ಪತ್ರಿಕಾಗೋಷ್ಠಿಯಲ್ಲಿ ಶಾಂತವೀರ ಸ್ವಾಮೀಜಿ ಮತ್ತಿತರರು ಹಾಜರಿದ್ದರು. 
ಜಿಲ್ಲಾ ಸುದ್ದಿ

ಅರ್ಚಕರಿಗೆ ಗೌರವ ಧನ ಹೆಚ್ಚಿಸಿ: ಶಾಂತವೀರ ಸ್ವಾಮೀಜಿ ಆಗ್ರಹ

ಸರ್ಕಾರ ಅರ್ಚಕರಿಗೆ 10 ಸಾವಿರ ಗೌರವಧನವನ್ನು ನೀಡಬೇಕು ಎಂದು ಕೊಳದ ಮಠದ ಶಾಂತವೀರ ಸ್ವಾಮೀಜಿ ಆಗ್ರಹಿಸಿದ್ದಾರೆ...

ಬೆಂಗಳೂರು: ಸರ್ಕಾರ ಅರ್ಚಕರಿಗೆ 10 ಸಾವಿರ ಗೌರವಧನವನ್ನು ನೀಡಬೇಕು ಎಂದು ಕೊಳದ ಮಠದ ಶಾಂತವೀರ ಸ್ವಾಮೀಜಿ ಆಗ್ರಹಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಲಾತಲಾಂತರದಿಂದಲೂ ನಮ್ಮ ಹಿಂದೂ ದೇವಸ್ಥಾನಗಳಲ್ಲಿ ಸೇವೆ ಸಲ್ಲಿಸುತ್ತಾ ಬಂದಿರುವ ಅರ್ಚರಕರನ್ನು ರಾಜ್ಯ ಸರ್ಕಾರ ಕಡೆಗಣಿಸಿದೆ. ಅರ್ಚರಕರಿಂದ ನಮ್ಮ ಪರಂಪರೆ ಉಳಿದುಕೊಂಡಿದ್ದು, ನಮ್ಮ ಹಿಂದೂ ಧಾರ್ಮಿಕತೆಯನ್ನು ಕಾಪಾಡುತ್ತಿದ್ದಾರೆ. ಆದರೆ, ಇಂತಹ ಅರ್ಚರಕರಿಗೆ ಸರ್ಕಾರದಿಂದ ಯಾವುದೇ ನೆರವು ಸಿಗುತಿಲ್ಲ ಎಂದು ಆರೋಪಿಸಿದ್ದಾರೆ.

ಸುಮಾರು 35 ಸಾವಿರ ದೇವಾಲಯಗಳ ಅರ್ಚಕರಿಗೆ ಯಾವುದೇ ರೀತಿಯ ಗೌರವ ಧನ ಸಿಗುತ್ತಿಲ್ಲ. ಸರ್ಕಾರ ಕೊಡುವ ಅಲ್ಪಸ್ವಲ್ಪ ಹಣ ದೇವಾಲಯದ ಖರ್ಚುಗಳಿಗೆ ಆಗುತ್ತಿದೆ ಹೊರತು, ಅರ್ಚಕರ ಜಿವನೋಪಾಯಕ್ಕೆ ಸಿಗುತ್ತಿಲ್ಲ. ಇದರಿಂದ ಕುಟುಂಬ ನಿರ್ವಹಣೆಗೆ ಕಷ್ಟವಾಗಿದೆ.
ಈ ಹಿನ್ನಲೆಯಲ್ಲಿ ಸಿ ವರ್ಗದ ಅರ್ಚಕರಿಗೆ ತಿಂಗಳಿಗೆ 10 ಸಾವಿರ ಗೌರವ ಧನ ನೀಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಮುಜರಾಯಿ ಇಲಾಖೆ ಸಂಬಂಧಪಟ್ಟ ಸಚಿವರಿಗೆ ಒತ್ತಾಯಿಸುತ್ತೇನೆ ಎಂದು ಶಾಂತವೀರ ಸ್ವಾಮೀಜಿ ತಿಳಿಸಿದ್ದಾರೆ.

ಈಗಾಗಲೇ ಕೋಟಿಗಟ್ಟಲೆ ಆದಾಯ ಬರುತ್ತಿರುವ ಕುಕ್ಕೆ ಸುಬ್ರಮಣ್ಯ, ಚಾಮುಂಡಿ ಬೆಟ್ಟ, ನಂಜನಗೂಡ ದೇವಲಾಯ ಸೇರಿದಂತೆ ಸುಮಾರು 7-8 ದೇವಸ್ಥಾನಗಳಿಗೆ ಸರ್ಕಾರ 450 ಕೋಟಿ ನೀಡಿದ್ದಾರೆ. ಆದರೆ, ಸಿ ವರ್ಗದಲ್ಲಿ ಬರುವಂತಹ ದೇವಾಲಗಳಿಗೆ ಯಾವುದೇ ಅನುದಾನ ನೀಡಿಲ್ಲ. ಕೋಟಿಗಟ್ಟಲೇ ಹಣ ಬರುವ ದೇವಾಲಯಗಳಿಗೆ ಹಣದ ಅವ್ಯಕತೆ ಇಲ್ಲ. ಹಾಗಾಗಿ, ಇದೇ ಹಣವನ್ನು ಸಿ ವರ್ಗದಲ್ಲಿ ಬರುವ ಸುಮಾರು 35 ಸಾವಿರ ದೇವಾಲಯಗಳಿಗೆ ನೀಡಿ ಎಂದು ಅವರು ಒತ್ತಾಯಿಸಿದ್ದಾರೆ.
ಹೀಂದೂ ದತ್ತಿ ಕೇಂದ್ರಗಳಲ್ಲಿ ಹಿಂದೂಗಳೇ ಇರಬೇಕು
ಹಿಂದೂಗಳ ಧಾರ್ಮಿಕ ಕೇಂದ್ರಗಳಿಗೆ ಹಿಂದೂಗಳ ಕೈಯಲ್ಲಿರಬೇಕು ಎಂದು ಕೊಳದ ಮಠದ ಶಾಂತವೀರ ಸ್ವಾಮೀಜಿ ಹೇಳಿದ್ದಾರೆ.
 ಹಿಂದೂ ಧಾರ್ಮಿಕ ಕೇಂದ್ರ ಅಥವಾ ದತ್ತಿಗಳಲ್ಲಿ ಹಿಂದೂಗಳನ್ನೇ ಇರಿಸಬೇಕು. ಅನ್ಯ ಧರ್ಮಗಳ ಕೇಂದ್ರಗಳಲ್ಲಿ ಆಯಾ ಧರ್ಮದವರನ್ನೇ ಆಯ್ಕೆ ಮಾಡಲಾಗುತ್ತದೆ. ಅದೇ ರೀತಿ ಹಿಂದೂ ಕೇಂದ್ರಗಳಲ್ಲೂ ನಡೆಯಬೇಕು. ಹಿಂದೂ ಎಂದು ಅವರು ಆಗ್ರಹಿಸಿದ್ದಾರೆ.
ರಾಜ್ಯೋತ್ಸವ ಪ್ರಶಸ್ತಿಗೆ ಆಗ್ರಹ
ಸಾವು ನೋವು, ಪೂಜೆ, ಪುನಃಸ್ಕಾರ ಯಾವುದೇ ಕಾರ್ಯಕ್ರಮಗಳಲ್ಲಿ ಬಂದು ಭಜನಾ ಕಲಾವಿದರನ್ನು ಸರ್ಕಾರ ಗುರುತಿಸಬೇಕು. ಎಲ್ಲಾ ವರ್ಗಗಳಲ್ಲಿ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗುತ್ತದೆ. ಅದೇ ರೀತಿ ಭಜನಾ ಕಲಾವಿದರಿಗೂ ರಾಜ್ಯೋತ್ಸವ ಪ್ರಶಸ್ತಿ ಏಕೆ ನೀಡಬಾರುದು ಎಂದು ಪ್ರಶ್ನಿಸಿದ ಅವರು, ಸರ್ಕಾರ ರಾಜ್ಯೋತ್ಸವ ಪ್ರಶಸ್ತಿಗೆ ಭಜನಾ ಕಲಾವಿದರನ್ನು ಆಯ್ಕೆ ಮಾಡಬೇಕು ಎಂದು ಶಾಂತವೀರ ಸ್ವಾಮೀಜಿ ಆಗ್ರಹಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

ವಿಧಾನಪರಿಷತ್'ಗೆ ನಾಮನಿರ್ದೇಶನ: ನಾಲ್ವರು MLC ಅಭ್ಯರ್ಥಿಗಳು ಹೆಸರು ಬದಲು, ಪಟ್ಟಿಯಲ್ಲಿ TNIE ಮೈಸೂರು ವಿಭಾಗದ ಮುಖ್ಯಸ್ಥನಿಗೆ ಸ್ಥಾನ

ಬಾನು ಮುಷ್ತಾಕ್‌ ದಸರಾ ಉದ್ಘಾಟನೆಗೆ ಆಕ್ಷೇಪ; ಮುಸ್ಲಿಂ ದ್ವೇಷ ಮನಸ್ಥಿತಿಯನ್ನು ಬದಿಗಿಟ್ಟು, ಸಂವಿಧಾನದ ಆಶಯ ಅರ್ಥ ಮಾಡಿಕೊಳ್ಳಿ: ಸಚಿವ ಹೆಚ್.ಸಿ.ಮಹದೇವಪ್ಪ

ಚಾಮುಂಡೇಶ್ವರಿ ದೇವಿ ಬಗ್ಗೆ ಗೌರವವಿದ್ದು, ಧಾರ್ಮಿಕ ಭಾವನೆಗಳ ಗೌರವಿಸುತ್ತೇನೆ; ಬಾನು ಮುಷ್ತಾಕ್

JC ರಸ್ತೆಯಲ್ಲಿ White-topping ಕಾಮಗಾರಿ: ಆ.30ರವರೆಗೆ ಭಾರಿ ಗಾತ್ರದ ವಾಹನಗಳ ಸಂಚಾರಕ್ಕೆ ನಿರ್ಬಂಧ

SCROLL FOR NEXT