ಜಿಲ್ಲಾ ಸುದ್ದಿ

ವಸತಿ ಪ್ರದೇಶದಲ್ಲಿ ವಾಣಿಜ್ಯ ಚಟುವಟಿಕೆಗೆ ಅನುಮತಿ ಬೇಡ: ವಿಜಯ್ ಭಾಸ್ಕರ್

ಬೆಂಗಳೂರು: ವಸತಿ ಪ್ರದೇಶದಲ್ಲಿ ಅಕ್ರಮವಾಗಿ ವಾಣಿಜ್ಯ ಚಟುವಟಿಕೆ ಅನುಮತಿ ನೀಡಿದವರ ವಿರುದ್ಧ ತನಿಖೆಗೆ ಆದೇಶ ನೀಡುವಂತೆ ಕೋರಿ ನಮ್ಮ ಬೆಂಗಳೂರು ಪ್ರತಿಷ್ಠಾನ ಮತ್ತು ಬೆಂಗಳೂರು ನಿವಾಸಿಗಳ ಸಂಘದ ಒಕ್ಕೂಟ ಬಿಬಿಎಂಪಿ ಆಡಳಿತಾಧಿಕಾರಿ ವಿಜಯ್ ಭಾಸ್ಕರ್ ಅವರಿಗೆ ಮನವಿ ಸಲ್ಲಿಸಿದೆ.

ವಸತಿ ಪ್ರದೇಶದಲ್ಲಿ ವಾಣಿಜ್ಯ ಚಟುವಟಿಕೆಗೆ ಅವಕಾಶ ನೀಡದಂತೆ ಹೈಕೋರ್ಟ್ ಮಧ್ಯಂತರ ಆದೇಶ ಹೊರಡಿಸಿದ್ದರೂ ಸಹ ಅಧಿಕಾರಿಗಳು ವಾಣಿಜ್ಯ ಚಟುವಟಿಕೆಗೆ ಅವಕಾಶ ಕಲ್ಪಿಸಿದ್ದಾರೆ. . ರಸ್ತೆಯ ವಿಸ್ತೀರ್ಣ 40 ಅಡಿಗೂ ಕಡಿಮೆ ಇದ್ದರೆ ವಸತಿ ಪ್ರದೇಶದ ವಲಯ     1,2 ಮತ್ತು 3 ರಲ್ಲಿ  ವಾಣಿಜ್ಯ ಚಟುವಟಿಕೆಗೆ ಅವಕಾಶ ನೀಡುವುದಿಲ್ಲ ಎಂದು ಸರ್ಕಾರ ಹೈಕೋರ್ಟ್‍ಗೆ ಮಾಹಿತಿ ನೀಡಿದೆ.

ಅದರಂತೆ ಈ ಹಿಂದೆ ವಾಣಿಜ್ಯ ಚಟುವಟಿಕೆಗೆ ಅವಕಾಶ ಕಲ್ಪಿಸಿದ್ದೇ ಅದರಲ್ಲಿ ಅದನ್ನು ರದ್ದುಪಡಿಸುವುದಾಗಿಯೂ ಸರ್ಕಾರ ಹೈಕೋರ್ಟ್‍ಗೆ ಹೇಳಿಕೆ ನೀಡಿತ್ತು. ಹೀಗಿದ್ದರೂ ಅಧಿಕಾರಿಗಳು ವಾಣಿಜ್ಯ ಚಟುವಟಿಕೆಗೆ ಅವಕಾಶ ನೀಡಿ ಕಾನೂನು ಉಲ್ಲಂಘಿಸಿದ್ದಾರೆ. ಕಾನೂನು ಮೀರಿ ಅಧಿಕಾರ ದುರುಪಯೋಗ ಪಡಿಸಿಕೊಂಡಿರುವ ಅಧಿಕಾರಿಗಳ ವಿರುದ್ಧ ತನಿಖೆಗೆ ಆದೇಶಿಸಬೇಕೆಂದು ಪಾಲಿಕೆ ಆಡಳಿತಾಧಿಕಾರಿಗೆ ನಮ್ಮ ಬೆಂಗಳೂರು ಪ್ರತಿಷ್ಠಾನ ಮನವಿ ಮಾಡಿದೆ.

SCROLL FOR NEXT