ಭ್ರಷ್ಟರಿಗೆ ಸಿಂಹ ಸ್ವಪ್ನರಾದ ಪ್ರಾಮಾಣಿಕ ಅಧಿಕಾರಿಗಳ ಪೈಕಿ ಕೆಲವರಿಗೆ ಸಾವಾದರೆ, ನಮ್ಮ ರಾಜ್ಯದಲ್ಲಿ ಸಿಕ್ಕಿದ್ದು ವರ್ಗಾವಣೆಯ ಉಡುಗೊರೆ. ಕಳೆದ ಕೆಲ ದಿನಗಳಿಂದ ರಾಜ್ಯದಲ್ಲಿ ಪ್ರಾಮಾಣಿಕ ಅಧಿಕಾರಿಗಳಿಗೆ ಸರ್ಕಾರ ನೀಡುವ ಗೌರವ. ಲೋಕಾಯುಕ್ತ ಎಸ್ಪಿ ಡಾ. ಮಹೇಶ್ ಅವರ ರಾತ್ರೋರಾತ್ರಿ ವರ್ಗಾವಣೆ ಪ್ರಕರಣವೂ ಇದಲ್ಲಿ ಒಂದು. ಆಡಳಿತ ವಕ್ಷದ ಶಾಸಕರ ಅವ್ಯವಹಾರ ಬಯಲುಗೊಳಿಸಲು ಮುಂದಾದ ಕಾರಣಕ್ಕೆ ಸರ್ಕಾರ ಈ ಕ್ರಮ ತೆಗೆದುಕೊಂಡಿತ್ತು.
ರಾಜರಾಜೇಶ್ವರಿ ನಗರ ಶಾಸಕ ಮುನಿರತ್ನ ಅವರಿಗೆ ಸೇರಿದ ಮನೆಯಲ್ಲಿ ಬಿಬಿಎಂಪಿ ಕಡತ ವಿಲೇವಾರಿಯಾಗುತ್ತಿದೆ ಎಂದು ಸಾರ್ವಜನಿಕರ ನೀಡಿದ ದೂರಿನ ಆಧಾರದ ಮೇಲೆ ಹಠಾತ್ ದಾಳಿ ನಡೆಸಿದ ಡಾ ಮಹೇಶ್ ಕಾನೂನು ಬಾಹಿರವಾಗಿ 700 ಕ್ಕೂ ಹೆಚ್ಚು ಕಡತಗಳನ್ನು ಅವ್ವಿ ವಿಲೇವಾರಿ ಮಾಡುತ್ತಿರುವುದನ್ನು ಪತ್ತೆ ಮಾಡಿದ್ದರು.. ಮಾತ್ರವಲ್ಲ ತನಿಖೆಯನ್ನು ಬಿಗಿಗೊಳಿಸಿದ್ದರು. ಕರ್ತವ್ಯದ ಆರಂಭ ಕಾಲದಿಂದಲೂ ವೈಜ್ಞಾನಿಕ ತನಿಖೆಗೆ ಹೆಸರಾಗಿದ್ದ ಮಹೇಶ್ ಇಲ್ಲೂ ಅದೇ ರೀತಿ ವರ್ತಿಸಿದರು. ಉನ್ನತ ಅಧಿಕಾರಿಗಳ ಒತ್ತಡಕ್ಕೂ ಅವರು ಮಣಿದಿರಲಿಲ್ಲ. ಆರೋಪಕ್ಕೆ ಗುರಿಯಾಗಿದ್ದ ಶಾಸಕರು ಸರ್ಕಾರದ ಮೇಲೆ ಒತ್ತಡ ಹೇರಿ ಮಹೇಶ್ ವರ್ಗಾವಣೆಯಾಗವಂತೆ ಮಾಡಿದ್ದರು. ಖುದ್ದು ಲೋಕಾಯುಕ್ತ ನ್ಯಾ.ವೈ.ಭಾಸ್ಕರ್ ರಾವ್ ಅವರೂ ಸರ್ಕಾರದ ವಿರುದಟಛಿ ಈ ವಿಚಾರದಲ್ಲಿ ಭಿನ್ನಾಭಿಪ್ರಾಯ ತಾಳಿದ್ದರು.
ಮಹೇಶ್‍ರನ್ನು ಲೋಕಾಯುಕ್ತದಲ್ಲೇ ಮುಂದುವರಿಸಿದ್ದರು. ಆದರೆ ಇದ್ಯಾವುದಕ್ಕೂ ಸೊಪ್ಪು ಹಾಕದ ಸರ್ಕಾರ ತನ್ನ ಆದೇಶವನ್ನು ವಾಪಸ್ ಪಡೆದಿರಲಿಲ್ಲ. ಮಹೇಶ್‍ರನ್ನು
ಆಂತರಿಕ ಭದ್ರತೆ ವಿಭಾಗಕ್ಕೆ ವರ್ಗಾವಣೆ ಮಾಡಿದ್ದರು. ಅಲ್ಲಿಗೆ ಮಹೇಶ್ ದಾಳಿ ನಡೆಸಿದ ಪ್ರಕರಣದ ತನಿಖೆ ಕೈಗೆತ್ತಿಕೊಳ್ಳುವ ಹೊಸ ಅಧಿಕಾರಿಗೆ ಆದಾಗಲೇ ಒಂದು
ಮುನ್ಸೂಚನೆ ದೊರೆತಿರುತ್ತದೆ. ಆಗ ಆತನಿಂದ ದಕ್ಷ ತನಿಖೆ ನಿರೀಕ್ಷಿಸಲು ಸಾಧ್ಯವೇ?