ವೇದಿಕೆಯಲ್ಲಿ ಜಿಲ್ಲಾ ಸಾಹಿತ್ಯ ಸಮ್ಮೇಳನಾಧ್ಯಕ್ಷ ಡಾ. ಜಿ.ರಾಮಕೃಷ್ಣ 
ಜಿಲ್ಲಾ ಸುದ್ದಿ

ಕನ್ನಡ ಹೆಸರಲ್ಲಿ ಆಂಗ್ಲ ಶಿಕ್ಷಣ ನೀಡೋರನ್ನು ಜೈಲಿಗೆ ಅಟ್ಟಿ

ಕನ್ನಡ ಮಾಧ್ಯಮದ ಹೆಸರಲ್ಲಿ ಪರವಾನಿಗೆ ಪಡೆದು ಆಂಗ್ಲ ಮಾಧ್ಯಮದಲ್ಲಿ ಶಾಲೆ ನಡೆಸುವವರನ್ನು ಜೈಲಿಗೆ ಅಟ್ಟಿ. - ಇದು ನಗರ ಜಿಲ್ಲಾ ಸಾಹಿತ್ಯ ಸಮ್ಮೇಳನಾಧ್ಯಕ್ಷ...

ಬೆಂಗಳೂರು: ಕನ್ನಡ ಮಾಧ್ಯಮದ ಹೆಸರಲ್ಲಿ ಪರವಾನಿಗೆ ಪಡೆದು ಆಂಗ್ಲ ಮಾಧ್ಯಮದಲ್ಲಿ ಶಾಲೆ ನಡೆಸುವವರನ್ನು ಜೈಲಿಗೆ ಅಟ್ಟಿ. - ಇದು ನಗರ ಜಿಲ್ಲಾ ಸಾಹಿತ್ಯ ಸಮ್ಮೇಳನಾಧ್ಯಕ್ಷ ಡಾ. ಜಿ.ರಾಮಕೃಷ್ಣ ಅವರ ಕಟು ನುಡಿ.ರಾಜ್ಯದಲ್ಲಿ 1700ಕ್ಕೂ ಹೆಚ್ಚು ಶಾಲೆಗಳು ಹೀಗೆಅಕ್ರಮವಾಗಿ ನಡೆಯುತ್ತಿವೆ. ಇದು ಅಪರಾಧ. ಈ ಬಗ್ಗೆ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಗರದ ಚೌಡಯ್ಯ ಸ್ಮಾರಕ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ 6ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಆಗ್ರಹಿಸಿದರು.ದೇಶದ ಎಲ್ಲ ಪ್ರಾದೇಶಿಕ ಭಾಷೆಗಳು ಜೀವಂತ ವಾಗಿರಬೇಕಾದರೆ ಸಂವಿಧಾನಕ್ಕೆ ತಿದ್ದುಪಡಿ ತರಲೇಬೇಕು. ಈ ಕೆಲಸವನ್ನು ನಮ್ಮ ಜನ ಪ್ರತಿನಿಧಿಗಳುಮಾಡಬೇಕು. ಈ ಕೆಲಸಆಗದಿದ್ದರೆ, ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಲಿ. ಈ ಬಗ್ಗೆ ಜನರು ಬೀದಿಗಿಳಿಯುವ ಕಾಲ ಸನ್ನಿಹಿತವಾಗಿದೆ. ಮೇಕೆದಾಟು ಯೋಜನೆ ಜಾರಿ ಬಗ್ಗೆ ರಾಜ್ಯ ಸರ್ಕಾರ ಕೈಗೊಂಡಿರುವ ನಿಲುವು ಸರಿ ಇದೆ. ತಮಿಳುನಾಡುಸರ್ಕಾರದ ಕ್ಯಾತೆ ಎಲ್ಲ ವಿಷಯಕ್ಕೂ ಇದ್ದೇ ಇರುತ್ತದೆ. ತಮಿಳುನಾಡಿಗೆ ಸೇರಬೇಕಾದ ನೀರು ಸೇರಿದೆ. ಆದರೂ ಅಡ್ಡಗಾಲು ಹಾಕುವುದು ಸಮಂಜಸವಲ್ಲ ಎಂದರು. ಕಸಾಪ ಅಧ್ಯಕ್ಷ ಪುಂಡಲೀಕ ಹಾಲಂಬಿ ಮಾತನಾಡಿ, `ಆಡಳಿತಾತ್ಮಕವಾಗಿ ಬಿಬಿಎಂಪಿ ವಿಭಜನೆ ಸೂಕ್ತವಾಗಿದ್ದರೂ, ಭಾಷೆ ವಿಚಾರಕ್ಕೆ ಬಂದರೆ ಇದನ್ನು ಕಸಾಪ ಖಂಡಿಸುತ್ತದೆ. ಇಲ್ಲಿ ಭಾಷಾ ಸಮಸ್ಯೆಯನ್ನು ರಾಜ್ಯ ಸರ್ಕಾರವೇ ಹುಟ್ಟುಹಾಕಿದಂತಾಗುತ್ತದೆ. ಮತ್ತೊಂದು ಬೆಳಗಾವಿಯನ್ನು ಸೃಷ್ಟಿ ಮಾಡಿ ಅಪಾಯ ವನ್ನು ಮೈಮೇಲೆಳೆದುಕೊಂಡಂತಾಗುತ್ತದೆ. ಹೀಗಾಗಿ ಸರ್ಕಾರ ಆಡಳಿತಾತ್ಮಕ ಸುಧಾರ
ಣೆಗೆ ವಿಭಜನೆ ಹಾದಿ ಹಿಡಿಯದೆ ಪೀರ್ಯಾಯ ಮಾರ್ಗವನ್ನು ಅನುಸರಿಸುವುದು ಉತ್ತಮ' ಎಂದು ಅಭಿಪ್ರಾಯಪಟ್ಟರು.


ಕನ್ನಡ ಕಡ್ಡಾಯವಾಗಲಿ: ಸಿಎನ್‍ಆರ್ ರಾವ್
ಇಂದು ಇಂಗ್ಲಿಷ್ ಅನಿವಾರ್ಯತೆ ಇದೆ. ಇದನ್ನು ಭಾಷೆಯಾಗಿ ಕಲಿಯಬೇಕೇ ವಿನಾ ಮಾ ಧ್ಯಮವನ್ನಾಗಲ್ಲ. ಪ್ರೌಢಶಾಲೆವರೆಗೆ ಕನ್ನಡ ಮಾಧ್ಯಮದಲ್ಲೇ ಕಲಿಕೆಯನ್ನು
ಕಡ್ಡಾಯ ಮಾಡಬೇಕು ಎಂದು ಕಾರ್ಯಕ್ರಮ ಉದ್ಘಾಟಿಸಿದ ಭಾರತರತ್ನ ಪುರಸ್ಕೃತ ವಿಜ್ಞಾನಿ  ಸಿಎನ್‍ಆರ್ ರಾವ್ ಅಭಿಪ್ರಾಯಪಟ್ಟರು. ನಾನು ವಿಜ್ಞಾನದಲ್ಲಿ ಇಂದು ಇಷ್ಟು ಸಾಧನೆ ಮಾಡಲು ಕನ್ನಡ ಮಾ ಧ್ಯಮವೇ ಕಾರಣ. ಜೀವನ ನಡೆಸಲು ಕೆಲವು ಕಡೆ ಇಂದು ಇಂಗ್ಲಿಷ್ ಅನಿವಾರ್ಯ ಎಂಬಂತಾಗಿದ್ದರೂ ಅದನ್ನು ಭಾಷೆಯನ್ನಾಗಷ್ಟೇ ನೋಡಬೇಕು. ಉಳಿದಂತೆ ಕನ್ನಡವನ್ನೇ ನೆಚ್ಚಿಕೊಳ್ಳಬೇಕು. ಬೆಂಗಳೂರಿನ ಮಕ್ಕಳಿಗೆ ಇಂಗ್ಲಿಷ್ ವ್ಯಾಮೋಹ ಹೆಚ್ಚಿದೆ. ವಿಜ್ಞಾನದ ಬಗ್ಗೆ ಒಲವಿಲ್ಲ.
ಆದರೆ, ಗ್ರಾಮೀಣ ಮಕ್ಕಳು ಆಸಕ್ತಿಯಿಂದ ವಿಜ್ಞಾನವನ್ನು ಕಲಿಯುತ್ತಾರೆ ಎಂದು ಸಂತಸ ವ್ಯಕ್ತಪಡಿಸಿದರು. ನಾಡೋಜ ವೆಂಕಟ ಸುಬ್ಬಯ್ಯ, ಕನ್ನಡ ಪುಸ್ತಕ ಪ್ರಾ„ಕಾರ ಅಧ್ಯಕ್ಷ ಎಲ್.ಹನುಮಂತಯ್ಯ, ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಡಾ. ಸಿ.ಎನ್. ಅಶ್ವತ್ಥನಾರಾಯಣ, ಕಸಾಪ ನಗರ ಜಿಲ್ಲಾಧ್ಯಕ್ಷ ಟಿ. ತಿಮ್ಮೇಶ್ ಇದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT