ `ವರದಿ ಮಾಡಲು ಸಿದ್ಧ '(ರೆಡಿ ಟು ರಿಪೋರ್ಟ್) ಎಂಬ ಯೋಜನೆಗೆ ಶನಿವಾರ ಚಾಲನೆ ನೀಡಲಾಯಿತು. ಅಮ್ನೆಸ್ಟಿ ಇಂಟರ್‍ನ್ಯಾಷನಲ್ ಇಂಡಿಯಾ ಸಂಸ್ಥೆ ಸಹಯೋಗದಲ್ಲಿ ಈ ಯೋಜನೆ ತಯಾರಿಸಿ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಜಾರಿಗೊಳಿಸಲಾಗಿದೆ. ಅಶೋಕನಗರ ಪೊಲೀಸ್ ಠಾಣೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಗರ ಪೊಲೀಸ್ ಆಯುಕ್ತ ಎಂ.ಎನ್.ರೆಡ್ಡಿ ಅವರು ಯೋಜನೆಗೆ ಚಾಲನೆ ನೀಡಿದರು.

ಲೈಂಗಿಕ ದೌರ್ಜನ್ಯಕ್ಕೆ ಒಳಗಾಗುವ ಮಹಿಳೆಯರು ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಲು ಈ ಯೋಜನೆ ಸಹಕಾರಿ. ಅಲ್ಲದೆ ಠಾಣೆಯಲ್ಲಿ ಜನಸ್ನೇಹಿ ವಾತಾವರಣ ನಿರ್ಮಿಸಲು ಇದರಿಂದ ಸಾಧ್ಯವಾಗುತ್ತದೆ. ಎಂದು ನಗರ ಪೊಲೀಸ್ ಆಯುಕ್ತ ಎಂ.ಎನ್.ರೆಡ್ಡಿ ಹೇಳಿದರು. ಪ್ರಾಥಮಿಕ ಹಂತದಲ್ಲಿ ಚಿಕ್ಕಪೇಟೆ, ಯಶವಂತಪುರ, ಕಬ್ಬನ್‍ಪಾರ್ಕ್, ಸದಾಶಿವನಗರ, ಶೋಕನಗರ, ಇಂದಿರಾನಗರ, ಎಲೆಕ್ಟ್ರಾನಿಕ್‍ಸಿಟಿ, ವೈಚ್ ಫೀಲ್ಡ್, ಬಸವನಗುಡಿ ಮತ್ತು ಕೋರಮಂಗಲ ಣೆಗಳಲ್ಲಿ ಯೋಜನೆ ಅನುಷ್ಠಾನಕ್ಕೆ ತರಲಾಗಿದೆ. ಸಾರ್ವಜನಿಕರ ಬಳಕೆ ಮತ್ತು ಪ್ರತಿಕ್ರಿಯೆ ಆಧರಿಸಿ ದಿನ ದಿನಗಳಲ್ಲಿ ನಗರದ ಉಳಿದ ಠಾಣೆಗಳಿಗೂ ವಿಸ್ತರಿಸಲು ನಿರ್ಧರಿಸಲಾಗಿದೆ ಎಂದು ರೆಡ್ಡಿ ಹೇಳಿದರು. ಅಷ್ಟೇ ಅಲ್ಲದೇ, ನೊಂದ ಮಹಿಳೆಯರು ಮಂತ್ರಿಮಾಲ್‍ನಲ್ಲಿರುವ ರಿಮೋಟ್ ಎಫ್ ಐಆರ್ ಕೇಂದ್ರಕ್ಕೂ ತೆರಳಿ ದೂರು ದಾಖಲಿಸಬಹುದಾಗಿದೆ.

ಮಿಸ್ಡ್ ಕಾಲ್ ಸೇವೆ ಆರಂಭ: ಇದೇ ವೇಳೆ  ದೌರ್ಜನ್ಯಗಳ ಬಗ್ಗೆ ದೂರು ದಾಖಲಿಸುವ ಬಗ್ಗೆ ಮಾಹಿತಿಗಾಗಿ ಮಿಸ್ಡ್ ಕಾಲ್ ಸೇವೆಯನ್ನು ಆರಂಬಿsಸಲಾಗಿದೆ. 080-88255533ಕ್ಕೆ ಮಿಸ್ಡ್
ಕಾಲ್ ಕೊಟ್ಟರೆ ಯಾವ ಮಾಧ್ಯಮದ ಮೂಲಕ ಮಾಹಿತಿ ಪಡೆಯಲು ಬಯಸುತ್ತೀರಾ ಎಂಬ ಬಗ್ಗೆ ಟೆಕ್ಸ್ಟ್ ಮೆಸೇಜ್ ಮೊಬೈಲ್ ಫೋನ್‍ಗೆ ಬರುತ್ತದೆ. ಅದರಂತೆ ವಾಟ್ಸ್ ಆ್ಯಪ್, ಇ ಮೇಲ್ ಮತ್ತು ಅಂಚೆ ಮೂಲಕ ಮಾಹಿತಿ ಒದಗಿಸುವ ಸೌಲಭ್ಯವಿದೆ ಎಂದು ಆಯುಕ್ತ ಎಂ.ಎನ್.ರೆಡ್ಡಿ ಹೇಳಿದರು. ಕಾರ್ಯಕ್ರಮದಲ್ಲಿ ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ, ಕೇಂದ್ರ ವಿಭಾಗ ಡಿಸಿಪಿ ಸಂದೀಪ್‍ಪಾಟೀಲ್ ಉಪಸ್ಥಿತರಿದ್ದರು

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel