ರಾಮಲಿಂಗಾರೆಡ್ಡಿ 
ಜಿಲ್ಲಾ ಸುದ್ದಿ

ಹೊಸ ರಸ್ತೆ 2 ವರ್ಷ ಅಗೆಯುವಂತಿಲ್ಲ: ರಾಮಲಿಂಗಾರೆಡ್ಡಿ

ರಸ್ತೆ ಕಾಮಗಾರಿ ನಡೆದ ನಂತರ ಕನಿಷ್ಠ ಎರಡು ವರ್ಷಗಳವರೆಗೂ ರಸ್ತೆ ಅಗೆಯುವಂತಿಲ್ಲ ಎಂದು ಬಿಬಿಎಂಪಿ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು...

ಬೆಂಗಳೂರು: ರಸ್ತೆ ಕಾಮಗಾರಿ ನಡೆದ ನಂತರ ಕನಿಷ್ಠ ಎರಡು ವರ್ಷಗಳವರೆಗೂ ರಸ್ತೆ ಅಗೆಯುವಂತಿಲ್ಲ ಎಂದು ಬಿಬಿಎಂಪಿ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಅವರು ತಿಳಿಸಿದ್ದಾರೆ.

ಬಿಬಿಎಂಪಿಯಲ್ಲಿ ಮಂಗಳವಾರ ನಡೆದ ಓಎಫ್‌ಸಿ ಸಮನ್ವಯ ಸಮಿತಿ ಸಭೆ ನಂತರ ಮಾತನಾಡಿದ ಅವರು, ಓಎಫ್‌ಸಿ ಕೇಬಲ್ ಸೇರಿದಂತೆ ಭೂಮಿಯ ಕೆಳಗೆ ಏನೇ ಅಳವಡಿಸುವುದಿದ್ದರೂ ಕಾಮಗಾರಿಗೆ ಮುನ್ನ ಮಾಡಬೇಕು ಎಂದು ಸೂಚಿಸಲಾಗಿದೆ. ಹೊಸ ರಸ್ತೆಗಳಲ್ಲಿ ಓಎಫ್‌ಸಿ ಕೇಬಲ್ ಅಳವಡಿಸಲು ದೊಡ್ಡದಾಗಿ ಗುಂಡಿ ತೋಡುತ್ತಿದ್ದು, ಸಾರ್ವಜನಿಕರ ಹಣ ಪೋಲಾಗುತ್ತಿದೆ. ಸಣ್ಣ ಕಾಮಗಾರಿಗಳಿದ್ದರೆ ರಸ್ತೆ ಬದಿಗಳಲ್ಲಿ ಸಣ್ಣದಾಗಿ ಗುಂಡಿ ತೋಡಿ ಕಾಮಗಾರಿ ನಡೆಸಬಹುದು. ಆದರೆ ರಸ್ತೆ ಮಧ್ಯ ಗುಂಡಿ ತೋಡುವುದರಿಂದ ಹೊಸದಾಗಿ ಮಾಡಿದ ರಸ್ತೆ ಕಾಮಗಾರಿ ವ್ಯರ್ಥವಾಗುತ್ತದೆ. ಇದಕ್ಕೆ ಕಡಿವಾಣ ಹಾಕುವಂತೆ ಬಿಬಿಎಂಪಿ ವಲಯ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ಕಾಮಗಾರಿ ನಡೆಯುವಾಗಲೇ ವಿವಿಧ ಇಲಾಖೆಗಳೊಂದಿಗೆ ಸಂವಹನ ನಡೆಸಬೇಕು. ರಸ್ತೆ ಕಾಮಗಾರಿಯ ಜೊತೆಗೆ ಓಎಫ್‌ಸಿ ಅಳವಡಿಸುವು ಕಾರ್ಯವೂ ನಡೆಬೇಕು ಎಂದು ಸಚಿವರು ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಅಧಿಕಾರಿಗಳ ಸಭೆ ನಡೆದಿದ್ದು, ಸೇಂಟ್ ಮಾರ್ಕ್ಸ್ ರಸ್ತೆ ಬದಿ ಗುಂಡಿ ತೋಡಿರುವುದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಿಯಮದ ಪ್ರಕಾರ, ಟೆಂಡರ್ ಶ್ಯೂರ್ ರಸ್ತೆಯಲ್ಲಿ ಮುಂಚಿತವಾಗಿ ಎಲ್ಲವನ್ನೂ ಅಳವಡಿಸಬೇಕು. ಬಿಬಿಎಂಪಿ ಹಾಗೂ ಜಲಮಂಡಳಿ ಸಭೆ ನಡೆಸಿ ತೀರ್ಮಾನಕ್ಕೆ ಬರಬೇಕೆಂದು ಸೂಚನೆ ನೀಡಲಾಗಿದೆ ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026: SRH ವಿರುದ್ಧ RR ಗೆ 47 ರನ್ ಗಳ ಭರ್ಜರಿ ಗೆಲುವು

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

SCROLL FOR NEXT