ಬೆಂಗಳೂರು: ಬಿಡಿಎ ಅಧಿಕಾರಿಗಳು ಕೆರೆ ಒತ್ತುವರಿ ಮಾಡಿ ಜೆಪಿನಗರ ಡಾಲರ್ಸ್ ಕಾಲೋನಿ ನಿರ್ಮಿಸಿದ್ದು, ಕೂಡಲೇ ಇದನ್ನು ತೆರವುಗೊಳಿಸಬೇಕೆಂದು ಬೊಮ್ಮನಹಳ್ಳಿ ಮಾಜಿ ನಗರಸಭಾ ಸದಸ್ಯ ಸಿ.ಲಕ್ಷ್ಮೀ ನಾರಾಯಣ್ ಆಗ್ರಹಿಸಿದ್ದಾರೆ.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜೆಪಿನಗರದಲ್ಲಿರುವ ಡಾಲಸ್ರ್ ಕಾಲೋನಿಯು ಕೆರೆ ಒತ್ತುವರಿಯಾಗಿದೆ. ಬಿಳೇಕಳ್ಳಿ ಗ್ರಾಮದ ಲಿಂಗಣ್ಣನ ಕೆರೆ ಗ್ರಾಮ 56.37 ಗುಂಟೆ ವಿಸ್ತೀರ್ಣವಿದ್ದು, ಇದನ್ನು ಬಿಡಿಎ ಅಧಿಕಾರಿಗಳು ಯಾವುದೇ ಅನುಮತಿ ಪಡೆಯದೇ ಅಕ್ರಮವಾಗಿ ಲೇಔಟ್ ಮಾಡಿದ್ದಾರೆ.
ಈ ಲೇಔಟ್ ನಲ್ಲಿ ಶ್ರೀಮಂತರ ಇದ್ದಾರೆ. ಕಾಗೋಡು ತಿಮ್ಮಪ್ಪ, ಜಸ್ಟೀಸ್ ಶಿವಪ್ಪ, ಮುಖ್ಯಮಂತ್ರಿ ಚಂದ್ರು, ಸಿಎಂ ಸಿದ್ದರಾಮಯ್ಯ ಸೇರಿದಂತೆ ಅನಕೇ ಶಾಸಕರು, ಸಿನಿಮಾ ನಟರು, ಉದ್ಯಮಿಗಳು ನಿವೇಶನವನ್ನು ಹೊಂದಿದ್ದಾರೆ.
ಸಾರಕ್ಕಿ ಕೆರೆ ಒತ್ತುವರಿಯನ್ನು ಇತ್ತೀಚೆಗಷ್ಟೇ ತೆರವುಗೊಳಿಸಲಾಯಿತು. ಸಾರಕ್ಕಿ ಕೆರೆಯಿಂದ ಎರಡು ಕಿ.ಮೀ ದೂರದಲ್ಲಿರುವ ಡಾಲರ್ಸ್ ಕಾಲೋನಿಯು ಕೆರೆ ಒತ್ತುವರಿಯಾಗಿದೆ. ಸಾರಿಕ್ಕಿ ಕೆರೆ ಒತ್ತುವರಿ ತೆರವುಗೊಳಿಸಿದಂತೆ ಡಾಲರ್ಸ್ ಕಾಲೋನಿ ತೆರವುಗೊಳಿಸದೇ, ಸರ್ಕಾರ ಸಕ್ರಮಗೊಳಿಸಲು ಮುಂದಾಗಿದೆ. ಬಡವರಿಗೇ ಒಂದು ನ್ಯಾಯ, ಶ್ರೀಮಂತರಿಗೆ ಒಂದು ನ್ಯಾಯ ಎಂಬ ಧೋರಣೆ ಅನುಸರಿಸುತ್ತಿದೆ.
ನ್ಯಾಯಾ ಎಲ್ಲರಿಗೂ ಒಂದೇ ಆಗಿದ್ದು, ಬೆಂಗಳೂರು ನಗರ ಜಿಲ್ಲಾಧಿಕಾರಿಗಳು ಕೂಡಲೇ ಲಿಂಗಣ್ಣನ ಕೆರೆಯಲ್ಲಿ ಕಟ್ಟಿರುವ ಅಕ್ರಮ ಕಟ್ಟಡಗಳನ್ನು ನೆಲಸಮಗೊಳಿಸಿ, ಸರ್ಕಾರ ತಮ್ಮ ಜಾಗವನ್ನು ವಶಕ್ಕೆ ತೆಗೆದುಕೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.