ಸಾಂದರ್ಭಿಕ ಚಿತ್ರ 
ಜಿಲ್ಲಾ ಸುದ್ದಿ

ಕೊಳೆಗೇರಿ ನಿವಾಸಿಗಳ ಧರಣಿ

ಸಮಾರಂಭದಲ್ಲಿ ವಿತರಿಸಿದ್ದ ಸ್ವಾಧೀನ ಪತ್ರಗಳನ್ನು ವಾಪಸ್ ಕಸಿದುಕೊಂಡಿರುವುದನ್ನು ವಿರೋಧಿಸಿ ಕುವೆಂಪುನಗರ ಕೊಳೆಗೇರಿ ನಿವಾಸಿಗಳು ಸೋಮವಾರ ಸ್ಲಂ ಬೋರ್ಡ್ ಕಚೇರಿ ಎದುರು ಧರಣಿ ನಡೆಸಿದರು...

ಬೆಂಗಳೂರು: ಸಮಾರಂಭದಲ್ಲಿ ವಿತರಿಸಿದ್ದ ಸ್ವಾಧೀನ ಪತ್ರಗಳನ್ನು ವಾಪಸ್ ಕಸಿದುಕೊಂಡಿರುವುದನ್ನು ವಿರೋಧಿಸಿ ಕುವೆಂಪುನಗರ ಕೊಳೆಗೇರಿ ನಿವಾಸಿಗಳು ಸೋಮವಾರ ಸ್ಲಂ ಬೋರ್ಡ್ ಕಚೇರಿ ಎದುರು ಧರಣಿ ನಡೆಸಿದರು.

ಕುವೆಂಪುನಗರ ವಾರ್ಡ್‍ನ ಪಾಲಿಕೆ ಸದಸ್ಯೆ ಕೆ.ಆರ್.ಯಶೋದಮ್ಮ ನೇತೃತ್ವದಲ್ಲಿ ಮಂಡಳಿ ಕಚೇರಿ ಬಳಿ ಜಮಾಯಿಸಿದ ನಿವಾಸಿಗಳು ದಿನವಿಡೀ ಪ್ರತಿಭಟನೆ ನಡೆಸಿ ಸ್ವಾಧೀನ ಪತ್ರಕ್ಕಾಗಿ ಆಗ್ರಹಿಸಿದರು. ಸರ್ಕಾರ ಹಾಗೂ ಮಂಡಳಿ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾಕಾರರು ಸ್ವಾಧೀನ ಪತ್ರ ವಿತರಿಸುವವರೆಗೂ ಧರಣಿ ಕೈ ಬಿಡುವುದಿಲ್ಲ ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಯಶೋದಮ್ಮ, ಹೊಸಬಾಳುನಗರದ ಸ್ಲಂನಲ್ಲಿ ವಾಸಿಸುತ್ತಿದ್ದ ನಿವಾಸಿಗಳಿಗೆ ಮಂಡಳಿ ತೀರ್ಮಾನದಂತೆ ಹಾಗೂ ವಸತಿ ಸಚಿವ ಅಂಬರೀಷ್ ಅವರ ಸಮ್ಮತಿಯಂತೆ ಅಧಿಕಾರಿಗಳು ದೊಡ್ಡ ಸಮಾರಂಭ ಮಾಡಿ ಸ್ವಾಧೀನ ಪತ್ರ ವಿತರಿಸಿದ್ದರು. ಆದರೆ ಸಮಾರಂಭದಲ್ಲಿ ಸಚಿವ ಕೃಷ್ಣಭೈರೇಗೌಡ ಇರಲಿಲ್ಲ. ಆದ್ದರಿಂದ ಮತ್ತೆ ಸಚಿವರಿಂದಲೇ ಸ್ವಾಧೀನ ಪತ್ರ ವಿತರಿಸಲಾಗುತ್ತದೆ ಎಂದು ನೀಡಿದ್ದ ಪತ್ರಗಳನ್ನು ನಿವಾಸಿಗಳಿಂದ ವಾಪಸ್ ಪಡೆಯಲಾಯಿತು. ಆದರೆ ವರ್ಷವೇ ಸಮೀಪಿಸುತ್ತಿದ್ದರೂ ಮಂಡಳಿ ಅಧಿಕಾರಿಗಳು ಮಾತ್ರ ಇನ್ನೂ ಸ್ವಾಧೀನ ಪತ್ರ ನೀಡದೆ ವಂಚಿಸುತ್ತಿದ್ದಾರೆ ಎಂದು ದೂರಿದರು.

ಐದು ಎಕರೆ ಪ್ರದೇಶದಲ್ಲಿ ಈ ಸ್ಲಂ ವ್ಯಾಪಿಸಿದ್ದು, ಮಂಡಳಿ ಅಧಿಕಾರಿಗಳು ರಾಜೀವ್ ಆವಾಸ್ ಯೋಜನೆ ಪ್ರಕಾರ 666 ಮನೆಗಳನ್ನು ನಿರ್ಮಿಸಿಕೊಡುವುದಾಗಿ ಹೇಳಿ ಇನ್ನೂ ಕಾಮಗಾರಿಯನ್ನೇ ಆರಂಭಿಸಿಲ್ಲ. ಆದರೆ ಅಧಿಕಾರಿಗಳು ನಿವಾಸಿಗಳನ್ನು ಒಕ್ಕಲೆಬ್ಬಿಸಿದ್ದಾರೆ ಎಂದು ಯಶೋದಮ್ಮ ಆರೋಪಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Asian Games 2026: ಫೈನಲ್ ನಲ್ಲಿ ಪಾಕಿಸ್ತಾನ ವಿರುದ್ಧ ಭಾರತಕ್ಕೆ ರೋಚಕ ಜಯ, ಮತ್ತೊಂದು ಚಿನ್ನದ ಪದಕ

Asian Games 2026: ಇತಿಹಾಸ ಬರೆದ ಮೈಸೂರಿನ ಪ್ರಣವಿ ಅರಸ್; ಚಿನ್ನ ಗೆದ್ದ ಮೊದಲ ಭಾರತೀಯ ಮಹಿಳಾ ಗಾಲ್ಫರ್

ನೈಟ್ ಶಿಫ್ಟ್ ಮುಗಿಸಿ ಮನೆಗೆ ಮರಳುವಷ್ಟರಲ್ಲಿ ಎದುರಾಯ್ತು ಸಾವು: ತಿರುಪತಿಯ ಫಾರ್ಮಾ ಘಟಕದಲ್ಲಿ ಸಿಡಿದ ಬಾಯ್ಲರ್, ಐವರು ಕಾರ್ಮಿಕರು ಸಾವು!

CNG ರೀಫಿಲ್ ವೇಳೆ ಭೀಕರ ಸ್ಫೋಟ; NH-48ರಲ್ಲಿ ಭಯಾನಕ ಘಟನೆ, ಬದುಕಿದ್ದೇ ಅಚ್ಚರಿ! Video

ಏಷ್ಯನ್ ಗೇಮ್ಸ್ 2026 ಫೈನಲ್: ವೈಭವ್ ಸೂರ್ಯವಂಶಿ ಅಣಕಿಸಿದ ಪಾಕ್ ಸ್ಟಾರ್ ಆಟಗಾರ! ಏನು ಮಾಡಿದ್ರು ಗೊತ್ತಾ? Video