ಬೆಂಗಳೂರು: ಸಮಾಜ ಕಲ್ಯಾಣ ಇಲಾಖೆಯ ಟೆಂಡರ್ ಪ್ರಕ್ರಿಯೆಯಲ್ಲಿ ಲಂಚ ಸ್ವೀಕಾರ ಆರೋಪ ಸಂಬಂಧ ಯಾವುದೇ ಸುದ್ದಿಯನ್ನು ಬಿತ್ತರಿಸಬಾರದು ಎಂದು ನಗರದ ಸೆಷನ್ಸ್ ನ್ಯಾಯಾಲಯ ಶನಿವಾರ ಮಧ್ಯಂತರ ಆದೇಶ ನೀಡಿದೆ.
ಲಂಚ ಸ್ವೀಕರಿಸುವ ಆರೋಪದಲ್ಲಿ ತಮ್ಮ ಬಗ್ಗೆ ಸುದ್ದಿಯನ್ನು ಬಿತ್ತರಿಸುತ್ತಿದ್ದು, ಇದರಿಂದ ನನ್ನ ಘನತೆಗೆ ಧಕ್ಕೆ ತರಲಾಗುತ್ತಿದೆ ಎಂದು ಸಚಿವ ಆಂಜನೇಯ ಅವರ ಪತ್ನಿ ವಿಜಯಾ ನ್ಯಾಯಾಯದ ಮೊರೆ ಹೋಗಿದ್ದರು.ವಿಚಾರಣೆ ನಡೆಸಿದ ಸೆಷನ್ಸ್ ನ್ಯಾಯಾಲಯ, ಸಚಿವ ಆಂಜನೇಯ ಹಾಗೂ ಹಾಗೂ ಅವರ ಪತ್ನಿ ವಿಜಯಾ ವಿರುದ್ಧದ ಯಾವುದೇ ಸುದ್ದಿಯನ್ನು ಮಾಧ್ಯಮಗಳಲ್ಲಿ ಬಿತ್ತರಿಸಬಾರದು ಎಂದು ಮಧ್ಯಂತರ ಆದೇಶ ನೀಡಿದೆ.