ಕಬ್ಬನ್ ಪಾರ್ಕ್ 
ಜಿಲ್ಲಾ ಸುದ್ದಿ

ಪ್ರತಿ ಭಾನುವಾರ ಕಬ್ಬನ್ ಪಾರ್ಕ್ ನಲ್ಲಿ ವಾಹನಗಳ ಸಂಚಾರ ನಿಷೇಧ

ಭಾನುವಾರ ಹೆಚ್ಚಿನ ಸಂಖ್ಯೆಯಲ್ಲಿ ಬರುವ ಪ್ರವಾಸಿಗರ ಅನುಕೂಲಕ್ಕಾಗಿ ಭಾನುವಾರದಂದು ಕಬ್ಬನ್ ಪಾರ್ಕ್ ಒಳಗೆ ವಾಹನಗಳ ಸಂಚಾರವನ್ನು ಸಂಪೂರ್ಣ ನಿಷೇಧಿಸಲಾಗುತ್ತದೆ.

ಬೆಂಗಳೂರು: ಭಾನುವಾರ ಹೆಚ್ಚಿನ ಸಂಖ್ಯೆಯಲ್ಲಿ ಬರುವ ಪ್ರವಾಸಿಗರ ಅನುಕೂಲಕ್ಕಾಗಿ ಭಾನುವಾರದಂದು ಕಬ್ಬನ್ ಪಾರ್ಕ್ ಒಳಗೆ ವಾಹನಗಳ ಸಂಚಾರವನ್ನು ಸಂಪೂರ್ಣ ನಿಷೇಧಿಸಲಾಗುತ್ತದೆ. ಬೆಳಿಗ್ಗೆ 8 ರಿಂದ ರಾತ್ರಿ 10 ವರೆಗೆ ಪಾರ್ಕ್ ಒಳಗೆ ವಾಹನ ಸಂಚಾರಕ್ಕೆ ನಿರ್ಬಂಧವಿರಲಿದೆ.

ಈ ನಿಷೇಧ ಇದೇ ಭಾನುವಾರದಿಂದ ಜಾರಿಗೆ ಬರಲಿದೆ. ರಜೆ ದಿನಂದು ಕಬ್ಬನ್ ಪಾರ್ಕ್ ಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಪ್ರವಾಸಿಗರಿಗೆ ಅನುಕೂಲ ಮಾಡಿಕೊಡುವುದರ ಜೊತೆಗೆ ಶಬ್ದಮಾಲಿನ್ಯ, ವಾಯುಮಾಲಿನ್ಯ ತಡೆಗಟ್ಟುವುದು ಸಹ ಭಾನುವಾರದಂದು ಕಬ್ಬನ್ ಪಾರ್ಕ್ ಒಳಗೆ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸುವುದರ ಹಿಂದಿರುವ ಉದ್ದೇಶವಾಗಿದೆ.

ಇದೇ ಭಾನುವಾರದಿಂದ ವಾಹನಗಳ ಸಂಪೂರ್ಣ ನಿಷೇಧ ಹಿನ್ನೆಲೆಯಲ್ಲಿ ಈ ಮಾರ್ಗದಲ್ಲಿ ಸಂಚರಿಸುವ  ವಾಹನ ಸವಾರರು ಪರ್ಯಾಯ ಮಾರ್ಗದಲ್ಲಿ ಸಂಚರಿಸುವಂತೆ ಪೊಲೀಸರು ಕೋರಿದ್ದಾರೆ. ಅಲ್ಲದೇ ಕಬ್ಬನ್ ಉದ್ಯಾನ ಹಾಗೂ ವಿಶ್ವೇಶ್ವರಯ್ಯ ಮ್ಯೂಸಿಯಂ ಗೆ ಬರುವವರಿಗೆ ವಾಹನಗಳ ನಿಲುಗಡೆಗೆ ಪರ್ಯಾಯ ಅವಕಾಶ ಕಲ್ಪಿಸಲಾಗಿದೆ.

ಕಬ್ಬನ್ ಪಾರ್ಕ್ ಗೆ ದ್ವಿಚಕ್ರ ಮತ್ತು ನಾಲ್ಕು ಚಕ್ರ ವಾಹನಗಳಲ್ಲಿ ಬರುವವರಿಗೆ ಕಿಂಗ್ಸ್ ರಸ್ತೆ, ಬಾಲಭವನ ರಸ್ತೆ ಜಂಕ್ಷನ್ ನಿಂದ ಕಿಂಗ್ ಎಡ್ವರ್ಡ್ ಪ್ರತಿಮೆವರೆಗೆ ರಸ್ತೆಯ ಪೂರ್ವಭಾಗದಲ್ಲಿ ಪಾರ್ಕಿಂಗ್ ವ್ಯವಸ್ಥೆಯಿದೆ.

 ಪರ್ಯಾಯ ಮಾರ್ಗ

ಕಬ್ಬನ್ ಪಾರ್ಕ್ ಒಳಭಾಗದ ರಸ್ತೆಯಲ್ಲಿ, ಕ್ವೀನ್ಸ್ ವೃತ್ತದಿಂದ ಕೆ.ಆರ್ ವೃತ್ತದ ಕಡೆ ಮತ್ತು ವಿಧಾನಸೌಧ ಕಡೆ ಹೋಗುವ ವಾಹನಗಳ ಸಂಚಾರವನ್ನು ಕ್ವೀನ್ಸ್ ವೃತ್ತದಲ್ಲಿ ನಿರ್ಬಂಧಿಸಲಾಗಿದೆ. ಬದಲಿಗೆ ಸಿಟಿಒ ವೃತ್ತ, ಪೊಲೀಸ್ ತಿಮ್ಮಯ್ಯ ವೃತ್ತದಲ್ಲಿ ಎಡ ತಿರುವು ಪಡೆದು ಡಾ.ಅಂಬೇಡ್ಕರ್ ರಸ್ತೆ ಮಾರ್ಗವಾಗಿ ಚಲಿಸಬಹುದಾಗಿದೆ.

ಯುಬಿ ಸಿಟಿ ಕಡೆಯಿಂದ ಬಂದು ಸಿದ್ದಲಿಂಗಯ್ಯ ವೃತ್ತದ ಮೂಲಕ ಕಬ್ಬನ್ ಪಾರ್ಕ್ ಪ್ರವೇಶಿಸುವ ವಾಹನ ಸಂಚಾರವನ್ನು ಸಿದ್ದಲಿಂಗಯ್ಯ ವೃತ್ತದಲ್ಲಿ ನಿಷೇಧಿಸಲಾಗಿದೆ. ಈ ಮಾರ್ಗದಲ್ಲಿ ಪ್ರಯಾಣಿಸುವವರು ಕಸ್ತೂರ್ಬಾ  ರಸ್ತೆ, ಕ್ವೀನ್ಸ್ ವೃತ್ತ, ಸಿಟಿಒ ವೃತ್ತ, ಪೊಲೀಸ್ ತಿಮ್ಮಯ್ಯ ವೃತ್ತದಲ್ಲಿ ಎಡ ತಿರುವು ಪಡೆದು ಡಾ.ಅಂಬೇಡ್ಕರ್ ರಸ್ತೆ ಮಾರ್ಗವಾಗಿ ಚಲಿಸಬಹುದಾಗಿದೆ.

ಕೆ.ಆರ್ ವೃತ್ತದಿಂದ ಉದ್ಯಾನ ಮೂಲಕ ಸಿದ್ದಲಿಂಗಯ್ಯ ವೃತ್ತದ ಕಡೆಗೆ ಸಂಚರಿಸುವ ವಾಹನಗಳನ್ನು ಕೆ.ಆರ್ ವೃತ್ತದಲ್ಲಿ ನಿರ್ಬಂಧಿಸಲಾಗಿದೆ. ಬದಲಿಗೆ ನೃಉಪತುಂಗಾ ರಸ್ತೆ, ಪೊಲೀಸ್ ಕಾರ್ನರ್, ಕಸ್ತೂರ್ಬಾ ರಸ್ತೆ ಮೂಲಕ ಸಿದ್ದಲಿಂಗಯ್ಯ ವೃತ್ತದ ಕಡೆಗೆ ಅಥವಾ ಡಾ.ಅಂಬೇಡ್ಕರ್ ರಸ್ತೆ, ಪೊಲೀಸ್ ತಿಮ್ಮಯ್ಯ ವೃತ್ತ, ಕಾಫೀ ಬೋರ್ಡ್, ಬಾಳೇಕುಂದ್ರಿ ವೃತ್ತ, ಕ್ವೀನ್ಸ್ ರಸ್ತೆ ಮೂಲಕ ಸಿದ್ದಲಿಂಗತ್ತ ವೃತ್ತದ ಕಡೆ ಚಲಿಸಬಹುದಾಗಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಭಾರತಕ್ಕೆ ಬರುತ್ತಿದ್ದ ಸರಕು ಹಡಗಿನ ಮೇಲೆ ದಾಳಿ- ಹೊಣೆ ಹೊತ್ತ ಇರಾನ್; ಭಾರತದ ಪ್ರತಿಕ್ರಿಯೆ ಏನು?

ತೈಲ ಪೂರೈಕೆಗೆ ರಿಯಾಯಿತಿ ಸ್ಥಗಿತ ಬೆನ್ನಲ್ಲೇ ಎಚ್ಚೆತ್ತ ಭಾರತ; ರಷ್ಯಾ ವಿದೇಶಾಂಗ ಸಚಿವರಿಗೆ ಜೈಶಂಕರ್ ದೂರವಾಣಿ ಕರೆ; ಮಹತ್ವದ ಚರ್ಚೆ!

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ ಸೋಲು; ಪ್ರತಿಪಕ್ಷಗಳಿಗೆ ಮುಖಭಂಗ

IPL 2026: ಬೆಂಗಳೂರಿನ ಚಿನ್ನಸ್ವಾಮಿಯಲ್ಲಿ ಉದ್ಘಾಟನಾ ಪಂದ್ಯ; ಮಾರ್ಚ್ 28 ರಂದು RCB vs SRH

'ರಕ್ಷಿತ್ ಶೆಟ್ಟಿ-ರಶ್ಮಿಕಾ ನಿಶ್ಚಿತಾರ್ಥ ಮುರಿದುಬೀಳಲು ಇದೇ ಕಾರಣ': ತಾಯಿ ಸುಮನ್ ಮಂದಣ್ಣರದ್ದು ಎನ್ನಲಾದ ಆಡಿಯೋ ವೈರಲ್!

SCROLL FOR NEXT