ಜಿಲ್ಲಾ ಸುದ್ದಿ

ವಿಧಾನಸೌಧ, ವಿಕಾಸಸೌಧಕ್ಕೆ ಏರ್ ಪೋರ್ಟ್ ಮಾದರಿ ಭದ್ರತೆ

ಬೆಂಗಳೂರು: ವಿಧಾನಸೌಧ-ವಿಕಾಸ ಸೌಧ ಭದ್ರತೆಗೆ ಆಧುನಿಕ ತಂತ್ರಜ್ಞಾನ ಬಳಕೆ ಹಾಗೂ ಕೈಗಾರಿಕಾ ಭದ್ರತಾ ಪಡೆ ನಿಯೋಜಿಸಿ ವಿಮಾನ ನಿಲ್ದಾಣ ಮಾದರಿಯ ಭದ್ರತೆ ಒದಗಿಸಲು ಸರ್ಕಾರ ಸಿದಟಛಿತೆ ನಡೆಸಿದೆ.

ಈ ಸಂಬಂಧ ತಂತ್ರಜ್ಞರೊಂದಿಗೆ ಚರ್ಚಿಸಿ ಪ್ರಸ್ತಾವನೆ ನೀಡಲು ಪೊಲೀಸ್ ಇಲಾಖೆಗೆ ಸೂಚಿಸಲಾಗಿದ್ದು, ಶೀಘ್ರವೇ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಗೃಹ ಸಚಿವ ಕೆ.ಜೆ.ಜಾರ್ಜ್ ತಿಳಿಸಿದ್ದಾರೆ. ವಾಹನಗಳ ಸ್ಕ್ಯಾನರ್ ಅಳವಡಿಸುವುದು ಭದ್ರತಾ ವ್ಯವಸ್ಥೆಯ ಒಂದು ಪ್ರಮುಖ ಅಂಶ. ಹಾಲಿ ವ್ಯವಸ್ಥೆಯಲ್ಲಿ ಪೊಲೀಸ್ ಸಿಬ್ಬಂದಿ ಪ್ರತಿ ವಾಹನಗಳನ್ನು ಲೋಹ ಶೋಧಕದ ಮೂಲಕ ಪರಿಶೀಲಿಸುತ್ತಾರೆ. ಆದರೆ, ವಾಹನ ಸ್ಕ್ಯಾನರ್ ಅಳವಡಿಸಿದರೆ ಅದು ವಾಹನಗಳನ್ನು ಪೂರ್ಣವಾಗಿ ಶೋಧಿಸುತ್ತದೆ. ಹೀಗಾಗಿ ವಾಹನಗಳು ಬಹು ಹೊತ್ತು ಸರತಿಯಲ್ಲಿ ನಿಂತು ಸಾಗಬೇಕಾದ ಪರಿಸ್ಥಿತಿ ಇರುವುದಿಲ್ಲ.

ಒಂದು ವೇಳೆ ವಾಹನವು ಸ್ಕ್ಯಾನ್ ಆದ ನಂತರ ಅನುಮಾನ ಬಂದಲ್ಲಿ ಮುಂದಿರುವ ಗೇಟ್ ತೆರೆಯದೇ ವಾಹನ ಮುಂದೆ ಸಾಗದಂತೆ ತಡೆಯಲು ಅವಕಾಶವಿರುತ್ತದೆ. ಪ್ರತ್ಯೇಕ ಕಂಟ್ರೋಲ್ ರೂಂ: ವಿಧಾನಸೌಧ ಹಾಗೂ ವಿಕಾಸ ಸೌಧದಲ್ಲಿ ಸಾಕಷ್ಟು ಸಿಸಿಟಿವಿ ಅಳವಡಿಸಿದ್ದರೂ ಅದಕ್ಕೆ ಪ್ರತ್ಯೇಕ ಕಂಟ್ರೋಲ್ ರೂಂ ಇಲ್ಲ ಮತ್ತು ಒಂದೊಮ್ಮೆ ಕ್ಯಾಮೆರಾದಲ್ಲಿ ಕಂಡ ಅಂಶಗಳನ್ನು ರಕ್ಷಣಾ ಸಿಬ್ಬಂದಿಗೆ ಸಂವಹನ ನಡೆಸುವ ವ್ಯವಸ್ಥೆ ಇಲ್ಲ.

ಹೀಗಾಗಿ ಈ ಎರಡು ಕಟ್ಟಡಗಳ ಹೆಚ್ಚಿನ ರಕ್ಷಣೆಗಾಗಿ ಪ್ರತ್ಯೇಕ ಕಂಟ್ರೋಲ್ ರೂಂ ಸ್ಥಾಪಿಸಲು ನಿರ್ಧರಿಸಲಾಗಿದೆ. ಕಂಟ್ರೋಲ್ ರೂಂ ಸ್ಥಾಪನೆಯಾದ ನಂತರ ದಿನದ 24 ಗಂಟೆಯೂ ಆವರಣವನ್ನು ಭದ್ರತಾ ಸಿಬ್ಬಂದಿ ಪರಿಶೀಲಿಸುತ್ತಿರುತ್ತಾರೆ ಮತ್ತು ಅನುಮಾನ ಬಂದರೆ ತಕ್ಷಣವೇ ಸಂಬಂಧಪಟ್ಟ ಭದ್ರತಾ ಸಿಬ್ಬಂದಿಗೆ ವೈರ್‍ಲೆಸ್ ಸಾಧನದ ಮೂಲಕ ಮಾಹಿತಿ ರವಾನಿಸುತ್ತಾರೆ.

ಕೈಗಾರಿಕಾ ಭದ್ರತಾ ಪಡೆ: ಹಾಲಿ ಇರುವ ಪೊಲೀಸ್ ವ್ಯವಸ್ಥೆಗೆ ಪರ್ಯಾಯವಾಗಿ ಪ್ರತ್ಯೇಕ ಭದ್ರತಾ ಪಡೆ ವಿಧಾನಸೌಧವನ್ನು ವಿಧಾನಸೌಧ ಸುತ್ತುವರಿಯಲಿದೆ. ಈ ಬಗ್ಗೆ
ಸರ್ಕಾರ ಅಗತ್ಯ ಕ್ರಮಕೈಗೊಳ್ಳುತ್ತಿದೆ. ಕೈಗಾರಿಕಾ ಭದ್ರತಾ ಪಡೆಯಂತೆ ವಿಶೇಷ ತರಬೇತಿ ಪಡೆದ ಸಶಸ್ತ್ರಧಾರಿ ಪೊಲೀಸ್ ಸಿಬ್ಬಂದಿ ರಕ್ಷಣೆ ನೀಡಲಿದ್ದಾರೆ ಎಂದು ಜಾರ್ಜ್ ತಿಳಿಸಿದ್ದಾರೆ.

SCROLL FOR NEXT