ದೊಡ್ಡಬಳ್ಳಾಪುರ: ನಗರ ರೈಲ್ವೇ ನಿಲ್ದಾಣದ ಎರಡನೇ ಫ್ಲಾಟ್ ಫಾರಂ ಬಳಿಯ ರೈಲ್ವೇ ಹಳಿಗಳ ಮೇಲೆ ಅಪರಿಚಿತ ಶವ ಪತ್ತೆಯಾಗಿದೆ.
ಮೃತ ವ್ಯಕ್ತಿ ಸುಮಾರು ಅರವತ್ತುವರ್ಷ ವಯಸ್ಸು, ಕಪ್ಪು ಮತ್ತು ಬಿಳಿ ಮಿಶ್ರಿತ ಕೂದಲು, ಐದು ಅಡಿ ಎತ್ತರ ಹೊಂದಿದ್ದಾನೆ. ಬಿಸ್ಕೆಟ್‍ಬಣ್ಣದ ಶರ್ಟ್ ಮತ್ತು ಬಿಳಿ ಪಂಚೆ ಧರಿಸಿದ್ದಾನೆ.
ಎಣ್ಣೆಗೆಂಪು ಮೈ ಬಣ್ಣ ಸಾಧಾರಣ ಮೈಕಟ್ಟು ಹೊಂದಿದ್ದಾರೆ. ಮೃತನ ಸಂಬಂಧಿಗಳು ಯಾರದರೂ ಇದ್ದಲ್ಲಿ ದೊಡ್ಡಬಳ್ಳಾಪುರ ರೈಲ್ವೇ ಪೊಲೀಸ್ ಠಾಣೆ ಯಲ್ಲಿಸಂಪರ್ಕಿಸಬಹುದು. ರೈಲ್ವೇ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.