ಬೆಂಗಳೂರು: ಪ್ರಸಕ್ತ ಸಾಲಿನ (2015) ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪ್ರಕಟಗೊಂಡಿದ್ದು, ಹಿರಿಯ ಪತ್ರಕರ್ತ ಕೆ.ಸುಬ್ರಹ್ಮಣ್ಯ (ಡೆಕ್ಕನ್ ಹೆರಾಲ್ಡ್) ವಾರ್ಷಿಕ ವಿಶೇಷ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಮಾಧ್ಯಮ ಅಕಾಡೆಮಿ ಅಧ್ಯಕ್ಷ ಎಂ.ಎ. ಪೊನ್ನಪ್ಪ ಅಧ್ಯಕ್ಷತೆಯಲ್ಲಿ ನಡೆದ ಅಕಾಡೆಮಿ ಸರ್ವ ಸದಸ್ಯರ ಸಭೆಯಲ್ಲಿ ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ಅಂತಿಮಗೊಳಿಸಲಾಯಿತು. ಪ್ರಶಸ್ತಿ ಪುರಸ್ಕೃತರಿಗೆ ರು. 20 ಸಾವಿರ ನಗದು, ಪ್ರಶಸ್ತಿ ಫಲಕ ನೀಡಿ ಸನ್ಮಾನಿಸಲಾಗುವುದು.
ಸಮಾರಂಭದ ಜೊತೆಯಲ್ಲಿ ವಿವಿಧ ವಿಷಯಗಳ ಕುರಿತು 30 ಪುಸ್ತಕಗಳನ್ನು ಹೊರತರಲು ಉದ್ದೇಶಿಸಲಾಗಿದೆ. ಪ್ರಶಸ್ತಿ ವಿತರಣಾ ಸಮಾರಂಭವು ನ. 20ರಂದು ನಡೆಯಲಿದೆ. `ಕನ್ನಡಪ್ರಭ'ದಲ್ಲಿ ದೀರ್ಘಕಾಲ ಕಲಾವಿದರಾಗಿ ಸೇವೆ ಸಲ್ಲಿಸಿದ್ದ ಪ.ಸ.ಕುಮಾರ್, ಪತ್ರಿಕೆಯ ರಾಮನಗರ ಜಿಲ್ಲಾ ವರದಿಗಾರ ಮತ್ತಿಕೆರೆ ಜಯರಾಮು ಸೇರಿದಂತೆ 40 ಮಂದಿ ಈ ಸಲದ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಎನ್.ಎಸ್. ಶಂಕರ್ ಬೆಂಗಳೂರು, ಚಿದಂಬರ ಬೈಕಂಪಾಡಿ - ಮಂಗಳೂರು, ಪಿ. ಸಂಪತ್ ಕುಮಾರ್ (ಪ.ಸ. ಕುಮಾರ್)- ಬೆಂಗಳೂರು, ಜಿ.ಯು.ಭಟ್- ಕಾರವಾರ, ಆರ್. ಎಲ್. ವಾಸುದೇವರಾವ್- ಮಂಡ್ಯ, ಆನಂದ ಯಮನೂರು -ಹುಬ್ಬಳ್ಳಿ ಧಾರವಾಡ, ಬಿ.ಎಸ್. ಸತ್ಯನಾರಾಯಣ- ಬೆಂಗಳೂರು, ಕೆ. ಪ್ರಹ್ಲಾದ ರಾವ್- ಕೋಲಾರ, ಸಿ.ಎಂ.ಮುನಿಯಪ್ಪ ಕೋಲಾರ, ಕೆ. ಸತ್ಯನಾರಾಯಣ-ರಾಯಚೂರು, ಎಸ್. ಗಿರೀಶ್ ಬಾಬು-ಬೆಂಗಳೂರು, ಪಿ.ಜೆ. ಚೈತನ್ಯ ಕುಮಾರ್-ಮಂಡ್ಯ, ಖಾಜಿ ಅಲಿಯೊದ್ದಿನ್-ಬೀದರ್, ಜಿ.ಡಿ.ಯತೀಶ್ ಕುಮಾರ್ -ಬೆಂಗಳೂರು, ಟಿ.ಪಿ. ರಮೇಶ್- ಕೊಡಗು, ಟಿ.ಜಿ. ಶೆಟ್ಟಿ -ಮಂಗಳೂರು, ಮುತ್ತು ನಾಯ್ಕರ- ಗದಗ, ಅಮರಪ್ಪ ಗುಂಡಪ್ಪ ಕಾರಟಗಿ-ಕೊಪ್ಪಳ(ಕನ್ನಡಪ್ರಭದಲ್ಲಿ 1971ರಿಂದಲೂ ವರದಿಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ), ನೀಳಾ ಎಂ.ಎಚ್ - ಮೈಸೂರು, ಟಿ.ಎನ್. ಷಣ್ಮುಖ - ಚಿತ್ರದುರ್ಗ, ಪ್ರಹ್ಲಾದ ರಂಗಾಚಾರ್ಯ ಪಂಡರಿ-ಹುಬ್ಬಳ್ಳಿ, ರಾಧಾ ಹಿರೇಗೌಡರ್- ಕಾರವಾರ, ಜಿ. ಇದ್ರಕುಮಾರ್-ತುಮಕೂರು, ಮಳಲಿ ನಟರಾಜ್ ಕುಮಾರ್- ಮೈಸೂರು, ಕೆ. ವೆಂಕಟೇಶ್- (ಛಾಯಾಗ್ರಾಹಕ) ಬೆಂಗಳೂರು, ಎಂ.ಎಸ್.ಚಂದ್ರಯ್ಯ- ಚಿಕ್ಕಮಗ ಳೂರು, ಸಂಜೀವ ಕುಲಕರ್ಣಿ- ಯಾದಗಿರಿ,
ಟಿ.ವಿ. ರಾಜೇಶ್ವರ್ - ಮೈಸೂರು, ಬಿ.ಎನ್.ರಮೇಶ್- ಬೆಂಗಳೂರು, ಬಿ.ಎನ್. ಮಲ್ಲೇಶ್- ದಾವಣಗೆರೆ, ಆರ್. ಕೃಷ್ಣಕುಮಾರ್- ಮೈಸೂರು, ಬಾಬು-ವಾಲಿ- ಬೀದರ್, ಕೆ.ಎಸ್. ಸೋಮಶೇಖರ್ (ಸೋಮಣ್ಣ)- ತಿಪಟೂರು, ಎಂ. ಮಂಜುನಾಥ ಬಮ್ಮನಕಟ್ಟಿ - ಗದಗ, ಎಂ.ಆರ್. ಜಯರಾಮು- ರಾಮನಗರ, ಟಿ. ಅಬ್ದುಲ್ ಹಲೀಮ್ ಮನ್ಸೂರ್- ಬೆಂಗಳೂರು,
ಕೆ.ಪಿ. ಮಂಜುನಾಥ ಸಾಗರ್- ಮಂಗಳೂರು, ನಿಂಗಪ್ಪ ಚಾವಡಿ - ಹಾವೇರಿ, ಆರ್.ಪಿ. ಸಾಂಬಸದಾಶಿವ ರೆಡ್ಡಿ- ಪಾವಗಡ, ಟಿ.ಎಸ್. ಗಟ್ಟಿ -ತುಮಕೂರು. ಅತ್ಯುತ್ತಮ ಜಿಲ್ಲಾ ಪತ್ರಿಕೆಗೆ ನೀಡುವ ಆಂದೋಲನ ಪ್ರಶಸ್ತಿಯು ಶಿರಸಿಯ `ಲೋಕ ಧ್ವನಿ' ಪತ್ರಿಕೆಗೆ ಸಂದಿದೆ. ಸಾಮಾಜಿಕ ಸಮಸ್ಯೆ ಲೇಖನಕ್ಕೆ ಅಭಿಮಾನಿ ಪ್ರಶಸ್ತಿಗೆ ಸುಭಾಷ ಬಣಗಾರ ಮತ್ತು ಕನ್ನಡಪ್ರಭದಲ್ಲಿ ಪ್ರಕಟಗೊಂಡ ಆರ್ ಮಂಜುನಾಥ್ ಅವರ 'ಸಂಸ್ಕರಿಸಿದ ಕೆರೆಗಳ ಸೇರುವ ವಿಷಜಲ' ಲೇಖನಕ್ಕೆ ಮೈಸೂರು ದಿಗಂತ ಪ್ರಶಸ್ತಿ ಸಂದಿದೆ.