ಸಚಿವೆ ಉಮಾಶ್ರೀ 
ಜಿಲ್ಲಾ ಸುದ್ದಿ

ಉಮಾಶ್ರೀ ಪತ್ರಪ್ರಮಾದ!

ಹಿರಿಯ ಚಲನಚಿತ್ರ ನಿರ್ದೇಶಕ ಸಿದ್ದಲಿಂಗಯ್ಯ ಅವರು ನಿಧನರಾಗುತ್ತಾರೆ ಎಂಬುದು ನಟಿ ಕಂ ಸಚಿವೆ ಉಮಾಶ್ರೀ ಅವರಿಗೆ ಒಂದು ದಿನ ಮುನ್ನ ಅಂದರೆ ಬುಧವಾರವೇ ಗೊತ್ತಿತ್ತಂತೆ!...

ಬೆಂಗಳೂರು: ಹಿರಿಯ ಚಲನಚಿತ್ರ ನಿರ್ದೇಶಕ ಸಿದ್ದಲಿಂಗಯ್ಯ ಅವರು ನಿಧನರಾಗುತ್ತಾರೆ ಎಂಬುದು ನಟಿ ಕಂ ಸಚಿವೆ ಉಮಾಶ್ರೀ ಅವರಿಗೆ ಒಂದು ದಿನ ಮುನ್ನ ಅಂದರೆ ಬುಧವಾರವೇ ಗೊತ್ತಿತ್ತಂತೆ!

ಈ `ದಿವ್ಯದೃಷ್ಟಿ' ಎಲ್ಲರ ಅರಿವಿಗೂ ಬರಬಾರದೆಂದು ಶುಕ್ರವಾರದವರೆಗೂ ಕಾದಿದ್ದರಂತೆ. ಅದಕ್ಕೇ ಶುಕ್ರವಾರ ಸಂತಾಪ ಸೂಚಿಸಿದ್ದಾರೆ!! ಹಿರಿಯ ನಿರ್ದೇಶಕ ಸಿದ್ದಲಿಂಗಯ್ಯ ನಿಧನರಾದದ್ದು ಗುರುವಾರ. ಈ ಸುದ್ದಿ ಉಮಾಶ್ರೀ ಗಮನಕ್ಕೆ ಬಂದಿಲ್ಲವೇನೋ!?. ಅಥವಾ `ಅತ್ಯಂತ ಕಾರ್ಯ ಒತ್ತಡ'ದಲ್ಲಿ `ಇಂತಹ' ಮರೆತುಹೋಯಿತೇನೋ. ಅದಕ್ಕೇ `ಬಿಡುವು' ಮಾಡಿಕೊಂಡು ಶುಕ್ರವಾರ ಸಂಜೆ ಶೋಕವ್ಯಕ್ತಪಡಿಸಿದ್ದಾರೆ.

ಒಂದು ದಿನ ತಡವಾಗಿದ್ದಕ್ಕೆ ಸಚಿವೆಯೊಬ್ಬರಿಗೆ ರಾಜ್ಯದ ಆಗುಹೋಗುಗಳ ತಲೆ `ಭಾರ'ವಿನಾಯಿತಿ ಕೊಡಬಹುದೇನೋ. ಆದರೆ, ಅವರು ಶುಕ್ರವಾರ ಕಳುಹಿಸಿರುವ ಶೋಕ ಸಂದೇಶದಲ್ಲಿ ಮಾ.11ರ ದಿನಾಂಕ ನಮೂದಿಸಿದ್ದಾರೆ. ಅಂದರೆ ಸಿದ್ದಲಿಂಗಯ್ಯ ಅವರು ನಿಧನರಾಗುವ ಮುನ್ನವೇ ಶೋಕ ಸಂದೇಶವನ್ನು ಹಿರಿಯ ನಟಿಯೂ ಆದ ಸಚಿವೆ ಉಮಾಶ್ರೀ ಅವರು ತಯಾರು ಮಾಡಿದ್ದಾರೆ. ಆದರೆ, ತಮ್ಮ ಈ `ಭವಿಷ್ಯವಾಣಿ'ಯ ಖದರ್ ಎಲ್ಲರ ಅರಿವಿಗೂ ಬಾರದಿರಲಿ ಎಂದೋ ಏನೋ ಶುಕ್ರವಾರ ಸಂಜೆ ಈ ಶೋಕ ಸಂದೇಶವನ್ನು ಎಲ್ಲ ಮಾಧ್ಯಮಗಳಿಗೂ ಕಳುಹಿಸಿದ್ದಾರೆ. ಪ್ರಜ್ಞಾವಂತೆಯಿಂದ ಇಂಥ ಪ್ರಮಾದವೇ?.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನ್ಯಾಯಾಂಗ ಭ್ರಷ್ಟಾಚಾರದ ಪಾಠ: ಕೇಂದ್ರ ಕ್ಷಮೆಯಾಚಿಸುತ್ತಿದ್ದಂತೆ NCERT ಪಠ್ಯ ಪುಸ್ತಕ ಬ್ಯಾನ್, ಪ್ರತಿಗಳನ್ನು ವಶಕ್ಕೆ ಪಡೆಯಲು ಸುಪ್ರೀಂ ಸೂಚನೆ

'ನಿಮ್ಮ ಭಾಷಣ ನಾಚಿಕೆಯಿಲ್ಲದೆ ಸಮರ್ಥನೆ ಮಾಡಿಕೊಂಡಂತೆ ಇತ್ತು': 1947ರ ಐನ್ ಸ್ಟೈನ್ ನೆಹರೂಗೆ ಬರೆದ ಪತ್ರ ಉಲ್ಲೇಖಿಸಿ Modi ಟೀಕಿಸಿದ ಕಾಂಗ್ರೆಸ್

ರಿಯಲ್ ಲೈಫ್‌ನಲ್ಲೂ ಒಂದಾದ ರೀಲ್ ಜೋಡಿ: ತೆಲುಗು ಸಂಪ್ರದಾಯದಂತೆ ರಶ್ಮಿಕಾ–ವಿಜಯ್ ವಿವಾಹ, ಸಂಜೆ ಕೊಡವ ಸಂಪ್ರದಾಯದಲ್ಲಿ ಮತ್ತೊಂದು ಸಮಾರಂಭ

ಅಮ್ಮಾ....ಐ ಲವ್ ಯೂ ಸೋ ಮಚ್: ಕುವೈತ್ ನಲ್ಲಿದ್ದ ತಾಯಿಗೆ ಕೊನೆಯ ಸಂದೇಶ ಕಳಿಸಿ ಯೂಟ್ಯೂಬರ್ ಆತ್ಮಹತ್ಯೆ

ಇನ್ನೂ ನನಸಾಗಿಲ್ಲ ದಶಕಗಳ ಕನಸು: ಹಾಸನ ವಿಮಾನ ನಿಲ್ದಾಣಕ್ಕೆ ಸಿಗದ ರೆಕ್ಕೆ, ಯೋಜನೆಗೆ ಅಡ್ಡಿಯಾಗಿದೆ ಸಂಪನ್ಮೂಲ-ರಾಜಕೀಯ ಇಚ್ಛಾಶಕ್ತಿ ಕೊರತೆ..!

SCROLL FOR NEXT