ವೀರಪ್ಪ ಮೊಯ್ಲಿ 
ಜಿಲ್ಲಾ ಸುದ್ದಿ

ಪ್ರಶಸ್ತಿ ವಾಪಸ್ ಮಾಡುವುದು ಅವರವರ ವೈಯಕ್ತಿಕ ಅಭಿಪ್ರಾಯ: ವೀರಪ್ಪ ಮೊಯ್ಲಿ

ಸಾಹಿತಿಗಳು, ವಿಜ್ಞಾನಿಗಳು ಪ್ರಶಸ್ತಿ ವಾಪಸ್ ಮಾಡುವುದು ಅವರವರ ವೈಯಕ್ತಿಕ ಅಭಿಪ್ರಾಯ. ಅದು ಸಾಮೂಹಿಕ ಪ್ರತಿಕ್ರಿಯೆ ಅಲ್ಲ. ಅವರು ಆ ಮಟ್ಟಕ್ಕೆ ಇಳಿಯುವುದು...

ಮಂಗಳೂರು: ಬಾಹುಬಲಿ ಮಹಾಕಾವ್ಯವನ್ನು ಒಂದು ಹಂತದಲ್ಲಿ ಬರೆದು ಮುಗಿಸಿದ್ದೇನೆ. ಈಗ ಈ ಕುರಿತಾಗಿ ಸಂಶೋಧನೆಯ ಹಂತದಲ್ಲಿದ್ದೇನೆ'' ಎಂದು ಮಾಜಿ ಮುಖ್ಯಮಂತ್ರಿ, ಚಿಕ್ಕಬಳ್ಳಾಪುರ ಲೋಕಸಭಾ ಸದಸ್ಯ ಎಂ. ವೀರಪ್ಪ ಮೊಯ್ಲಿ ಹೇಳಿದ್ದಾರೆ. ಶ್ರವಣಬೆಳಗೊಳದ ಸ್ವಾಮೀಜಿಯವರು ಬಾಹುಬಲಿ ಮಹಾಕಾವ್ಯವನ್ನು ರಚಿಸುವಂತೆ ಮೂರು ವರ್ಷಗಳ ಹಿಂದೆ ತನ್ನಲ್ಲಿ ಹೇಳಿದಾಗ ನಿರಾಕರಿಸಿದ್ದೆ. ಆದರೆ ಇದೀಗ ಒಂದು ಹಂತದಲ್ಲಿ ಬರೆದಾಗಿದೆ. 2018ರ ವೇಳೆಗೆ ಬಿಡುಗಡೆಗೆ ಸಿದ್ಧ ಗೊಳ್ಳಲಿದೆ ಎಂದು ತಿಳಿಸಿದರು.

ಮಂಗಳೂರಿನ ದೇವಾಡಿಗರ ಸಂಘದ ಭಾನುವಾರ ಆಯೋಸಿದ್ದ `ನವತಿ ಸಂಭ್ರಮ' ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಶ್ರೀರಾಮಚಂದ್ರನ ಬಳಿಕ ಪ್ರಜೆಗಳೇ ಅಯೋಧ್ಯೆಯನ್ನು ಆಳಿದರು. ಈಗ ಮನುಷ್ಯನಿಗೆ ಮನುಷ್ಯನೇ ವೈರಿಯಾಗಿದ್ದಾನೆ. ಮನುಷ್ಯರ ನಡುವಿನ ಅಸೂಯೆಯಿಂದಾಗಿಯೇ ಮಹಾಯುದ್ಧಗಳು ನಡೆದಿವೆ, ನಡೆಯಲಿವೆ. ಅಸೂಯೇಯನ್ನು  ಮೀರಿ ನಿಲ್ಲುವ ನಿಟ್ಟಿನಲ್ಲಿ  ಯೋಚಿಸಲಾಗಿದೆ ಎಂದರು.

ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ, ಅರಣ್ಯ ಸಚಿವ ರಮಾನಾಥ ರೈ, ಸಂಸದ ನಳಿನ್ ಕುಮಾರ್ ಕಟೀಲು, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಶಾಸಕ ಜೆ.ಆರ್. ಲೋಬೋ, ವೀರಪ್ಪ ಮೊಯ್ಲಿ ಅವರ ಪತ್ನಿ ಮಾಲತಿ ಮೊಯ್ಲಿ ಇದ್ದರು.

ಸಾಹಿತಿಗಳು, ವಿಜ್ಞಾನಿಗಳು ಪ್ರಶಸ್ತಿ ವಾಪಸ್ ಮಾಡುವುದು ಅವರವರ ವೈಯಕ್ತಿಕ ಅಭಿಪ್ರಾಯ. ಅದು ಸಾಮೂಹಿಕ ಪ್ರತಿಕ್ರಿಯೆ ಅಲ್ಲ. ಅವರು ಆ ಮಟ್ಟಕ್ಕೆ ಇಳಿಯುವುದು ಒಳ್ಳೆಯ ಬೆಳವಣಿಗೆ ಅಲ್ಲ. ಉಳಿದ ಸಾಹಿತಿಗಳು ಪ್ರಶಸ್ತಿ ವಾಪಸ್ ಮಾಡಿದ್ದಕ್ಕೂ ನನಗೂ ಸಂಬಂಧ ಇಲ್ಲ. ನನಗೆ ಪ್ರಶಸ್ತಿ ನೀಡಿದ್ದು ಖಾಸಗಿ ಸಂಸ್ಥೆ. ಸರ್ಕಾರ ಅಲ್ಲ.
●● ಎಂ.ವೀರಪ್ಪ ಮೊಯ್ಲಿ ಸಂಸದ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ