ಜಿಲ್ಲಾ ಸುದ್ದಿ

ಬುದ್ಧಿಜೀವಿಗಳ ಹೇಳಿಕೆಗಳೇ ಅಸಹಿಷ್ಣುತೆ ಹೆಚ್ಚಲು ಕಾರಣ:ಪೇಜಾವರ ಶ್ರೀ

Shilpa D

ಕಲಬುರಗಿ:ಬುದ್ದಿಜೀವಿಗಳು ವಿನಾಕಾರಣ ಹಾಗೂ ಆಧಾರ ರಹಿತವಾಗಿ ಹೇಳಿಕೆ ನೀಡುತ್ತಿರುವುದರಿಂದ ಅಸಹಿಷ್ಣುತೆ ಹೆಚ್ಚುತ್ತಿದೆ. ಮೊದಲು ಬುದ್ಧಿಜೀವಿಗಳು ಇಂತಹ ಹೇಳಿಕೆ ನೀಡಬಾರದು ಎಂದು  ಉಡುಪಿ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದರು.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದೂ ದೇವರ ಬಗ್ಗೆ ಸಲ್ಲದ ಹೇಳಿಕೆ ನೀಡುವುದು, ಗೋಮಾಂಸ ವಿಚಾರದಲ್ಲಿ ಅನವಶ್ಯಕ ಹೇಳಿಕೆ ಕೊಟ್ಟು ವಿಷಯದ ಚರ್ಚೆ ಆಗುವಂತ  ಮಾಡುವುದನ್ನು ಬುದ್ಧಿಜೀವಿಗಳು ಮಾಡುತ್ತಿದ್ದಾರೆ. ಇವರ ಈ ಧೋರಣೆ ಸಮಾಜದಲ್ಲಿ ಅಸಹಿಷ್ಣುತೆ ಬೆಳೆಯಲು ಕಾರಣವಾಗಿದೆ ಎಂದರು.

ಯಾವುದು ಮೌಢ್ಯ ಎಂಬುವ ವಿಚಾರದಲ್ಲಿ ಸ್ಪಷ್ಟತೆ ಸರ್ಕಾರ ಮೊದಲು ಹೊಂದಲಿ. ನಂತರ ಸರ್ಕಾರ ಮೌಢ್ಯ ವಿರೋಧಿ ಕಾನೂನು ಜಾರಿಗೆ ತರಲಿ. ಗಂಟೆ ಬಾರಿಸುವುದು, ಪೂಜೆ ಮಾಡುವುದು, ಕುಂಕುಮ ಬೊಟ್ಟು ಇಟ್ಟುಕೊಳ್ಳುವುದು. ಇಂತಹ ಆಚರಣೆಗಳೆಲ್ಲೂವ ಮೌಢ್ಯ ಎನ್ನುವುದಾದರೆ ಹೇಗೆ? ಮೌಢ್ಯ ವಿರೋಧಿ ಕಾನೂನು ಜಾರಿಗೆ ಯಾರ ವಿರೋಧವೂ ಇಲ್ಲ. ಆದರೆ ಮೌಢ್ಯದ ವ್ಯಾಖ್ಯೆ ಸ್ಪಷ್ಟವಾಗಿರಲಿ, ಯಾವ ಆಚರಣೆಗಳು ಮೌಢ್ಯ ಎಂಬುದು ಸ್ಪಷ್ಟವಾಗಲಿ, ನಂತರ ಈ ಬಗ್ಗೆ ವಿಸ್ತೃತ ಚರ್ಚೆಯಾಗಲಿ, ಆ ನಂತರ ಸರ್ಕಾರ ಕಾನೂನು ಜಾರಿಗೆ ತರಲಿ ಎಂದರು.

ಮಂದಿರಗಳಲ್ಲಿ ದಲಿತರಿಗೆ ಪ್ರವೇಶದ ವಿಚಾರದಲ್ಲಿ ಪ್ರತಿಕ್ರಿಯಿಸಿದ ಶ್ರೀಗಳು, ದಲಿತರಿಗೆ ಮಂದಿರ ಪ್ರವೇಶ ಕಲ್ಪಿಸಲು ತಾವು ಸದಾ ಬದ್ಧ. ಉಡುಪಿಯಲ್ಲೂ ಈ ಕೆಲಸ ಮಾದ್ದೇವೆ. ಕಲಬುರಗಿಯಲ್ಲೂ  ತಾವು ಜಾತಿ ಬೇಧ ಮಾಡದಂತೆ ಎಲ್ಲಾ ಜಾತಿ ಸಮುದಾಯದವರ ಮನೆಗಳಿಗೆ ಭೇಟಿ ಕೊಟ್ಟು ಪಾದಪೂಜೆ, ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾಗಿ ಹೇಳಿದ ಶ್ರಿಗಳು, ವಿನಾಕಾರಣ ಆರೋಪಗಳನ್ನು ಯಾರೂ ಮಾಡಲು ಹೋಗಬಾರದು ಎಂದರು.

SCROLL FOR NEXT