ಬೆಂಗಳೂರು: ``ಲೇಖಕಿ ಎಚ್.ಎಸ್. ಪಾರ್ವತಿ ಅವರು ಯಾವುದೇ ಕಾದಂಬರಿ ಬರೆದರೂ ಅದು ಸ್ತ್ರೀವಾದದಲ್ಲೇ ಅಂತ್ಯವಾಗುತ್ತಿತ್ತು,'' ಎಂದು ಹಿರಿಯ ರಂಗಭೂಮಿ ನಟಿ ವಿಜಯಮ್ಮ ಅಭಿಪ್ರಾಯಪಟ್ಟರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಭಾರತ ಯಾತ್ರಾ ಕೇಂದ್ರದ ಸಂಯುಕ್ತಾಶ್ರಯದಲ್ಲಿ ಸ್ವಾತಂತ್ರ್ಯ ಉದ್ಯಾನವನದಲ್ಲಿ ಭಾನುವಾರ ಆಯೋಜಿಸಿದ್ದ ದಿ. ಲೇಖಕಿ ಎಚ್.ಎಸ್. ಪಾರ್ವತಿ ಅವರಿಗೆ ಶ್ರದಾಟಛಿಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ``ಹೋರಾಟಗಳಿಗೆ ಯಾವುದೇ ಮಹಿಳೆ ಮನೆಬಿಟ್ಟು ಹೊರ ಬರದಿದ್ದ ಸಂದರ್ಭದಲ್ಲಿ ಪಾರ್ವತಿ ಅವರು ಮುಂಚೂಣಿಯಲ್ಲಿರುತ್ತಿದ್ದರು. ಗೋಕಾಕ್ ಚಳವಳಿ ಆರಂಭವಾದಾಗ ತಾವು ಮತ್ತು ಪಾರ್ವತಿ ಭಾಗವಹಿಸಿದ್ದೆವು. ಸ್ತ್ರೀವಾದದ ಬಗ್ಗೆ ಅವರಿಗೆ ಕಾಳಜಿ ಇತ್ತು. ಡಾ.ಎಸ್.ಎಲ್. ಭೈರಪ್ಪ ಅವರ ಬಗೆಗೆ ಎಷ್ಟೋ ಲೇಖಕಿಯರಿಗೆ ವಿರೋಧವಿದೆ.
ಅವರಲ್ಲಿ ಪಾರ್ವತಿ ಕೂಡ ಒಬ್ಬರು. ಕೇಂದ್ರ ಸಾಹಿತ್ಯ ಅಕಾಡೆಮಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಓರ್ವ ಸಾಹಿತಿ ಕಾದಂಬರಿಕಾರರ ಬಗ್ಗೆ ಮಾತನಾಡುವಾಗ ಭೈರಪ್ಪನವರನ್ನು ಮರೆತಿದ್ದರು. ಆಗ ಪಾರ್ವತಿ ಎದ್ದು ನಿಂತು ಭೈರಪ್ಪನವರ ಹೆಸರನ್ನು ಹೇಗೆ ಮರೆತಿರಿ ಎನ್ನುವ ಮೂಲಕ ಇತಿಹಾಸದ ಪುಟದಲ್ಲಿ ದಾಖಲಾಗುವಂತೆ ಮಾಡಿದ್ದರು ಎಂದು ಸ್ಮರಿಸಿಕೊಂಡರು.
ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಡಾ.ವಸುಂದರಾ ಭೂಪತಿ ಮಾತನಾಡಿ, ಲೇಖಕಿಯರ ಸಂಘದ ಸಂಸ್ಥಾಪಕ ಅಧ್ಯಕ್ಷೆಯಾದ ಪಾರ್ವತಿ ಅವರು ಕಳೆದ ಮೂರು ವರ್ಷದ ಹಿಂದೆ ರು.60 ಸಾವಿರ ನೀಡಿ ದತ್ತಿ ನಿಧಿ ಸ್ಥಾಪಿಸಿದ್ದರು. ನಂತರ ಪುನಃ ರು.40 ಸಾವಿರ ಕೊಟ್ಟರು. ಈ ಹಣದಿಂದ ಮುಂದಿನ ಬಾರಿ ಲೇಖಕಿಯರಿಗೆ ಪ್ರಶಸ್ತಿ ನೀಡಲಾಗುವುದು,'' ಎಂದು ತಿಳಿಸಿದರು. ಕಿರುತೆರೆ ನಟ ಸುಂದರರಾಜ್, ಸಮಾಜವಾದಿ ಕೆ.ವಿ. ನಾಗರಾಜಮೂರ್ತಿ ಮತ್ತಿತ್ತರರು ಇದ್ದರು.