ನಗರ ಪ್ರದಕ್ಷಿಣೆಯಲ್ಲಿ ನಿರತರಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ 
ಜಿಲ್ಲಾ ಸುದ್ದಿ

ನಗರದ ಹಿನ್ನಡೆಗೆ ಬಿಜೆಪಿ ಕಾರಣ: ಸಿದ್ದರಾಮಯ್ಯ

ರಾಜಧಾನಿ ಬೆಂಗಳೂರು ಅಭಿವೃದ್ಧಿಯಾಗದೇ ಇರುವುದಕ್ಕೆ ಬಿಜೆಪಿಯೇ ಕಾರಣ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಪಾದಿಸಿದ್ದಾರೆ...

ಬೆಂಗಳೂರು: ರಾಜಧಾನಿ ಬೆಂಗಳೂರು ಅಭಿವೃದ್ಧಿಯಾಗದೇ ಇರುವುದಕ್ಕೆ ಬಿಜೆಪಿಯೇ ಕಾರಣ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಪಾದಿಸಿದ್ದಾರೆ.

ಬಿಬಿಎಂಪಿಯಲ್ಲಿ ಬಿಜೆಪಿ ಅಧಿಕಾರದಲ್ಲಿದಾಗ ಅಭಿವೃದ್ಧಿ ಹೆಸರಿನಲ್ಲಿ ಕೋಟ್ಯಂತರ ರುಪಾಯಿ ವೆಚ್ಚ ಮಾಡಲಾಗಿದೆ. ಆದರೆ ಅಭಿವೃದ್ಧಿ ಮಾತ್ರ ಆಗಿಲ್ಲ. ಆದ್ದರಿಂದ ನಗರದಲ್ಲಿ ಈಗ ನಿರೀಕ್ಷಿತ ರೀತಿಯಲ್ಲಿ ಸೌಲಭ್ಯ ಇಲ್ಲದಿರುವುದಕ್ಕೆಬಿಜೆಪಿಯೇ ಕಾರಣ ಎಂದು ಅವರು ಶುಕ್ರವಾರ ನಗರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು. ನಗರದಲ್ಲಿ ದೂರದೃಷ್ಟಿ ಇಲ್ಲದ ಯೋಜನೆಗಳನ್ನು ಜಾರಿಗೊಳಿಸಿದ್ದರಿಂದ ಇಂದು ಸಂಚಾರ ದಟ್ಟಣೆ ಹೆಚ್ಚಾಗಿದೆ. ಜನರ ಗಂಟೆಗಟ್ಟಲೇ ರಸ್ತೆಯಲ್ಲಿ ಕಾಯುವಂತಾಗಿದೆ. ಆದ್ದರಿಂದ ಸರ್ಕಾರ ಮೇಲು ಸೇತುವೆಗಳನ್ನು ನಿರ್ಮಿಸುತ್ತಿದೆ. ನಗರೋತ್ಥಾನದಲ್ಲಿ ಈಗಾಗಲೇ ರು. 1500ಕೋಟಿಗಳನ್ನು ಒದಗಿಸಿದ್ದು, ಆನಂತರ ರು. 1000ಕೋಟಿಗಳನ್ನು ನೀಡಲಾಗಿದೆ.

ರಾಜ ಕಾಲುವೆಗಳಲ್ಲಿ ಹೂಳು ತುಂಬಿಕೊಂಡಿದ್ದು, ಮಳೆಗಾಲದಲ್ಲಿ ಮನೆಗಳಿಗೇ ನೀರು ನುಗ್ಗುತ್ತಿದೆ. ಇದನ್ನು ತಪ್ಪಿಸಲು ರಾಜಕಾಲುವೆಗಳ ದುರಸ್ತಿಮತ್ತು ಅಭಿವೃದ್ಧಿಗೆ ರು.250ಕೋಟಿ ಒದಗಿಸಲಾಗಿದೆ. ಇದರೊಂದಿಗೆ ನಗರದಲ್ಲಿರುವ ಸಮಸ್ಯೆಗಳನ್ನು ಪರಿಶೀಲಿಸಲು ಪ್ರತಿವಾರ ನಗರ ಸಂಚಾರ ಆರಂಭಿಸಿದ್ದೇನೆ. ಇದಕ್ಕೆ ಪೂರಕವಾಗಿ ಬಿಬಿಎಂಪಿಗೆ ಆಡಳಿತಾಧಿಕಾರಿ ಬಂದ ಮೇಲೆಮತ್ತು ಹೊಸ ಆಯುಕ್ತರು ನೇಮಕಗೊಂಡ ಮೇಲೆ ಆಡಳಿತ ಚುರುಕಾಗಿದೆ. ಒಂದಷ್ಟು  ಆಭಿವೃದ್ಧಿ ಕಾರ್ಯಗಳು ಶುರು ವಾಗಿವೆ ಎಂದು ಸಿದ್ದರಾಮಯ್ಯ ಹೇಳಿದರು.

ಇದಕ್ಕೂ ಮುನ್ನ ಹೊರ ವರ್ತುಲ ರಸ್ತೆಯ ಶ್ರೀಕಂಠೀರವ ಸ್ಟುಡಿಯೋ ಜಂಕ್ಷನ್ ಮೇಲು ಸೇತುವೆ, ನಾಗವಾರ ಜಂಕ್ಷನ್‍ನಲ್ಲಿರುವ ಮೇಲು ಸೇತುವೆ, ಕಮ್ಮನಹಳ್ಳಿಯ ಪಾದಚಾರಿ ಮೇಲು ಸೇತುವೆ, ಬಾಬುಸಾಪಾಳ್ಯದ ಪಾದಚಾರಿ ಮೇಲು ಸೇತುವೆ, ಹಾಗೂ ಬಾಗಲೂರು, ಕೊತ್ತನೂರಿನ ನೂತನ ಪೊಲೀಸ್ ಠಾಣೆಗಳನ್ನು ಉದ್ಘಾಟಿಸಿದರು.

ಮುಖ್ಯಮಂತ್ರಿ ಅವರು ಭೇಟಿ ನೀಡಿದ ಸ್ಥಳದಲ್ಲಿ ಕಾಂಗ್ರೆಸ್ ಕಾರ್ಯಕರ್ತರು, ಪಟಾಕಿ ಸಿಡಿಸಿದರು. ತಮಟೆ, ಡೊಳ್ಳು ಭಾರಿಸಿದರು. ಪೂಜಾ ಕುಣಿತದಂತ ಜಾನಪದ ಕಲೆಗಳೊಂದಿಗೆ ಸ್ವಾಗತಿಸುತ್ತಿದ್ದರು. ಮುಖ್ಯಮಂತ್ರಿ ಆಗಮಿಸುತ್ತಿದ್ದಂತೆ ಜೈಕಾರ ಹಾಕಿ ಮಾಲಾರ್ಪಣೆ ಮಾಡಿ ಸ್ವಾಗತಿಸುತ್ತಿದ್ದರು. ಇದಕ್ಕೆ ಸ್ಪಂದಿಸುತ್ತಿದ್ದ ಸಿದ್ದರಾಮಯ್ಯ ಕಾರ್ಯಕರ್ತರತ್ತ ಕೈಬಿಸಿ ನಗೆ ಬೀರುತ್ತಿದ್ದರು.

ಶಾಸಕರಾದ ಭೈರತಿ ಬಸವರಾಜು, ಮುನಿರತ್ನ, ಎಂ.ಟಿ.ಬಿ.ನಾಗರಾಜ್, ವಿಧಾನ ಪರಿಷತ್ ಸದಸ್ಯ ಆರ್.ವಿ.ವೆಂಕಟೇಶ್, ನಗರ ಪೊಲೀಸ್ ಆಯುಕ್ತ ಎಂ.ಎನ್.ರೆಡ್ಡಿ, ಬಿಡಿಎ ಆಯುಕ್ತ ಶ್ಯಾಮ್ ಭಟ್, ಬಿಬಿಎಂಪಿ ಆಡಳಿತಾಧಿಕಾರಿ ವಿಜಯಭಾಸ್ಕರ್ ಹಾಜರಿದ್ದರು.
ಬೆಂಗಳೂರು: ರಾಜಧಾನಿ ಬೆಂಗಳೂರು ಅಭಿವೃದ್ಧಿಯಾಗದೇ ಇರುವುದಕ್ಕೆ ಬಿಜೆಪಿಯೇ ಕಾರಣ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಪಾದಿಸಿ ದ್ದಾರೆ.

ಪ್ರತಿಪಕ್ಷಕ್ಕೆ ತಿರುಗೇಟು
ಅನ್ನಭಾಗ್ಯಯೋಜನೆಯನ್ನು ವಿರೋಧಿಸುವವರು ಹಸಿವಿನ ಕಷ್ಟ ತಿಳಿಯದವರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಪಕ್ಷಗಳಿಗೆ ತಿರುಗೇಟು ನೀಡಿದ್ದಾರೆ. ರಾಜ್ಯದಲ್ಲಿ ಯಾವುದೇ ವ್ಯಕ್ತಿ ಹಸಿವಿನಿಂದ ಇರಬಾರದು ಎಂದು ಸರ್ಕಾರ ಅನ್ನಭಾಗ್ಯ ಯೋಜನೆ ಆರಂಭಿಸಿದೇಯೇ ವಿನಃ ಜನರನ್ನು ಸೋಮಾರಿ ಮಾಡುವುದಕ್ಕೆ ಅಲ್ಲ. ಆದರೆ ಇದನ್ನ ಪ್ರತಿಪಕ್ಷಗಳು ಟೀಕಿಸುತ್ತಿವೆ. ಅಂದರೆ ಪ್ರತಿಪಕ್ಷದವರಿಗೆ ಹಸಿವಿನ ಕಷ್ಟ ಅಷ್ಟಾಗಿ ಗೊತ್ತಿಲ್ಲ ಎಂದು ಕಾಣುತ್ತದೆ ಎಂದರು. ರಾಜ್ಯದಲ್ಲಿ 1.37ಕೋಟಿಗೆ ಅನ್ನಭಾಗ್ಯ ಒದಗಿಸಲಾಗುತ್ತಿದ್ದು, ರಾಜ್ಯವನ್ನು ಹಸಿವು ಮುಕ್ತಗೊಳಿಸಲು ಸರ್ಕಾರ ನಿರ್ಧರಿಸಿದೆ ಎಂದು ಹೇಳಿದರು

Follow KannadaPrabha channel on WhatsApp

Download the KannadaPrabha News app to follow the latest news updates

Subscribe and Receive exclusive content and updates on your favorite topics

Subscribe to KannadaPrabha YouTube Channel and watch Videos

ಕರೆನ್ಸಿ ನೋಟುಗಳಿಂದ ಗಾಂಧೀಜಿ ಚಿತ್ರ ತೆಗೆದುಹಾಕಲು ಸರ್ಕಾರ ಚಿಂತನೆ, ಉನ್ನತ ಮಟ್ಟದ ಸಭೆ ಕೂಡ ನಡೆದಿದೆ: ಸಿಪಿಎಂ ಸಂಸದ ಜಾನ್ ಬ್ರಿಟಾಸ್

ಭಾರತ-ನ್ಯೂಜಿಲ್ಯಾಂಡ್ ಮುಕ್ತ ವ್ಯಾಪಾರ ಒಪ್ಪಂದ: 3 ತಿಂಗಳಲ್ಲಿ ಜಾರಿ, ಇದರಿಂದ ಲಾಭವೇನು?

ಲವರ್ ಜೊತೆ ಸೇರಿ ಗಂಡನನ್ನು ಕೊಂದು, ಮೃತದೇಹವನ್ನು 'ಗ್ರೈಂಡರ್' ನಲ್ಲಿ ರುಬ್ಬಿ, ಚರಂಡಿಗೆ ಎಸದ ಪತ್ನಿ!

ರಘುನಾಥ್‌ ಹತ್ಯೆ ಕೇಸ್‌: TTD ಮಾಜಿ ಅಧ್ಯಕ್ಷ ಆದಿಕೇಶವುಲು ಮಕ್ಕಳು- DYSP ಸೇರಿ ಮೂವರನ್ನು ಬಂಧಿಸಿದ ಸಿಬಿಐ

'ಬಿಹಾರದ ಪ್ರಗತಿ' ನೋಡಿ ಸಂತೋಷ: ಮತ್ತೆ NDA ಸರ್ಕಾರ ಹೊಗಳಿದ ಕಾಂಗ್ರೆಸ್ ಸಂಸದ ಶಶಿ ತರೂರ್ !

SCROLL FOR NEXT