ಜಿಲ್ಲಾ ಸುದ್ದಿ

ಬಾಗಿಲೇ ಇಲ್ಲದ ಮಹಿಳಾ ಹಾಸ್ಟೆಲ್

Shilpa D

ವಿಧಾನ ಸಭೆ: ಸಮಾಜಕಲ್ಯಾಣ ಇಲಾಖೆಯ ಎಡವಟ್ಟು ಬೆಳಗಾವಿಯ ವಿದ್ಯಾರ್ಥಿನಿ ನಿಲಯದ ಸ್ನಾನಗೃಹಕ್ಕೆ ಬಾಗಿಲೇ ಇಲ್ಲ, ಒಬ್ಬ ವಿದ್ಯಾರ್ಥಿನಿ ಸ್ನಾನಕ್ಕೆಂದು
ತೆರಳಿದರೆ ಮತ್ತೊಬ್ಬರು ದ್ವಾರದ ಬಳಿ ಕಾಯಬೇಕಾದ ಪರಿಸ್ಥಿತಿ ಇದೆ. ಹಾಸ್ಟೆಲ್ ಸಮಸ್ಯೆ ಬಗ್ಗೆ ಪ್ರಸ್ತಾಪಿಸಿದರೆ ಟೀಕೆ ಮಾಡುತ್ತೀರಾ ಎಂದು ಬಿಜೆಪಿ ಸದಸ್ಯ ಕೋಟ ಶ್ರೀನಿವಾಸ ಪೂಜಾರಿಯವರು ಸಮಾಜಕಲ್ಯಾಣ ಸಚಿವರನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆಯಿತು.

ಪ್ರಶ್ನೋತ್ತರ ವೇಳೆಯಲ್ಲಿ ಸದಸ್ಯ ವಿ.ಸೋಮಣ್ಣ ಅವರೊಂದಿಗೆ ಕೋಟ ಶ್ರೀನಿವಾಸ ಪೂಜಾರಿಯವರು ಹಾಸ್ಟೆಲ್‍ಗಳ ಸಮಸ್ಯೆ ಕುರಿತು ಪ್ರಸ್ತಾಪಿಸಿದರು. ಈ ವೇಳೆ ಸಚಿವರು ಕೋಟ ಶ್ರೀನಿವಾಸ ಪೂಜಾರಿ ಅವರ ಮಾತನ್ನು ಹಗುರವಾಗಿ ಪರಿಗಣಿಸಿದರು. ಇದರಿಂದ ಕೆರಳಿ ಸಚಿವರನ್ನು ತರಾಟೆಗೆ ತೆಗೆದುಕೊಂಡರು.

ನೀವು ಗ್ರಾಮ ವಾಸ್ತವ್ಯ ಮಾಡುತ್ತಿರುವುದು ಸ್ವಾಗತಾರ್ಹವಾದರೂ, ಹಾಸ್ಟೆಲ್ ನಲ್ಲಿ ಹೋಗಿ ನಿದ್ದೆ ಮಾಡಿ ಬಂದಾಗ ನೈಜ ಚಿತ್ರಣ ದೊರೆಯುತ್ತದೆ ಎಂದರು. ಈಶ್ವರಪ್ಪ ಮಾತನಾಡಿ, ನಾವು ಹಾಸ್ಟೆಲ್ ಗಳ ಸಮೀಕ್ಷೆ ನಡೆಸಿ ವರದಿ ನೀಡುತ್ತೇವೆ. ನಂತರ ನೀವು ಜನಪ್ರತಿನಿಧಿಗಳು, ಅಧಿಕಾರಿಗಳ ಸಭೆ ಕರೆಯಿರಿ, ಸಮಸ್ಯೆ ಪರಿಹಾರಕ್ಕೆ ಎಲ್ಲರೂ ಒಟ್ಟಾಗಿ ಶ್ರಮಿಸೋಣ ಎಂದರು.

SCROLL FOR NEXT