ಜಿಲ್ಲಾ ಸುದ್ದಿ

7 ಆರೋಪಿಗಳ ಬಂಧನ, 27 ಲಕ್ಷದ ಚಿನ್ನಾಭರಣ ವಶ

ಬೆಂಗಳೂರು: ಸರಗಳವು ಮತ್ತು ಮನೆಗಳವು ಮಾಡುತ್ತಿದ್ದ 7 ಆರೋಪಿಗಳನ್ನು ಬಂಧಿಸಿರುವ ಆಗ್ನೇಯ ವಿಭಾಗ ಪೊಲೀಸರು ರು.27 ಲಕ್ಷ ಮೌಲ್ಯದ ಚಿನ್ನಾಭರಣ, ಬೆಳ್ಳಿ ವಸ್ತುಗಳು ಮತ್ತು ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.

ನಿರ್ಜನ ಪ್ರದೇಶದಲ್ಲಿ ಒಂಟಿಯಾಗಿ ಓಡಾಡುವ ಮಹಿಳೆಯರ ಸರ ಕಿತ್ತುಕೊಂಡು ಪರಾರಿಯಾಗುತ್ತಿದ್ದ ಹೊಸಕೋಟೆ ತಾಲೂಕಿನ ಡಿ.ಎಂ. ವೆಂಕಟೇಶ್ (27), ಆಂಜಿನಪ್ಪ (19), ಅಂಜನ್‍ಕುಮಾರ್ (24) ಹಾಗೂ ಭರತ್ (25) ಎಂಬುವರನ್ನು ವೈಟ್‍ಫೀಲ್ಡ್ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ಬೈಕ್‍ನಲ್ಲಿ ಬಂದು ಕೃತ್ಯ ಎಸಗುತ್ತಿದ್ದರು. ಇವರ ಬಂಧನದಿಂದ ಬೆಂಗಳೂರು ನಗರ, ಗ್ರಾಮಾಂತರ ಮತ್ತು ಚಿಕ್ಕಬಳ್ಳಾಪುರದಲ್ಲಿ ನಡೆದಿದ್ದ 6 ಸರಗಳ್ಳತನ, 1 ಸುಲಿಗೆ ಮತ್ತು 1 ಮನೆಗಳ್ಳತನ ಪ್ರಕರಣಗಳು ಬೆಳಕಿಗೆ ಬಂದಿವೆ.

ಕೃತ್ಯಕ್ಕೆ ಬಳಸುತ್ತಿದ್ದ 2 ಬೈಕ್ ಸೇರಿ ರು.7 ಲಕ್ಷ ಮೌಲ್ಯದ ಚಿನ್ನಾಭರಣ ಮತ್ತು ಬೆಳ್ಳಿ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪಿ. ಹರಿಶೇಖರನ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಕಾಡುಗೋಡಿಯಲ್ಲೂ ಕಾರ್ಯಾಚರಣೆ: ತಮಿಳುನಾಡಿನ ಆಂಥೋಣಿರಾಜ್ (26), ಆನೇಕಲ್‍ನ ಮೃತ್ಯುಂಜಯ (25) ಹಾಗೂ ಶಿವಕುಮಾರ್(25) ಎಂಬುವರನ್ನು ಕಾಡುಗೋಡಿ ಪೊಲೀಸರು ಬಂಧಿಸಿದ್ದಾರೆ. ಇವರಿಂದ ರು.20 ಲಕ್ಷ ಮೌಲ್ಯದ ಚಿನ್ನ, ಬೆಳ್ಳಿ ವಸ್ತುಗಳು ಮತ್ತು 2 ಬೈಕ್ ಜಪ್ತಿ ಮಾಡಲಾಗಿದೆ. ಇವರ ಬಂಧನದೊಂದಿಗೆ 6 ಮನೆಗಳವು ಮತ್ತು 2 ಸರಗಳವು ಪ್ರಕರಣಗಳು ಪತ್ತೆಯಾಗಿವೆ.

SCROLL FOR NEXT