ಜಿಲ್ಲಾ ಸುದ್ದಿ

ಬ್ಲಡ್ ಫಾರ್ ಶ್ಯೂರ್ ಮೊಬೈಲ್ ಅಪ್ಲಿಕೇಶನ್

Mainashree

ಬೆಂಗಳೂರು: ತುರ್ತು ಸಂದರ್ಭದಲ್ಲಿ ರಕ್ತದ ಕೊರತೆ ಉದ್ಭವಿಸಿದರೆ ಅಂತಹ ಸಂದರ್ಭದಲ್ಲಿ ಜನರ ಅನುಕೂಲಕ್ಕಾಗಿ ಬ್ಲಡ್ ಫಾರ್ ಸೂರ್ ಹೊಸ ಮೊಬೈಲ್ ಆಪ್ ಒಂದು ಸಿದ್ಧವಾಗಿದೆ.

ಬ್ಲಡ್ ಫಾರ್ ಸೂರ್ ಸೇವೆಯು ಸಾರ್ವಜನಿಕರಿಗೆ ಸಂಪೂರ್ಣ ಉಚಿತವಾಗಿ ಸೇವೆ ಸಲ್ಲಿಸಲ್ಲಿದೆ. ಈ ಸೇವೆಯು ಜೂನ್ 14 ವಿಶ್ವ ರಕ್ತದಾನ ದಿನದಂದು ಲೋಕಾರ್ಪಣೆಗೊಳ್ಳುತ್ತಿದೆ.

ಗೂಗಲ್ ಪ್ಲೇ ಸ್ಟೋರ್ ನಿಂದ ಬ್ಲಡ್ ಫಾರ್ ಸೂರ್ ಅಪ್ಲಿಕೇಶನ್ ಡೌನ್ ಲೋಡ್ ಮಾಡಿಕೊಂಡು ನಂತರ ಅದನ್ನು ರಿಜಿಸ್ಟರ್ ಮಾಡಿಕೊಳ್ಳಬೇಕು. ಈ ಅಪ್ಲಿಕೇಶನ್ ಸಂಪೂರ್ಣವಾಗಿ ಜಿಯೋ ಲೋಕೇಶನ್(ಜಿಪಿಎಸ್) ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತದೆ.

ಬ್ಲಡ್ ಫಾರ್ ಸೂರ್ ಅಪ್ಲಿಕೇಶನ್ ನಿಂದ ತುರ್ತು ಸಂದರ್ಭದಲ್ಲಿ ನಮ್ಮ ಸುತ್ತ ಲಭ್ಯ ಇರುವಂತಹ ರಕ್ತ ದಾನಿಗಲು ಮತ್ತು ರಕ್ತ ನಿಧಿಗಳನ್ನು ಕ್ಷಣಾರ್ದಾದಲ್ಲಿ ಪತ್ತೆ ಹಚ್ಚಿ, ಅವರಿಗೆ ಪರಿಸ್ಥಿತಿಯ ಅನಿವಾರ್ಯತೆಯನ್ನು ತಿಳಿಸಬಹುದು. ಇದರಿಂದ ಆಸಕ್ತಿಯುಳ್ಳ ಮತ್ತು ಹತ್ತಿರದಲ್ಲಿರುವ ರಕ್ತ ದಾನಿಗಳು ಸರಿಯಾದ ಸಮಯಕ್ಕೆ ರಕ್ತದಾನ ಮಾಡಿ ಅಮೂಲ್ಯವಾದ ಜೀವವನ್ನು ಉಳಿಸಬಹುದು.

SCROLL FOR NEXT