ಬೆಂಗಳೂರು ವಿಶ್ವವಿದ್ಯಾಲಯ, ಸೆಂಟ್ರಲ್ ಕಾಲೇಜು 
ಜಿಲ್ಲಾ ಸುದ್ದಿ

ರೋಸ್ಟರ್ ಪಾಲಿಸದಿದ್ದರೆ ಮಾನ್ಯತೆ ರದ್ದು: ವಿವಿ ಎಚ್ಚರಿಕೆ

ವಿದ್ಯಾರ್ಥಿಗಳ ಪ್ರವೇಶ ಹಾಗೂ ಸಿಬ್ಬಂದಿ ನೇಮಕ ಕುರಿತಂತೆ ರೋಸ್ಟರ್ ಪದ್ಧತಿ ಅನುಸರಿಸದ ಪದವಿ ಹಾಗೂ ಸ್ನಾತಕೋತ್ತರ ಪದವಿ ಕಾಲೇಜುಗಳ ಮಾನ್ಯತೆ ರದ್ದುಪಡಿಸುವುದಾಗಿ ಬೆಂಗಳೂರು ವಿಶ್ವವಿದ್ಯಾಲಯ ಎಚ್ಚರಿಸಿದೆ...

ಬೆಂಗಳೂರು: ವಿದ್ಯಾರ್ಥಿಗಳ ಪ್ರವೇಶ ಹಾಗೂ ಸಿಬ್ಬಂದಿ ನೇಮಕ ಕುರಿತಂತೆ ರೋಸ್ಟರ್ ಪದ್ಧತಿ ಅನುಸರಿಸದ ಪದವಿ ಹಾಗೂ ಸ್ನಾತಕೋತ್ತರ ಪದವಿ ಕಾಲೇಜುಗಳ ಮಾನ್ಯತೆ ರದ್ದುಪಡಿಸುವುದಾಗಿ ಬೆಂಗಳೂರು ವಿಶ್ವವಿದ್ಯಾಲಯ ಎಚ್ಚರಿಸಿದೆ.

ಬೆಂಗಳೂರು ವಿಶ್ವವಿದ್ಯಾಲಯ ಸೆಂಟ್ರಲ್ ಕಾಲೇಜು ಆವರಣದಲ್ಲಿ ನಡೆದ ಸಿಂಡಿಕೇಟ್ ಸಭೆಯಲ್ಲಿ ಶುಕ್ರವಾರ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಸಭೆಯ ನಂತರ ಕುಲಪತಿ ಪ್ರೊ. ಬಿ. ತಿಮ್ಮೇಗೌಡ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ನಿಯಮಗಳ ಪ್ರಕಾರ ಕಾಲೇಜುಗಳು ನಾನಾ ಕೋರ್ಸುಗಳ ಪ್ರವೇಶ ಪ್ರಕ್ರಿಯೆ ಹಾಗೂ ನೇಮಕಾತಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳಿಗೆ (ಶೇ.15 ಹಾಗೂ 7.5ರಷ್ಟು) ಮೀಸಲು ನೀಡುವ ಮೂಲಕ ರೋಸ್ಟರ್ ಪದ್ಧತಿ ಅನುಸರಿಸ ಬೇಕು. ಆದರೆ, ವಿವಿ ವ್ಯಾಪ್ತಿಯ ಬಹುತೇಕ ಕಾಲೇಜುಗಳು ಈ ನಿಯಮ ಅನುಸರಿಸುತ್ತಿಲ್ಲ. ಈ ಬಗ್ಗೆ ಜಯನಗರ 9ನೇ ಬ್ಲಾಕ್ನ ಜೈನ್ ಕಾಲೇಜಿನ ಬಗ್ಗೆ ಬಂದ ದೂರನ್ನು ಪರಿಶೀಲಿಸಿದಾಗ ರೋಸ್ಟರ್ ಅನುಸರಿಸದ ಬಗ್ಗೆ ಖಾತ್ರಿಯಾಯಿತು.ಈ ಬಗ್ಗೆ ಕಾಲೇಜಿಗೆ ಶೋಕಾಸ್ ನೋಟಿಸ್ ನೀಡಲಾಗಿತ್ತು. ಈ ಕಾಲೇಜಿನ ಆಡಳಿತ ಮಂಡಳಿ ಎಸ್ಸಿಎಸ್ಟಿ ವಿದ್ಯಾರ್ಥಿಗಳಿಂದ ಅರ್ಜಿಗಳು ಬಾರದ ಕಾರಣ ಈ ನಿಯಮ ಅನುಸರಿಸಲ್ಲ. ಮುಂದಿನ ಶೈಕ್ಷಣಿಕ ವರ್ಷದಿಂದ ಅದನ್ನು ಕಟ್ಟುನಿಟ್ಟಾಗಿ ಪಾಲಿಸುವುದಾಗಿ ಕಾಲೇಜು ಉತ್ತರಿಸಿದೆ ಎಂದು ತಿಳಿಸಿದರು.

ವಿವಿ ವ್ಯಾಪ್ತಿಯ ಇನ್ನೂ ಹಲವು ಕಾಲೇಜುಗಳೂ ರೋಸ್ಟರ್ ಪದಟಛಿತಿ ಅನುಸರಿಸುತ್ತಿಲ್ಲ ಎಂದು ದೂರು ಬಂದಿದೆ. ವಿವಿಯ ಸ್ಥಳೀಯ ವಿಚಾರಣಾ ಸಮಿತಿ(ಎಲ್ಐಸಿ) ಪರಿಶೀಲನೆಗೆ ತೆರಳಿದಾಗ ವಿದ್ಯಾರ್ಥಿಗಳ ದಾಖಲಾತಿ ಮಾಹಿತಿ ಪರಿಶೀಲಿಸುವಂತೆ ಸೂಚಿಸಲಾಗುವುದು. ಈ ವೇಳೆ ಯಾವುದೇ ಕಾಲೇಜು ರೋಸ್ಟರ್ ಪದಟಛಿತಿ ಗಾಳಿಗೆ ತೂರಿರುವುದು ಕಂಡು ಬಂದರೆ ತಕ್ಷಣ ನೋಟಿಸ್ ಜಾರಿ ಮಾಡಿ, ಸಮರ್ಪಕ ಮಾಹಿತಿ ನೀಡದಿದ್ದಲ್ಲಿ ಮಾನ್ಯತೆ ರದ್ದು ಪಡಿಸುವ ಸಂಬಂಧ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ತಿಮ್ಮೇಗೌಡ ತಿಳಿಸಿದರು.

ವಿವಿಯ ದೂರಶಿಕ್ಷಣ ಕೇಂದ್ರಗಳಿಗೆ ಇನ್ನು ಮುಂದೆ ಪ್ರತಿ ವರ್ಷವೂ ಮಾನ್ಯತೆ ನವೀಕರಿಸಲು ನಿರ್ಧರಿಸಲಾಗಿದೆ. ಇದೇ ವೇಳೆ ವಿವಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ 98 ಬೋಧಕೇತರ ಸಿಬ್ಬಂದಿಯನ್ನು ಕಾಯಂಗೊಳಿಸಲು 2008ರಲ್ಲಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ ಸರ್ಕಾರದಿಂದ ಸೂಚನೆ ಬಂದಿರಲಿಲ್ಲ. ಈ ಪೈಕಿ 66 ಜನ ರು ನ್ಯಾಯಾಲಯದ ಮೊರೆ ಹೋಗಿ ನಿರ್ದೇಶನ ತಂದಿದ್ದಾರೆ. ಈ ಬಗ್ಗೆಯೂ ಅರ್ಹರನ್ನು ಕಾಯಂಗೊಳಿಸಲು ನಿರ್ಧರಿಸಲಾಯಿತು ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

SCROLL FOR NEXT