ಜಿಲ್ಲಾ ಸುದ್ದಿ

ಅನುಮತಿ ಇಲ್ಲದೆ ಟವರ್ ಅಳವಡಿಸುವಂತಿಲ್ಲ: ಹೈಕೋರ್ಟ್

ಬೆಂಗಳೂರು: ಬಿಬಿಎಂಪಿ ಅನುಮತಿ ಇಲ್ಲದೆ ಮೊಬೈಲ್ ಟವರ್ ಸ್ಥಾಪಿಸಬಾರದು ಎಂದು ರಿಲಯನ್ಸ್ ಜಿಯೋ ಇನ್ಫೋಕಾಂ ಲಿಮಿಟೆಡ್‍ಗೆ ಹೈಕೋರ್ಟ್ ಸೋಮವಾರ ನಿರ್ದೇಶಿಸಿದೆ.

ವಸತಿ ಪ್ರದೇಶವಾದ ಭೈರಸಂದ್ರದ ಮುಖ್ಯರಸ್ತೆ ಪಕ್ಕದಲ್ಲಿರುವ ಬಿ.ಆರ್.ವೆಂಕಟೇಶ್ವರಲು ಎಂಬುವರ ಮನೆಯ ಮೇಲೆ ಮೊಬೈಲ್ ಟವರ್ ಅಳವಡಿಸಲು ರಿಲಯನ್ಸ್ ಸಂಸ್ಥೆ ಮುಂದಾಗಿತ್ತು. ಇದನ್ನು ಪ್ರಶ್ನಿಸಿ ಸ್ಥಳೀಯ ನಿವಾಸಿಗಳಾದ ಮಧುಸೂಧನ್ ಮತ್ತಿತರರು ಹೈಕೋರ್ಟ್‍ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

ಅರ್ಜಿ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಸ್.ಕೆ.ಮುಖರ್ಜಿ ಮತ್ತು ನ್ಯಾ.ರಾಮಮೋಹನ ರೆಡ್ಡಿ ಅವರು, ಅರ್ಜಿಗೆ ಸಂಬಂಧಿಸಿದಂತೆ ಜೂ.15ರಂದು ಆಕ್ಷೇಪಣೆ
ಸಲ್ಲಿಸುವಂತೆ ರಿಲಯನ್ಸ್ ಜಿಯೋ ಇನ್ಫೋಕಾಂ ಲಿಮಿಟೆಡ್ ಮತ್ತು ಮನೆಯ ಮಾಲೀಕ ಬಿ. ಆರ್.ವೆಂಕಟೇಶ್ವರಲು ಅವರಿಗೆ ನಿರ್ದೇಶಿಸಿದೆ. ಅಲ್ಲದೆ, ಅರ್ಜಿಯ ಮುಂದಿನ ವಿಚಾರಣೆವರೆಗೆ
ವಿವಾದ ಸ್ಥಳದಲ್ಲಿ ಬಿಬಿಎಂಪಿ ಅನುಮತಿ ಇಲ್ಲದೆ ಮೊಬೈಲ್ ಟವರ್ ಸ್ಥಾಪಿಸಬಾರದು ಎಂದು ಪೀಠ ಇದೇ ವೇಳೆ ನಿರ್ದೇಶಿಸಿದೆ. ವಸತಿ ಪ್ರದೇಶದ ಮೊಬೈಲ್ ಟವರ್ ಅಳವಡಿಸುವಂತಿಲ್ಲ ಎಂದು ನಿಯಮವಿದ್ದರೂ ಉಲ್ಲಂಘನೆ ಮಾಡಲಾಗುತ್ತಿದೆ ಎಂದು ಅರ್ಜಿಯಲ್ಲಿ ದೂರಲಾಗಿತ್ತು.

SCROLL FOR NEXT